ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು, ವಯಸ್ಕರು ಗಾಯಗೊಂಡಿರುವ ಘಟನೆಗಳು ನಡೆದಿದ್ದವು. ಆದರೆ ಇದೀಗ ಬೆಂಗಳೂರಲ್ಲಿ ಅಮಾನವೀಯ ಕೃತ್ಯ ನಡೆದಿದ್ದು ಬೀದಿನಾಯಿಯ ಮೇಲೆ ರಾಕ್ಷಸನೊಬ್ಬ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ವರದಿಯಾಗಿದೆ.
ಹೌದು ಬೀದಿ ನಾಯಿಯ ಮೇಲೆ ಮಚ್ಚಿನಿಂದ ಎಳೆನೀರು ವ್ಯಾಪಾರಿ ಒಬ್ಬ ಹಲ್ಲೆ ಮಾಡಿದ್ದಾನೆ. ಎಳನೀರು ಕೊಚ್ಚುವ ಮುಚ್ಚಿನಿಂದ ನಾಯಿಯ ಮೇಲೆ ದಾಳಿ ಮಾಡಿದ್ದಾನೆ. ಬೆಂಗಳೂರಿನ ಕೆಆರ್ ಪುರ ಠಾಣ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ನಾಯಿ ಮೇಲಿನ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








