ಬೆಂಗಳೂರು : ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಕ್ಕೆ ಅಪಮಾನ ಮಾಡಿದ ಪ್ರಕರಣದಲ್ಲಿ ಬಾಲಿ ವುಡ್ ನಟ ರಣವೀರ್ಸಿಂಗ್ ಬೇಷರತ್ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ಶನಿವಾರ ರದ್ದುಗೊಳಿಸಿದೆ.
ನಟನಿಗೆ ನಾಲ್ಕು ವಾರಗಳಲ್ಲಿ ಚಾವುಂಡಿ ದೈವ ಸನ್ನಿದಾನಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದನ್ಯಾಯ ಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಿಲೇವಾರಿ ಮಾಡಿತು. ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ಚಾವುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪ ಸಂಬಂಧ ಖಾಸಗಿ ದೂರು, ಬೆಂಗಳೂರಿನ ಹೈಗೌಂಡ್ಸ್ ಠಾಣೆ ಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಪಡಿಸುವಂತೆ ಕೋರಿ ರಣವೀರ್ ಸಿಂಗ್ ಅರ್ಜಿ ಸಲ್ಲಿಸಿದ್ದರು.
ಚಾವುಂಡಿ ಬೆಟ್ಟಕ್ಕೆ ಹೋಗಲು ರಣವೀರ್ಗೆ ಭದ್ರತಾ ಸಮಸ್ಯೆ ಇದೆ ಎಂದು ನಟನ ಪರ ವಕೀ ಲರುಹೇಳಿದಾಗ, ದೂರುದಾರರ ಪರ ವಕೀಲ ಸಿ.ಜಿ ಮಲೆಯಾಳ್ ‘ಪೊಲೀಸರು, ರಕ್ಷಣೆ ನೀಡುತ್ತಾರೆ’ ಎಂದು ಸಮರ್ಥನೆ ನೀಡಿದರು. ಮಧ್ಯಪ್ರವೇಶಿಸಿದ ನ್ಯಾ.ನಾಗಪ್ರಸನ್ನ, ‘ಪೊಲೀಸರು ಲಿವ್ -ಇನ್, ವೈವಾಹಿಕ ಸಂಬಂಧಿತ ಪ್ರಕಣಗಳ ಹಿಂದೆ ಬಿದ್ದಿದ್ದಾರೆ, ನೈಜ ಅಪರಾಧಗಳ ತನಿಖೆ ನಡೆಸುತ್ತಿಲ್ಲ’ ಎಂದು ಬೇಸರಿಸಿದರು.








