ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಸಾಂಬಾರ್ ಮಾಡಿಲ್ಲವೆಂದು ತಂದೆ ಬೈಯ್ದಿದಕ್ಕೆ ಪುತ್ರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಂಗಳೂರಿನ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಸೌಜನ್ಯ ಪೂಜಾರಿ (22) ಎನ್ನುವ ಯುವತಿ ನೇಣಿಗೆ ಶರಣಾಗಿದ್ದಾಳೆ.
ನಿನ್ನೆ ತರಕಾರಿ ತಂದು ಸಾಂಬರ್ ಮಾಡಲು ಸೌಜನ್ಯ ತಂದೆ ನಟೇಶ್ ಹೇಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದಾಗ ಸಾಂಬರ್ ಮಾಡಿಲ್ಲವೆಂದು ತಂದೆ ನಟೇಶ್ ಸೌಜನ್ಯಾಗೆ ಬೈದಿದ್ದಾರೆ. ಬಳಿಕ ನಟೇಶ್ ಪಕ್ಕದ ಮನೆಗೆ ಸಾಂಬಾರ್ ತರಲು ತೆರಳಿದ್ದಾಗ ಸೌಜನ್ಯ ನೇಣಿಗೆ ಶರಣಾಗಿದ್ದಾಳೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








