ಬೆಂಗಳೂರು : ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಎಸ್ ಎಸ್ ಎಲ್ ಸಿ ಒಂದನೇ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಮೇ 18ರಿಂದ ಎರಡನೇ ಪರೀಕ್ಷೆ ಆರಂಭವಾಗಲಿದೆ ಆದರೆ ಈ ಸಲ ಮೂರನೇ ಬಾರಿ ಪರೀಕ್ಷೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಮಧು ಬಂಗಾರಪ್ಪ ಈ ಬಾರಿ ಮೂರನೇ ಬಾರಿ ಪರೀಕ್ಷೆ ಇರುವುದಿಲ್ಲ ಫೇಲಾದ ಮಕ್ಕಳಿಗೆ ಮೂರನೇ ಪರೀಕ್ಷೆ ಇರುವುದಿಲ್ಲ ಹಾಗಾಗಿ ಫೇಲಾದ ಮಕ್ಕಳು ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ಇದು ಮೇ 18ರಿಂದ ಪರೀಕ್ಷೆ ಆರಂಭ ಆಗಲಿದೆ. ಯಾರೆಲ್ಲಾ ಫೇಲ್ ಆಗಿದ್ದಾರೋ ಅವರಿಗೆ ತರಬೇತಿ ಕೊಡುವ ಕೆಲಸ ಆಗಲಿದೆ ಕಾರಣಾಂತರಗಳಿಂದ ಫೇಲ್ ಆಗಿದ್ದಾರೆ ಯಾವ ಸಬ್ಜೆಕ್ಟ್ ಅಲ್ಲಿ ಫೇಲ್ ಆಗಿದ್ದಾರೆ ಅದರಲ್ಲಿ ಮಕ್ಕಳನ್ನು ಪಾಸ್ ಮಾಡಿಸುವಂತಹ ಕೆಲಸ ಸಂಬಂಧ ಪಟ್ಟಂತಹ ಶಿಕ್ಷಕರು ಇಲಾಖೆಯವರು ಮಾಡಲಿದ್ದಾರೆ. ಯಾವ ಯಾವ ದಿನಾಂಕದಂದು ಯಾವ್ಯಾವ ಸಬ್ಜೆಕ್ಟ್ ಅನ್ನುವುದನ್ನು ಮುಂದಿನ ದಿನಗಳಲ್ಲಿ ಅನೌನ್ಸ್ ಮಾಡುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ.








