Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ನೂತನ ಒಳ ಮೀಸಲಾತಿ ಆಧಾರದಲ್ಲಿ 56,432 ಖಾಲಿ ಹುದ್ದೆ ಭರ್ತಿ: ಸಿಎಂ ಸಿದ್ಧರಾಮಯ್ಯ ಘೋಷಣೆ

24/04/2026 5:42 PM

ಮಂಡ್ಯದ ಗೆಜ್ಜಲಗೆರೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

24/04/2026 5:32 PM

BREAKING: ಎಡಗೈ 5.25, ಬಲಗೈ 5.25, ಇತರರಿಗೆ ಶೇ.4.5ರಷ್ಟು ಒಳ ಮೀಸಲಾತಿ ಕಲ್ಪಿಸಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ ಘೋಷಣೆ

24/04/2026 5:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯದ ಗೆಜ್ಜಲಗೆರೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
KARNATAKA

ಮಂಡ್ಯದ ಗೆಜ್ಜಲಗೆರೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

By kannadanewsnow0924/04/2026 5:32 PM

ಮಂಡ್ಯ: ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಟ್ಯಾಂಕರ್ ಗಳ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಸುಮಾರು 123 ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದ ಸ್ಥಳಕ್ಕೆ ಗುರುವಾರ ರಾತ್ರಿ ಆಗಮಿಸಿ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಅಧಿಕಾರಿಗಳು ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡದ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿರುವುದರಿಂದ ಇದನ್ನು ಮನಗಂಡು ಎಚ್.ಡಿ.ಕುಮಾರಸ್ವಾಮಿ ಅವರು ಟ್ಯಾಂಕರ್ ಗಳ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದು, ಗ್ರಾಮದ ಜನತೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಧೈರ್ಯ ತುಂಬಿದರು.

ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುತ್ತಿದ್ದ, ಬೋರ್ ವೆಲ್ ಮೂರ್ನಾಲ್ಕು ದಿನಗಳಿಂದ ಕೆಟ್ಟು ಹೋಗಿದ್ದು, ಗ್ರಾಮದ ಜನತೆ ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ನಿರ್ವಹಣೆಯನ್ನು ತಾಲೂಕು ಅಥವಾ ಜಿಲ್ಲಾಡಳಿತ ಮಾಡಬೇಕು. ಅದು ಬಿಟ್ಟು ನಗರಸಭೆ ಅಧಿಕಾರಿಗಳು ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಜಿಲ್ಲಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದರು.

ಹೀಗಾಗಿ ಇಡೀ ಗ್ರಾಮಕ್ಕೆ ಕುಡಿಯುವ ನೀರು ಸೇರಿದಂತೆ ದಿನ ಬಳಕೆಗೆ ಬೇಕಾಗುವ ನೀರಿನ ವ್ಯವಸ್ಥೆಯನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಟ್ಯಾಂಕರ್ ಗಳ ಮೂಲಕವೇ ಪೂರೈಸುವ ಭರವಸೆ ನೀಡಿದ್ದು, ಈಗಾಗಲೇ ಗ್ರಾಮಕ್ಕೆ ಎರಡು ಟ್ಯಾಂಕರ್ ಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮುಗಿಯುವವರೆಗೂ ಜನತೆಗೆ ಯಾವುದೇ ರೀತಿಯ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ರೈತ ನಾಯಕಿ ಸುನಂದ ಜಯರಾಂ, ತಾ.ಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಮುಖಂಡರಾದ ಲಿಂಗಪ್ಪಾಜಿ, ಜಿ.ಎ.ಶಂಕರ್, ಗುರು, ವೀರಪ್ಪ, ಮೋಹನ್, ಚಂದ್ರಶೇಖರ್, ಶಿವನಂಜು, ಪ್ರತಾಪ್ ಸೇರಿದಂತೆ ಇತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

BREAKING: ಎಡಗೈ 5.25, ಬಲಗೈ 5.25, ಇತರರಿಗೆ ಶೇ.4.5ರಷ್ಟು ಒಳ ಮೀಸಲಾತಿ ಕಲ್ಪಿಸಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ ಘೋಷಣೆ

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

Share. Facebook Twitter LinkedIn WhatsApp Email

Related Posts

BREAKING: ನೂತನ ಒಳ ಮೀಸಲಾತಿ ಆಧಾರದಲ್ಲಿ 56,432 ಖಾಲಿ ಹುದ್ದೆ ಭರ್ತಿ: ಸಿಎಂ ಸಿದ್ಧರಾಮಯ್ಯ ಘೋಷಣೆ

24/04/2026 5:42 PM2 Mins Read

BREAKING: ಎಡಗೈ 5.25, ಬಲಗೈ 5.25, ಇತರರಿಗೆ ಶೇ.4.5ರಷ್ಟು ಒಳ ಮೀಸಲಾತಿ ಕಲ್ಪಿಸಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ ಘೋಷಣೆ

24/04/2026 5:27 PM2 Mins Read

BREAKING : ಒಳ ಮೀಸಲಾತಿ ಕಗ್ಗಂಟಿಗೆ ಅಂತ್ಯ ಹಾಡಿದ ರಾಜ್ಯ ಸರ್ಕಾರ : ಯಾವ ಸಮುದಾಯಕ್ಕೆ ಎಷ್ಟು? ಇಲ್ಲಿದೆ ಮಾಹಿತಿ!

24/04/2026 4:58 PM1 Min Read
Recent News

BREAKING: ನೂತನ ಒಳ ಮೀಸಲಾತಿ ಆಧಾರದಲ್ಲಿ 56,432 ಖಾಲಿ ಹುದ್ದೆ ಭರ್ತಿ: ಸಿಎಂ ಸಿದ್ಧರಾಮಯ್ಯ ಘೋಷಣೆ

24/04/2026 5:42 PM

ಮಂಡ್ಯದ ಗೆಜ್ಜಲಗೆರೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

24/04/2026 5:32 PM

BREAKING: ಎಡಗೈ 5.25, ಬಲಗೈ 5.25, ಇತರರಿಗೆ ಶೇ.4.5ರಷ್ಟು ಒಳ ಮೀಸಲಾತಿ ಕಲ್ಪಿಸಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ ಘೋಷಣೆ

24/04/2026 5:27 PM

BREAKING : ಒಳ ಮೀಸಲಾತಿ ಕಗ್ಗಂಟಿಗೆ ಅಂತ್ಯ ಹಾಡಿದ ರಾಜ್ಯ ಸರ್ಕಾರ : ಯಾವ ಸಮುದಾಯಕ್ಕೆ ಎಷ್ಟು? ಇಲ್ಲಿದೆ ಮಾಹಿತಿ!

24/04/2026 4:58 PM
State News
KARNATAKA

BREAKING: ನೂತನ ಒಳ ಮೀಸಲಾತಿ ಆಧಾರದಲ್ಲಿ 56,432 ಖಾಲಿ ಹುದ್ದೆ ಭರ್ತಿ: ಸಿಎಂ ಸಿದ್ಧರಾಮಯ್ಯ ಘೋಷಣೆ

By kannadanewsnow0924/04/2026 5:42 PM KARNATAKA 2 Mins Read

ಬೆಂಗಳೂರು: ಇಂದು ನಡೆದಂತ ಒಳ ಮೀಸಲಾತಿ ಸಂಬಂಧದ ವಿಶೇಷ ಸಂಪುಟ ಸಭೆಯಲ್ಲಿ ಎಡಗೈ ಸಮುದಾಯಕ್ಕೆ 5.25, ಬಲಗೈ ಸಮುದಾಯಕ್ಕೆ 5.25…

ಮಂಡ್ಯದ ಗೆಜ್ಜಲಗೆರೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

24/04/2026 5:32 PM

BREAKING: ಎಡಗೈ 5.25, ಬಲಗೈ 5.25, ಇತರರಿಗೆ ಶೇ.4.5ರಷ್ಟು ಒಳ ಮೀಸಲಾತಿ ಕಲ್ಪಿಸಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ ಘೋಷಣೆ

24/04/2026 5:27 PM

BREAKING : ಒಳ ಮೀಸಲಾತಿ ಕಗ್ಗಂಟಿಗೆ ಅಂತ್ಯ ಹಾಡಿದ ರಾಜ್ಯ ಸರ್ಕಾರ : ಯಾವ ಸಮುದಾಯಕ್ಕೆ ಎಷ್ಟು? ಇಲ್ಲಿದೆ ಮಾಹಿತಿ!

24/04/2026 4:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.