ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದ ವರದಿಗಾರರ ಸಂಘದ (WHCA) ವಾರ್ಷಿಕ ಔತಣಕೂಟದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಂತೆಯೇ, ವಾಷಿಂಗ್ಟನ್‌ನ ಪ್ರಮುಖ ಹೋಟೆಲ್ ಒಂದರ ಗೋಡೆಯ ಮೇಲೆ ವಿವಾದಾತ್ಮಕ ಚಿತ್ರಗಳನ್ನು ಪ್ರಕ್ಷೇಪಿಸುವ (Projected) ಮೂಲಕ ಪ್ರತಿಭಟನೆ ನಡೆಸಲಾಗಿದೆ.
ಟ್ರಂಪ್ ಅವರು ಔತಣಕೂಟದಲ್ಲಿ ಭಾಗವಹಿಸುವ ಹೋಟೆಲ್‌ನ ಮುಂಭಾಗದ ಗೋಡೆಯ ಮೇಲೆ, ಲೈಂಗಿಕ ಅಪರಾಧದ ಆರೋಪಿಯಾಗಿದ್ದ ದಿವಂಗತ ಜೆಫ್ರಿ ಎಪ್ಸ್ಟೀನ್ ಜೊತೆಗಿನ ಟ್ರಂಪ್ ಅವರ ಹಳೆಯ ಫೋಟೋಗಳನ್ನು ಬೃಹತ್ ಗಾತ್ರದಲ್ಲಿ ಪ್ರದರ್ಶಿಸಲಾಯಿತು.
ಪ್ರತಿಭಟನಾಕಾರರು ಈ ಫೋಟೋಗಳ ಜೊತೆಗೆ “ಟ್ರಂಪ್ ಮತ್ತು ಎಪ್ಸ್ಟೀನ್” ಎಂಬ ಬರಹಗಳನ್ನು ಪ್ರದರ್ಶಿಸಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿವೆ.
ಶ್ವೇತಭವನದ ವರದಿಗಾರರೊಂದಿಗೆ ಅಧ್ಯಕ್ಷರು ನಡೆಸುವ ಔತಣಕೂಟವು ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಇಂತಹ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ಟ್ರಂಪ್ ಆಡಳಿತಕ್ಕೆ ಮುಜುಗರ ತಂದಿದೆ.
NEW: In honor of White House Correspondents Weekend, this video message highlighting Trump’s relationship with Epstein is being displayed on the side of the building where Trump will attend the dinner. pic.twitter.com/qxPfuC0dMc
— Aaron Parnas (@AaronParnas) April 25, 2026








