ಕಲಬುರಗಿ : ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮ ಪಂಚಾಯತ್ ನ ಲಂಚಕೋರ ಕಂಪ್ಯೂಟರ್ ಆಪರೇಟರ್ ಬಂದೇನವಾಜ್ ಎಂಬಾತ ಬಸವ ವಸತಿ ಯೋಜನೆಯ ಹಣ ಮಂಜೂರು ಮಾಡಲು ಲಂಚ ಪಡೆದು, ಲೋಕಾಯುಕ್ತ ಬಲೆಗೆ ಸಾಕ್ಷಿ ಸಮೇತ ಬಿದ್ದಿದ್ದಾನೆ.
ಮಳ್ಳಿ ಗ್ರಾಮದ ಮಲ್ಲಿಕಾರ್ಜುನ ಅವರ ಸಹೋದರನ ಮನೆ ಬಿಲ್ ಮಾಡಲು 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, 5 ಸಾವಿರ ರೂ. ಕೈಯಲ್ಲಿ ಪಡೆದಿದ್ದು, ಮೂರು ಸಾವಿರ ರೂಪಾಯಿ ಫೋನ್ ಫೇ ಮಾಡಿಕೊಂಡಿದ್ದ. ಲೋಕಾಯುಕ್ತ ತನಿಖಾಧಿಕಾರಿ ಮುರುಗುಂಡಿ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ಸದ್ಯ ಕಂಪ್ಯೂಟರ್ ಆಪರೇಟರ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ.








