Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ : ಪೋಕ್ಸೋ ಕೇಸ್ ನಲ್ಲಿ ‘FIR’ ದಾಖಲು!

BIG NEWS : ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ : ಇಬ್ಬರಿಗೆ ಗಂಭೀರ ಗಾಯ!

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕ `SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ : ಯಾವ ಜಿಲ್ಲೆ ಫಸ್ಟ್? ಯಾವ ಜಿಲ್ಲೆ ಲಾಸ್ಟ್? ಇಲ್ಲಿದೆ ಸಂಪೂರ್ಣ ಪಟ್ಟಿ.!
KARNATAKA

BIG NEWS : ಕರ್ನಾಟಕ `SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ : ಯಾವ ಜಿಲ್ಲೆ ಫಸ್ಟ್? ಯಾವ ಜಿಲ್ಲೆ ಲಾಸ್ಟ್? ಇಲ್ಲಿದೆ ಸಂಪೂರ್ಣ ಪಟ್ಟಿ.!

By kannadanewsnow57

ಬೆಂಗಳೂರು: 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಕರ್ನಾಟಕ ರಾಜ್ಯವು ಅಭೂತಪೂರ್ವ ಯಶಸ್ಸು ಸಾಧಿಸಿದೆ. ಈ ವರ್ಷದ ಒಟ್ಟಾರೆ ಫಲಿತಾಂಶವು 94.1% ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 14.06 ರಷ್ಟು ಗಣನೀಯ ಏರಿಕೆ ಕಂಡಿದೆ.

ಇದೇ ಮೊದಲ ಬಾರಿಗೆ ಇಷ್ಟು ಹೆಚ್ಚಿನ ಪ್ರಮಾಣದ ಫಲಿತಾಂಶ ಬಂದಿದ್ದು, ಡಿಜಿ ಲಾಕರ್ (Digi Locker) ಮೂಲಕ ಅಂಕಪಟ್ಟಿಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.

ಹಾಜರಾತಿ: ಒಟ್ಟು 7,75,999 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 7,70,209 (99.2%) ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಉತ್ತೀರ್ಣರಾದವರು: ಒಟ್ಟು 7,24,794 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ಕೃಪಾಂಕ ಸೌಲಭ್ಯ: ಉತ್ತೀರ್ಣ ಶೇಕಡಾವಾರು ಪ್ರಮಾಣವನ್ನು 35% ರಿಂದ 33% ಕ್ಕೆ ಇಳಿಸಿದ್ದರಿಂದ ರಾಜ್ಯದ 1532 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.

ಲಿಂಗ ಮತ್ತು ಪ್ರದೇಶವಾರು ಸಾಧನೆ:

ಬಾಲಕಿಯರೇ ಮೇಲುಗೈ: ಈ ಬಾರಿಯೂ ಹುಡುಗಿಯರು (96.18%) ಹುಡುಗರಿಗಿಂತ (91.94%) ಉತ್ತಮ ಸಾಧನೆ ಮಾಡಿದ್ದಾರೆ.

ಗ್ರಾಮೀಣ ಭಾಗದ ಯಶಸ್ಸು: ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ (93.2%) ಗ್ರಾಮೀಣ ಭಾಗದ ವಿದ್ಯಾರ್ಥಿಗಳು (94.8%) ಹೆಚ್ಚಿನ ಸಾಧನೆ ತೋರಿದ್ದಾರೆ.
ಶಾಲಾವಾರು ಮತ್ತು ವರ್ಗವಾರು ಫಲಿತಾಂಶ:

ಸರ್ಕಾರಿ ಶಾಲೆಗಳ ಸಾಧನೆ: ಸರ್ಕಾರಿ ಶಾಲೆಗಳ ಫಲಿತಾಂಶದಲ್ಲಿ ಶೇ. 16.8 ರಷ್ಟು ಸುಧಾರಣೆ ಕಂಡುಬಂದಿದ್ದು, ಒಟ್ಟು 93.97% ಫಲಿತಾಂಶ ದಾಖಲಾಗಿದೆ. ವಿಶೇಷವೆಂದರೆ, ಯಾವುದೇ ಸರ್ಕಾರಿ ಶಾಲೆ ‘ಶೂನ್ಯ’ ಫಲಿತಾಂಶ ಪಡೆದಿಲ್ಲ.

ವರ್ಗವಾರು: ಎಸ್.ಸಿ (92.4%), ಎಸ್.ಟಿ (93.17%) ಸೇರಿದಂತೆ ಎಲ್ಲಾ ಸಾಮಾಜಿಕ ವರ್ಗಗಳ ವಿದ್ಯಾರ್ಥಿಗಳು ಉತ್ತಮವಾಗಿ ಪರೀಕ್ಷೆ ಎದುರಿಸಿದ್ದಾರೆ.

ಜಿಲ್ಲಾವಾರು ಸಾಧನೆ ಮತ್ತು ಅಗ್ರಸ್ಥಾನಿಗಳು:

ದಕ್ಷಿಣ ಕನ್ನಡ ಜಿಲ್ಲೆಯು 98.40% ಫಲಿತಾಂಶದೊಂದಿಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದರೆ, ಉಡುಪಿ (98.18%) ಮತ್ತು ಉತ್ತರ ಕನ್ನಡ (98.09%) ನಂತರದ ಸ್ಥಾನಗಳಲ್ಲಿವೆ. ಜಿಲ್ಲಾವಾರು ಹೋಲಿಕೆಯಲ್ಲಿ ಯಾದಗಿರಿ ಜಿಲ್ಲೆಯು ಕಳೆದ ವರ್ಷಕ್ಕಿಂತ ಶೇ. 29.81 ರಷ್ಟು ಅತಿ ಹೆಚ್ಚು ಸುಧಾರಣೆ ಕಂಡಿದೆ.

ರಾಜ್ಯದ ಟಾಪರ್ಗಳು (625ಕ್ಕೆ 625 ಅಂಕಗಳು):

ರಾಜ್ಯದ ಹಲವು ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಪಡೆಯುವ ಮೂಲಕ ಇತಿಹಾಸ ಬರೆದಿದ್ದಾರೆ. ಅವರಲ್ಲಿ ಪ್ರಮುಖರೆಂದರೆ:

ನಾಗಪ್ಪ ಬಿರಾದಾರ ಪಾಟೀಲ್ – ಸರ್ಕಾರಿ ಪ್ರೌಢಶಾಲೆ, ಕಾಟಗೇರಿ (ಚಿಕ್ಕೋಡಿ)

ಭರತ್ ಜಿ – ಶ್ರೀ ವಿಜಯಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಶಾಲೆ (ದಾವಣಗೆರೆ)

ಬೃಂದಾ ಎಂ – ಸೇಂಟ್ ಮೇರಿಸ್ ಹೈಸ್ಕೂಲ್ (ಚಿಕ್ಕಮಗಳೂರು)

ಧನುಷ್ ಸುಧೀರ್ – ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರ (ಬೆಂಗಳೂರು ಉತ್ತರ)

ಪ್ರೀತಮ್ ಜಿ ಪೂಜಾರಿ – ಮದರ್ ತೆರೇಸಾ ಮೆಮೋರಿಯಲ್ ಶಾಲೆ (ಉಡುಪಿ)

ಸೌಜನ್ಯ ಬಸವರಾಜ್ ಕಂಡಕೂರ್ – ಆಕ್ಸ್ಫರ್ಡ್ ಇಂಗ್ಲಿಷ್ ಮೀಡಿಯಂ ಶಾಲೆ (ವಿಜಯಪುರ)

ಸುಖದೇವ – ಬಿವಿಆರ್ ಇಂಗ್ಲಿಷ್ ಮೀಡಿಯಂ ಶಾಲೆ (ರಾಯಚೂರು)

ಐತಿಹಾಸಿಕ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶ್ರಮಿಸಿದ ಶಿಕ್ಷಕ ವೃಂದಕ್ಕೆ ಸರ್ಕಾರವು ಅಭಿನಂದನೆ ಸಲ್ಲಿಸಿದೆ

ಜಿಲ್ಲಾವಾರು ಶ್ರೇಯಾಂಕ – 2026

ಶ್ರೇಯಾಂಕ ಜಿಲ್ಲಾ ಸಂಕೇತ ಜಿಲ್ಲೆಯ ಹೆಸರು 2026% 2025%
1 GG ದಕ್ಷಿಣ ಕನ್ನಡ 98.40 94.41
2 GA ಉಡುಪಿ 98.18 93.94
3 PP ಉತ್ತರ ಕನ್ನಡ 98.09 90.08
4 LL ಹಾಸನ 97.51 90.88
5 FF ಮಂಡ್ಯ 97.45 83.44
6 PA ಶಿರಸಿ 97.21 86.96
7 MA ಹಾವೇರಿ 96.87 80.90
8 HH ಕೊಡಗು 96.70 87.54
9 KK ಶಿವಮೊಗ್ಗ 96.56 88.66
10 TA ವಿಜಯನಗರ 96.39 86.75
11 BB ಬೆಂಗಳೂರು ಗ್ರಾಮಾಂತರ 95.84 87.53
12 MM ಧಾರವಾಡ 95.59 79.93
13 CC ಕೋಲಾರ 95.50 87.65
14 OA ಬಾಗಲಕೋಟೆ 95.42 82.30
15 AN ಬೆಂಗಳೂರು ಉತ್ತರ 95.34 82.71
16 MB ಗದಗ 95.24 83.20
17 JJ ಚಿಕ್ಕಮಗಳೂರು 94.99 84.76
18 NN ಬೆಳಗಾವಿ 94.75 80.48
19 IA ದಾವಣಗೆರೆ 94.64 78.25
20 EE ಮೈಸೂರು 94.50 80.89
21 RR ರಾಯಚೂರು 94.41 75.00
22 OO ವಿಜಯಪುರ 94.17 78.85
23 NA ಚಿಕ್ಕೋಡಿ 94.09 79.94
24 TT ಬಳ್ಳಾರಿ 93.36 79.30
25 RA ಕೊಪ್ಪಳ 93.10 78.93
26 BA ರಾಮನಗರ 92.83 80.02
27 II ಚಿತ್ರದುರ್ಗ 92.25 70.45
28 SS ಬೀದರ್ 92.18 73.35
29 DD ತುಮಕೂರು 92.04 75.91
30 EA ಚಾಮರಾಜನಗರ 91.89 83.16
31 QA ಯಾದಗಿರಿ 91.89 62.08
32 AS ಬೆಂಗಳೂರು ದಕ್ಷಿಣ 91.65 81.44
33 CA ಚಿಕ್ಕಬಳ್ಳಾಪುರ 90.88 77.38
34 DA ಮಧುಗಿರಿ 90.26 69.08
35 QQ ಕಲಬುರಗಿ 85.06 56.89
ಒಟ್ಟು 94.1
BIG NEWS: Karnataka `SSLC Exam-1 Results Announced: Which District is First? Which District is Last? Complete List Without.!
Share. Facebook Twitter LinkedIn WhatsApp Email

Related Posts

BREAKING : ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ : ಪೋಕ್ಸೋ ಕೇಸ್ ನಲ್ಲಿ ‘FIR’ ದಾಖಲು!

1 Min Read

BIG NEWS : ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ : ಇಬ್ಬರಿಗೆ ಗಂಭೀರ ಗಾಯ!

1 Min Read

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

1 Min Read
Recent News

BREAKING : ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ : ಪೋಕ್ಸೋ ಕೇಸ್ ನಲ್ಲಿ ‘FIR’ ದಾಖಲು!

BIG NEWS : ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ : ಇಬ್ಬರಿಗೆ ಗಂಭೀರ ಗಾಯ!

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

ಟ್ರಂಪ್ ರಹಸ್ಯ ಪತ್ರದ ವಿವರ ಬಹಿರಂಗ: ‘ನನಗೇನಾದರೂ ಆದರೆ ಇರಾನ್ ದೇಶವನ್ನೇ ಭೂಪಟದಿಂದ ಅಳಿಸಿ ಹಾಕಿ’: ಜೆ.ಡಿ. ವ್ಯಾನ್ಸ್‌ಗೆ ಕಡಕ್ ಸೂಚನೆ!

State News
KARNATAKA

BREAKING : ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ : ಪೋಕ್ಸೋ ಕೇಸ್ ನಲ್ಲಿ ‘FIR’ ದಾಖಲು!

By ಸುರೇಶ್‌ KARNATAKA 1 Min Read

ಗದಗ: ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರಿಗೆ ಈಗ ಹೊಸ ಸಂಕಷ್ಟವೊಂದು ಎದುರಾಗಿದೆ. ಅವರ ವಿರುದ್ಧ ಈಗ ಲೈಂಗಿಕ…

BIG NEWS : ವಿಜಯಪುರದಲ್ಲಿ ಬೆಳ್ಳಂ ಬೆಳಿಗ್ಗೆ ಚಿನ್ನದ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ : ಇಬ್ಬರಿಗೆ ಗಂಭೀರ ಗಾಯ!

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

ಪುರುಷರ ಕುಡಿತದ ಚಟದಿಂದ ಮಹಿಳೆಯರ ಮೇಲೆ ದೌರ್ಜನ್ಯ ಕೇಸ್ ಹೆಚ್ಚಳ : ಅಬಕಾರಿ ಇಲಾಖೆ ವರದಿಯಲ್ಲಿ ಬಹಿರಂಗ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.