Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಾತ್ರೆಯಲ್ಲಿ ಕೊಂಡ ಬೆಡ್ ಶೀಟ್ ತೊಳೆದಾಗ ಸಿಕ್ತು ‘ಮೇಡ್ ಇನ್ ಪಾಕಿಸ್ತಾನ್’ ಟ್ಯಾಗ್; ಪೊಲೀಸ್ ತನಿಖೆ ಚುರುಕು!

​ಹಿಮಾಚಲ ಪ್ರದೇಶದಲ್ಲಿ ಭೂಕಂಪದ ಆಘಾತ: ಕಂಗ್ರಾ-ಚಂಬಾ ಭಾಗದಲ್ಲಿ ನಡುಗಿದ ಭೂಮಿ, ಚಂಡೀಗಢ ಮತ್ತು ಪಂಜಾಬ್‌ನಲ್ಲೂ ಕಂಪನ

ದೇಶದ ಕರೆನ್ಸಿ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆಗೆ `RBI’ ಸಿದ್ಧತೆ :ಶೀಘ್ರದಲ್ಲೇ ಬರಲಿವೆ ಪ್ಲಾಸ್ಟಿಕ್ ನೋಟುಗಳು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ನೂತನ ಒಳ ಮೀಸಲಾತಿ ಆಧಾರದಲ್ಲಿ 56,432 ಖಾಲಿ ಹುದ್ದೆ ಭರ್ತಿ: ಸಿಎಂ ಸಿದ್ಧರಾಮಯ್ಯ ಘೋಷಣೆ
KARNATAKA

BREAKING: ನೂತನ ಒಳ ಮೀಸಲಾತಿ ಆಧಾರದಲ್ಲಿ 56,432 ಖಾಲಿ ಹುದ್ದೆ ಭರ್ತಿ: ಸಿಎಂ ಸಿದ್ಧರಾಮಯ್ಯ ಘೋಷಣೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಇಂದು ನಡೆದಂತ ಒಳ ಮೀಸಲಾತಿ ಸಂಬಂಧದ ವಿಶೇಷ ಸಂಪುಟ ಸಭೆಯಲ್ಲಿ ಎಡಗೈ ಸಮುದಾಯಕ್ಕೆ 5.25, ಬಲಗೈ ಸಮುದಾಯಕ್ಕೆ 5.25 ಹಾಗೂ ಇತರೆ ಸಮುದಾಯಕ್ಕೆ 4.5 ಒಳ ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ. ಅದರಂತೆಯೇ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದರು.

ಇಂದು ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕಳೆದ ಬಜೆಟ್ ನಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೇ ಇದಕ್ಕೆ ಒಳ ಮೀಸಲಾತಿಯ ಅಂತಿಮ ನಿರ್ಧಾರವು ಅಡ್ಡಿಯಾಗಿತ್ತು. ಇದು ಅದು ಅಂತಿಮಗೊಂಡಿದೆ. ಎಡಗೈ 5.25, ಬಲಗೈ 5.25 ಹಾಗೂ ಇತರೆ ವರ್ಗದವರಿಗೆ 4.5 ಒಳ ಮೀಸಲಾತಿ ಕಲ್ಪಿಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ 56,432 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಮತ್ತೊಮ್ಮೆ ಪ್ರಕಟ ಮಾಡುವುದಾಗಿ ತಿಳಿಸಿದರು.

ಕೋರ್ಟ್ ಮುಂದಿನ ಆದೇಶದವರೆಗೂ ನೂತನ ಒಳ ಮೀಸಲಾತಿಯ ಅನುಸಾರವೇ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಮುಂದುವರೆಯಲಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ಒಳ ಮೀಸಲಾತಿ ಸಂಬಂಧ ಬಹಳಷ್ಟು ಹೋರಾಟಗಳು ನಡೆದಿದ್ದಾವೆ. ಪಕ್ಷದ ವತಿಯಿಂದಲೂ ಚಿತ್ರದುರ್ಗದಲ್ಲಿ ಒಂದು ಸಮಾವೇಶ ಏರ್ಪಾಡು ಮಾಡಲಾಗಿತ್ತು. ಡಾ.ಪರಮೇಶ್ವರ್ ನೇತೃತ್ವದಲ್ಲಿ ಆ ಸಮಾವೇಶ ನಡೆಯಿತು. ಅಲ್ಲಿ ಒಳ ಮೀಸಲಾತಿ ಮಾಡಲು ಎಲ್ಲಾ ಗುಂಪುಗಳು ಕೂಡ, ಎಸ್ಸಿಯಲ್ಲಿ 101 ಜಾತಿಗಳು ಬರುತ್ತವೆ. 59 ಅಲೆಮಾರಿ ಜಾತಿಗಳು ಭಾಗವಹಿಸಿದ್ದವು. ಅಲ್ಲಿ ಒಳ ಮೀಸಲಾತಿ ಮಾಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು ಎಂದರು.

ಚುನಾವಣೆ ಸಂದರ್ಭದಲ್ಲಿ, ಪೂರ್ವದಲ್ಲಿ ಡಾ.ಜಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪ್ರಣಾಣಿಕೆ ಸಮಿತಿ ರಚನೆಯಾಗಿತ್ತು. ಆ ಪ್ರಣಾಣಿಕೆ ಸಮಿತಿಯೂ ಸರ್ಕಾರ ನೀಡಲಿದೆ ಎಂದು ತಿಳಿಸಿತ್ತು. 1-08-2024ರಂದು ಸುಪ್ರೀಂ ಕೋರ್ಟ್ ಒಂದು ತೀರ್ಮಾನ ನೀಡಿದೆ. ಒಳ ಮೀಸಲಾತಿ ಮಾಡಬಹುದು ಎಂಬುದಾಗಿ ತೀರ್ಪು ನೀಡಿದೆ. ಅದು 7 ಜಡ್ಜ್ ಪೀಠವು ನೀಡಿದಂತ ತೀರ್ಪು ಆಗಿತ್ತು. ಒಳ ಮೀಸಲಾತಿ ಮಾಡಲು ಸಂವಿಧಾನದ ವಿರೋಧವಿಲ್ಲ ಎಂದು ನ್ಯಾಯಪೀಠವು ಹೇಳಿತ್ತು. ಆ ತೀರ್ಪಿನ ನಂತ್ರ ನಾವು ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಅವರು ವರದಿಯನ್ನು ನೀಡಿದ್ದಾರೆ. ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಇರಿಸಿ, ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ನಾಗಮೋಹನ್ ದಾಸ್ ನೀಡಿದಂತ ವರದಿಯಲ್ಲಿ ಎ, ಬಿ, ಸಿ, ಡಿ ಎಂಬುದಾಗಿ ವರ್ಗ ಮಾಡಿ ಮೀಸಲಾತಿ ನೀಡಲಾಗಿತ್ತು. ಎಡಗೈ 6, ಬಲಗೈ 6,  ಇತರರಿಗೆ 5ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿತ್ತು. ರಾಜ್ಯಪಾಲರು ಕಾನೂನು ಮಾಡಿದ್ದರು. ಅದಕ್ಕೆ ಸಹಿ ಕೂಡ ಹಾಕಲಾಗಿತ್ತು. ಆದರೇ ರೋಷ್ಟರ್ ಪಾಯಿಂಟ್ ನಲ್ಲಿ ಸಮಸ್ಯೆ ಆಗಿತ್ತು. ಅಲೆಮಾರಿಯವರು ಕೋರ್ಟ್ ಗೆ ಹೋದರು. ಮೀಸಲಾತಿ 50% ಗಿಂತ ಜಾಸ್ತಿಯಾಗಬಾರದು ಎಂಬುದಾಗಿ ತಿಳಿಸಿತು ಎಂದರು.

ಇದೆಲ್ಲದರ ನಡುವೆ ರೋಸ್ಟರ್ ಪಾಯಿಂಟ್ ಸರಿಯಿಲ್ಲ ಎಂಬುದಾಗಿ ಸಮುದಾಯಗಳಿಂದ ಪ್ರತಿಭಟನೆ ಮುಂದುವರೆಯುತ್ತಲೇ ಇತ್ತು. ಮಾರ್ಚ್.27ರಂದು ವಿಶೇಷ ಸಚಿವ ಸಂಪುಟ ಸಭೆ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೇ ಚುನಾವಣಾ ನೀತಿ ಸಂಹಿತೆಯ ಕಾರಣ ವಿಶೇಷ ಸಚಿವ ಸಂಪುಟ ಸಭೆಯನ್ನು ಮಾಡಲಾಗಲಿಲ್ಲ. ಏಪ್ರಿಲ್.24ರ ಇಂದಿಗೆ ವಿಶೇಷ ಸಚಿವ ಸಂಪುಟ ನಿಗದಿ ಮಾಡಲಾಗಿತ್ತು. ಇಂದಿನ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಲೇ ಬೇಕು ಎಂಬುದಾಗಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿದಾಗ ಚೀಫ್ ಸೆಕ್ರೆಟರಿ ನೇತೃತ್ವದಲ್ಲಿ ಟೆಕ್ನಿಕಲ್ ಕಮಿಟಿ ರಚಿಸುವ ಸಲಹೆ ಮಾಡಲಾಗಿತ್ತು. ಅವರು ಇಂದು ತಮ್ಮ ವರದಿಯನ್ನು ನೀಡಿದ್ದಾರೆ ಎಂದರು.

ಈ ಎಲ್ಲ ಕಾರಣದಿಂದಾಗಿ ಎಡಗೈ ಸಮುದಾಯಕ್ಕೆ 5.3, ಬಲಗೈ ಸಮುದಾಯಕ್ಕೆ 5.3, ಇತರಿಗೆ 4.4 ರೋಷ್ಟರ್ ನಂತೆ ಮೀಸಲಾತಿ ನಿಗದಿ ಪಡಿಸಲು ವರದಿ ನೀಡಲಾಗಿದೆ. ನಾವು ಅಂತಿಮವಾಗಿ ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರೋದು ಎಡಗೈ ಸಮುದಾಯಕ್ಕೆ 5.25, ಬಲಗೈ ಸಮುದಾಯಕ್ಕೆ 5.25, ಇತರೆ ಸಮುದಾಯಕ್ಕೆ 4.5 ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಘೋಷಿಸಿದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

Income Tax Saving Tips : ಲಕ್ಷಗಟ್ಟಲೆ ಸಂಪಾದಿಸಿದರೂ ಶೂನ್ಯ ತೆರಿಗೆ : ಇವರಿಗೆ ಒಂದೂ ರೂಪಾಯಿ ತೆರಿಗೆ ಇರಲ್ಲ.!

3 Mins Read

BIG NEWS : ರಾಜ್ಯದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಪ್ರಕ್ರಿಯೆಗೆ ಸರ್ಕಾರ ಮಹತ್ವದ ಆದೇಶ

1 Min Read

JOB ALERT : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,395 ಸಿವಿಲ್ `ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Police Recruitment

2 Mins Read
Recent News

ಜಾತ್ರೆಯಲ್ಲಿ ಕೊಂಡ ಬೆಡ್ ಶೀಟ್ ತೊಳೆದಾಗ ಸಿಕ್ತು ‘ಮೇಡ್ ಇನ್ ಪಾಕಿಸ್ತಾನ್’ ಟ್ಯಾಗ್; ಪೊಲೀಸ್ ತನಿಖೆ ಚುರುಕು!

​ಹಿಮಾಚಲ ಪ್ರದೇಶದಲ್ಲಿ ಭೂಕಂಪದ ಆಘಾತ: ಕಂಗ್ರಾ-ಚಂಬಾ ಭಾಗದಲ್ಲಿ ನಡುಗಿದ ಭೂಮಿ, ಚಂಡೀಗಢ ಮತ್ತು ಪಂಜಾಬ್‌ನಲ್ಲೂ ಕಂಪನ

ದೇಶದ ಕರೆನ್ಸಿ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆಗೆ `RBI’ ಸಿದ್ಧತೆ :ಶೀಘ್ರದಲ್ಲೇ ಬರಲಿವೆ ಪ್ಲಾಸ್ಟಿಕ್ ನೋಟುಗಳು!

ಅಂಡರ್-18 ಏಷ್ಯಾ ಕಪ್ ಹಾಕಿ: ಪಾಕಿಸ್ತಾನದ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ!

State News
KARNATAKA

Income Tax Saving Tips : ಲಕ್ಷಗಟ್ಟಲೆ ಸಂಪಾದಿಸಿದರೂ ಶೂನ್ಯ ತೆರಿಗೆ : ಇವರಿಗೆ ಒಂದೂ ರೂಪಾಯಿ ತೆರಿಗೆ ಇರಲ್ಲ.!

By kannadanewsnow57 KARNATAKA 3 Mins Read

ಹೆಚ್ಚು ಆದಾಯ ಗಳಿಸಿದರೆ ಅನಿವಾರ್ಯವಾಗಿ ಹೆಚ್ಚಿನ ಆದಾಯ ತೆರಿಗೆ (Income Tax) ಪಾವತಿಸಬೇಕೆಂಬುದು ಅನೇಕರ ನಂಬಿಕೆ. ಆದರೆ ಆದಾಯ ತೆರಿಗೆ…

BIG NEWS : ರಾಜ್ಯದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಪ್ರಕ್ರಿಯೆಗೆ ಸರ್ಕಾರ ಮಹತ್ವದ ಆದೇಶ

JOB ALERT : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,395 ಸಿವಿಲ್ `ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Police Recruitment

Rain Alert : ಕರ್ನಾಟಕಕ್ಕೆ ಮುಂಗಾರು ಪ್ರವೇಶ : ರಾಜ್ಯಾದ್ಯಂತ ಮುಂದಿನ 7 ದಿನ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.