Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಜಾಗವಿಲ್ಲ, ಅಭಿವೃದ್ಧಿಗೆ ಹಣದ ಕೊರತೆಯಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟನೆ

25/04/2026 4:44 PM

ದಶಕಗಳ ಶೈಕ್ಷಣಿಕ ಒಡನಾಟಕ್ಕೆ ಗ್ರಂಥರೂಪಿ ಕೃತಜ್ಞತೆ: ಶಾಸಕ ಬೇಳೂರು ಅವರಿಂದ ‘ಪುರದ ಪುಣ್ಯ’ ಲೋಕಾರ್ಪಣೆ!

25/04/2026 4:35 PM

ಸಾಗರದಲ್ಲಿ ಲವ್ ಜಿಹಾದ್, ಮತಾಂತರ ವಿರೋಧಿಸಿ ವಿಎಚ್‌ಪಿ, ಭಜರಂಗ ದಳದಿಂದ ಬೃಹತ್ ಪ್ರತಿಭಟನೆ

25/04/2026 4:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಶಕಗಳ ಶೈಕ್ಷಣಿಕ ಒಡನಾಟಕ್ಕೆ ಗ್ರಂಥರೂಪಿ ಕೃತಜ್ಞತೆ: ಶಾಸಕ ಬೇಳೂರು ಅವರಿಂದ ‘ಪುರದ ಪುಣ್ಯ’ ಲೋಕಾರ್ಪಣೆ!
KARNATAKA

ದಶಕಗಳ ಶೈಕ್ಷಣಿಕ ಒಡನಾಟಕ್ಕೆ ಗ್ರಂಥರೂಪಿ ಕೃತಜ್ಞತೆ: ಶಾಸಕ ಬೇಳೂರು ಅವರಿಂದ ‘ಪುರದ ಪುಣ್ಯ’ ಲೋಕಾರ್ಪಣೆ!

By kannadanewsnow0925/04/2026 4:35 PM

ಶಿವಮೊಗ್ಗ: “ಒಂದು ಊರು ಅಭಿವೃದ್ಧಿಯಾಗಿದೆ ಎಂದರೆ ಅಲ್ಲಿನ ರಸ್ತೆ, ಕಟ್ಟಡಗಳಷ್ಟೇ ಸಾಲದು; ಅಲ್ಲಿನ ಶೈಕ್ಷಣಿಕ ವ್ಯವಸ್ಥೆಯೂ ಪ್ರಗತಿಯ ಮಾನದಂಡವಾಗಿರುತ್ತದೆ. ಈ ನಿಟ್ಟಿನಲ್ಲಿ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜು ಕಳೆದ ಐದು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ,” ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ಪ್ರಾಚಾರ್ಯ ಸತ್ಯನಾರಾಯಣ ಕೆ.ಸಿ. ಅವರ ಕುರಿತಾದ ‘ಪುರದ ಪುಣ್ಯ’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹಳೆಯ ವಿದ್ಯಾರ್ಥಿಯ ಹೆಮ್ಮೆ

ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದ ಶಾಸಕರು, “ನಾನು ಈ ಕಾಲೇಜಿನ ಹಳೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಸರ್ಕಾರಿ ಜ್ಯೂನಿಯರ್ ಕಾಲೇಜು ಅನೇಕರಿಗೆ ಶೈಕ್ಷಣಿಕ ನೆಲೆ ನೀಡಿದೆ. ವಿದ್ಯಾರ್ಥಿಗಳ ಜ್ಞಾನಾಸಕ್ತಿಯನ್ನು ಹೆಚ್ಚಿಸುವಲ್ಲಿ ಈ ಸಂಸ್ಥೆಯ ಸಾರ್ಥಕ ಸೇವೆ ಅನನ್ಯವಾದುದು,” ಎಂದರು.

‘ದೊಡ್ಡಿ’ಯಿಂದ ‘ರಾಜ್ಯಕ್ಕೆ ಮಾದರಿ’ಯಾದ ಕಾಲೇಜು

ಒಂದು ಕಾಲದಲ್ಲಿ ಸೌಲಭ್ಯಗಳ ಕೊರತೆಯಿಂದ ‘ದೊಡ್ಡಿ’ ಎಂದು ಕರೆಸಿಕೊಳ್ಳುತ್ತಿದ್ದ ಈ ಕಾಲೇಜು ಇಂದು ರಾಜ್ಯಕ್ಕೆ ಮಾದರಿಯಾಗಿ ಬೆಳೆದು ನಿಂತಿದೆ. ಈ ಪರಿವರ್ತನೆಯ ಹಿಂದೆ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದ ಕಠಿಣ ಶ್ರಮವಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

“ಪ್ರಾಚಾರ್ಯ ಸತ್ಯನಾರಾಯಣ ಅವರು ಕಳೆದ ನಾಲ್ಕು ವರ್ಷಗಳಿಂದ ಕಾಲೇಜಿನ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅವರು ‘ಪುರದ ಪುಣ್ಯ’ ಕೃತಿಯನ್ನು ತಂದಿರುವುದು ಅತ್ಯಂತ ಶ್ಲಾಘನೀಯ,” ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಗಣ್ಯರ ಉಪಸ್ಥಿತಿ

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎ. ಇಂದೂಧರ ಬೇಸೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಚಂದ್ರಪ್ಪ ಎಸ್. ಗುಂಡಪಲ್ಲಿ, ಲೋಕೇಶ್, ಭವ್ಯ ಕೃಷ್ಣಮೂರ್ತಿ, ಉಮೇಶ್, ಬಸವರಾಜ್, ಕೃತಿ ಸಂಪಾದಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಹಾಗೂ ಡಾ. ಉಮೇಶ್ ಎಚ್. ಉಪಸ್ಥಿತರಿದ್ದರು.

ಈ ವೇಳೆ ಉಪನ್ಯಾಸಕಿ ಪದ್ಮಾವತಿ ಭಟ್ ಪ್ರಾರ್ಥಿಸಿದರೇ, ಉಪನ್ಯಾಸಕ ಪರಮೇಶ್ವರಪ್ಪ.ಜಿ ಗಣ್ಯರನ್ನು ಸ್ವಾಗತಿಸಿದರು. ಡಾ.ಅನ್ನಪೂರ್ಣ ಅವರು ಅಭಿನಂದನಾ ಭಾಷಣ ಮಾಡಿದರೇ, ವಿ.ಸಿ ಪಾಟೀಲ್ ನಿರೂಪಿಸಿದರು. ಎಲ್ ಎಂ ಹೆಗಡೆ ಅವರು ನೆರೆದಿದ್ದ ಎಲ್ಲರಿಗೂ ವಂದಿಸಿದರು.

ಸಾಗರದ ಶೈಕ್ಷಣಿಕ ಇತಿಹಾಸದಲ್ಲಿ ಈ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವು ಒಂದು ಅರ್ಥಪೂರ್ಣ ಮೈಲಿಗಲ್ಲಾಗಿ ಮೂಡಿಬಂತು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

ಸಾಗರದಲ್ಲಿ ಲವ್ ಜಿಹಾದ್, ಮತಾಂತರ ವಿರೋಧಿಸಿ ವಿಎಚ್‌ಪಿ, ಭಜರಂಗ ದಳದಿಂದ ಬೃಹತ್ ಪ್ರತಿಭಟನೆ

ಶಾಸಕ ಗೋಪಾಲಕೃಷ್ಣ ಬೇಳೂರು ‘ಮಾಸ್ಟರ್ ಪ್ಲಾನ್’: ಇನ್ಮುಂದೆ ಸಾಗರ ಆಗಲಿದೆ ‘ಹೈಟೆಕ್ ಸಿಟಿ’!

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಜಾಗವಿಲ್ಲ, ಅಭಿವೃದ್ಧಿಗೆ ಹಣದ ಕೊರತೆಯಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟನೆ

25/04/2026 4:44 PM2 Mins Read

ಸಾಗರದಲ್ಲಿ ಲವ್ ಜಿಹಾದ್, ಮತಾಂತರ ವಿರೋಧಿಸಿ ವಿಎಚ್‌ಪಿ, ಭಜರಂಗ ದಳದಿಂದ ಬೃಹತ್ ಪ್ರತಿಭಟನೆ

25/04/2026 4:21 PM2 Mins Read

ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜೊತೆ ವಿವಾಹ: ಇದು ವಿದ್ಯೆ ಕಲಿಸುವ ಗುರುವಿನ ‘ಅವಿದ್ಯಾವಂತ’ ವರ್ತನೆ

25/04/2026 4:18 PM2 Mins Read
Recent News

ಸಾಗರದಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಜಾಗವಿಲ್ಲ, ಅಭಿವೃದ್ಧಿಗೆ ಹಣದ ಕೊರತೆಯಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟನೆ

25/04/2026 4:44 PM

ದಶಕಗಳ ಶೈಕ್ಷಣಿಕ ಒಡನಾಟಕ್ಕೆ ಗ್ರಂಥರೂಪಿ ಕೃತಜ್ಞತೆ: ಶಾಸಕ ಬೇಳೂರು ಅವರಿಂದ ‘ಪುರದ ಪುಣ್ಯ’ ಲೋಕಾರ್ಪಣೆ!

25/04/2026 4:35 PM

ಸಾಗರದಲ್ಲಿ ಲವ್ ಜಿಹಾದ್, ಮತಾಂತರ ವಿರೋಧಿಸಿ ವಿಎಚ್‌ಪಿ, ಭಜರಂಗ ದಳದಿಂದ ಬೃಹತ್ ಪ್ರತಿಭಟನೆ

25/04/2026 4:21 PM

ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜೊತೆ ವಿವಾಹ: ಇದು ವಿದ್ಯೆ ಕಲಿಸುವ ಗುರುವಿನ ‘ಅವಿದ್ಯಾವಂತ’ ವರ್ತನೆ

25/04/2026 4:18 PM
State News
KARNATAKA

ಸಾಗರದಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಜಾಗವಿಲ್ಲ, ಅಭಿವೃದ್ಧಿಗೆ ಹಣದ ಕೊರತೆಯಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟನೆ

By kannadanewsnow0925/04/2026 4:44 PM KARNATAKA 2 Mins Read

ಶಿವಮೊಗ್ಗ: “ಶರಾವತಿ ಹಿನ್ನೀರಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಮತ್ತು…

ದಶಕಗಳ ಶೈಕ್ಷಣಿಕ ಒಡನಾಟಕ್ಕೆ ಗ್ರಂಥರೂಪಿ ಕೃತಜ್ಞತೆ: ಶಾಸಕ ಬೇಳೂರು ಅವರಿಂದ ‘ಪುರದ ಪುಣ್ಯ’ ಲೋಕಾರ್ಪಣೆ!

25/04/2026 4:35 PM

ಸಾಗರದಲ್ಲಿ ಲವ್ ಜಿಹಾದ್, ಮತಾಂತರ ವಿರೋಧಿಸಿ ವಿಎಚ್‌ಪಿ, ಭಜರಂಗ ದಳದಿಂದ ಬೃಹತ್ ಪ್ರತಿಭಟನೆ

25/04/2026 4:21 PM

ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜೊತೆ ವಿವಾಹ: ಇದು ವಿದ್ಯೆ ಕಲಿಸುವ ಗುರುವಿನ ‘ಅವಿದ್ಯಾವಂತ’ ವರ್ತನೆ

25/04/2026 4:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.