ಬೆಂಗಳೂರು : ಬೆಂಗಳೂರಲ್ಲಿ ಯುವಕನಿಗೆ ಯುವತಿಯರು ಹಲ್ಲೆ ಮಾಡಿದ್ದಾರೆ ಅದಕ್ಕೆ ಕಾರಣ ಪಬ್ ನಲ್ಲಿ ಯುವಕ ಯುವತಿಗೆ ಕಿರುಕುಳ ನೀಡಿದ್ದ. ಬಳಿಕ ಆತ ಪಬ್ ನಿಂದ ಹೊರಗೆ ಬಂದ ಬಳಿಕ ಯುವತಿಯರು ಆತನಿಗೆ ಥಳಿಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.
ಹೌದು ಬೆಂಗಳೂರಿನ ಕೋರಮಂಗಲದಲ್ಲಿ ಯುವಕನಿಗೆ ಯುವತಿಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಡು ರಸ್ತೆಯಲ್ಲಿಯೇ ಯುವತಿಯರು ರಂಪಾಟ ಮಾಡಿದ್ದಾರೆ. ಪೊಲೀಸರ ಎದುರೇ ಯುವಕನ ಮೇಲೆ ಯುವತಿಯರು ಅಟ್ಯಾಕ್ ಮಾಡಿದ್ದಾರೆ. ಯುವಕ ಕಿರುಕುಳ ಕೊಟ್ಟಿರುವ ಆರೋಪ ಕೇಳಿ ಬಂದಿದ್ದು ಒಬ್ಬನಿಂದ ಹೊರಗೆ ಬಂದಾಗ ಯುವತಿಯರು ಹಲ್ಲೆ ಮಾಡಿದ್ದಾರೆ.








