ತೆಲಂಗಾಣ : ಇಂದು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ ಆಗಲಿದೆ. ಮಾಜಿ ಮುಖ್ಯಮಂತ್ರಿ ಕೆ ಸಿ ಆರ್ ಪುತ್ರಿ ಕವಿತಾ ಅವರು ಇಂದು ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಪುತ್ರಿ ಕೆ ಕವಿತಾ ಅವರು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಲಿದ್ದಾರೆ. ಮಾಜಿ ಎಂಎಲ್ಸಿ ಹಾಗೂ ತೆಲಂಗಾಣ ಜಾಗೃತಿ ಸಂಘಟನೆ ಅಧ್ಯಕ್ಷರಾಗಿದ್ದಾರೆ.
ಇಂದು ಮುನಿರಾಬಾದ್ ನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದು ಬೆಳಗ್ಗೆ 10 ಗಂಟೆಗೆ ಹೊಸ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ. ಸುಮಾರು 50,000 ಜನರನ್ನು ಸೇರಿಸಿ ಹೊಸ ಪಕ್ಷದ ಹೆಸರು ಮಾಡಿದ್ದಾರೆ ಸದ್ಯ ತೆಲಂಗಾಣ ಜಾಗೃತಿ ಸಂಘಟನೆಯ ಅಧ್ಯಕ್ಷೆ ಆಗಿರುವ ಕೆ ಕವಿತಾ ತಮ್ಮ ಹೊಸ ಪಕ್ಷಕ್ಕೆ ತೆಲಂಗಾಣ ಜಾಗೃತಿ ಹೆಸ್ರು ನೋಡುತ್ತಾರೊ ಅಥವಾ ಹಿಂದೆ ತಮ್ಮ ತಂದೆ ಆರಂಭಿಸಿದ ಟಿ ಆರ್ ಎಸ್ ಹೆಸರೇ ನೀಡುತ್ತಾರೋ ಕಾದುನೋಡಬೇಕಾಗಿದೆ. ತಂದೆ ಕೆಸಿಆರ್ ಹಾಗೂ ಸೋದರ ಕೆ ಟಿ ರಾಮರಾವ್ಗೆ ಕವಿತಾ ಸೆಡ್ಡು ಹೊಡೆದಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದ ಆರೋಪದ ಅಡಿಕೆ ಕವಿತಾ ಜೈಲು ಸೇರಿದರು ಅಬಕಾರಿ ಹಗರಣದಿಂದ ಕ್ಲೀನ್ ಚಿಟ್ ಪಡೆದು ಸದ್ಯ ಜೈಲಿನಿಂದ ಹೊರಬಂದಿದ್ದಾರೆ ಪಕ್ಷದ ವಿಚಾರದ ಬಗ್ಗೆ ತಂದೆ ಮತ್ತು ಸೋದರನ ಜೊತೆ ತಂದೆ ಹಾಗೂ ಸಹೋದರನ ಜೊತೆ ಕಲಹ ಉಂಟಾಗಿತ್ತು ಕಲಹದಿಂದ ಬೇಸತ್ತು ಕವಿತಾ ಬಿ ಆರ್ ಎಸ್ ಪಕ್ಷದಿಂದ ಹೊರ ಬಂದಿದ್ದರು. ಬಿ ಆರ್ ಎಸ್ ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದರು. ಹಾಗಾಗಿ ಇಂದು ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.








