ನವದೆಹಲಿ : ದೇಶದ ರಾಜಕೀಯ ವಲಯದಲ್ಲಿ ಇಂದು ಭಾರಿ ಸಂಚಲನ ಸೃಷ್ಟಿಯಾಗಿದ್ದು, ಆಮ್ ಆದ್ಮಿ ಪಕ್ಷದ (AAP) ಪ್ರಭಾವಿ ನಾಯಕ ಹಾಗೂ ಸಂಸದ ರಾಘವ್ ಚಡ್ಡಾ ಅವರು ಕೇಸರಿ ಪಡೆಗೆ ಸೇರ್ಪಡೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಶೀಘ್ರದಲ್ಲೇ ಭಾರತೀಯ ಜನತಾ ಪಾರ್ಟಿ (BJP) ಸೇರುವುದಾಗಿ ತಿಳಿಸುವ ಮೂಲಕ ತಮ್ಮ ಹಳೆಯ ಪಕ್ಷಕ್ಕೆ ದೊಡ್ಡ ಆಘಾತ ನೀಡಿದ್ದಾರೆ. ಇನ್ನು ಅವರ ಜೊತೆಗೆ ಸಂದೀಪ ಪಾಠಕ್, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತ ವಿಕ್ರಂ ಸಹ್ನೇ, ಸ್ವಾತಿ ಮಲಿವಾಲ್ ಕೂಡ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಬಿಜೆಪಿ ಆಪರೇಷನ್ ಕಮಲ ಸಕ್ಸಸ್ ಆಗಿದೆ.
ಇತ್ತೀಚಿಗಷ್ಟೇ ರಾಘವ ಚಡ್ದ ಹಾಗೆ ಆಪ್ ಪಕ್ಷದಿಂದ ನಿರ್ಬಂಧ ಹೇರಲಾಗಿತ್ತು. ಸಂಸತ್ ನಲ್ಲಿ ಮಾತನಾಡದಂತೆ ಆಪ್ ಪಕ್ಷ ರಾಘವ ಛಡ್ಡಾ ಅವರಿಗೆ ನಿರ್ಬಂಧಿಸಿತ್ತು. ಹಾಗಾಗಿ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರ ಜೊತೆಗೆ ಇನ್ನು ನಾಲ್ವರು ಸಂಸದರು ಬಿಜೆಪಿ ಸೇರ್ಪಡೆ ಆಗುವ ಸಾಧ್ಯತೆ ಇದೆ. ಒಟ್ಟು ಏಳು ಜನ ಆಮ್ ಆದ್ಮಿ ಪಕ್ಷ ಸಂಸದರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.








