ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2025-26ನೇ ಸಾಲಿನ ಎಸ್ಎಸ್ಎಲ್ಸಿ (ಪರೀಕ್ಷೆ-1) ಫಲಿತಾಂಶವನ್ನು ಇಂದು ಪ್ರಕಟವಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಶೇ.90 ರಷ್ಟು ರಿಸಲ್ಟ್ ಬಂದಿದೆ.
ಫಲಿತಾಂಶ ನೋಡುವುದು ಹೇಗೆ?
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಈ ಕೆಳಗಿನ ವಿಧಾನಗಳ ಮೂಲಕ ಪಡೆಯಬಹುದು:
ವೆಬ್ಸೈಟ್: https://karresults.nic.in ಮೂಲಕ ಲಾಗಿನ್ ಆಗಿ ಫಲಿತಾಂಶ ನೋಡಬಹುದು.
ಮೊಬೈಲ್ ಆ್ಯಪ್: ‘KarnatakaOne’ ಆ್ಯಪ್ ಮೂಲಕವೂ ಮಾಹಿತಿ ಲಭ್ಯ.
SMS/WhatsApp: ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಮಂಡಳಿಯು ನೇರವಾಗಿ ಫಲಿತಾಂಶದ ಸಂದೇಶವನ್ನು ರವಾನಿಸಲಿದೆ.
ಡಿಜಿಲಾಕರ್ನಲ್ಲಿ ಅಂಕಪಟ್ಟಿ
ಇತಿಹಾಸದಲ್ಲೇ ಮೊದಲ ಬಾರಿಗೆ ಫಲಿತಾಂಶ ಪ್ರಕಟವಾದ ದಿನವೇ ಡಿಜಿಲಾಕರ್ನಲ್ಲಿ ಅಂಕಪಟ್ಟಿ ಲಭ್ಯವಿರಲಿದೆ.
ಇಂದು https://www.digilocker.gov.in ವೆಬ್ಸೈಟ್ನಿಂದ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್ಸೈಟ್ಗಳು:
ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ಪೋರ್ಟಲ್ಗಳ ಮೂಲಕ ಫಲಿತಾಂಶವನ್ನು ಪಡೆಯಬಹುದು:
karresults.nic.in
kseab.karnataka.gov.in
ರಿಸಲ್ಟ್ ಚೆಕ್ ಮಾಡುವುದು ಹೇಗೆ? (ಹಂತ-ಹಂತದ ಮಾಹಿತಿ):
ಫಲಿತಾಂಶ ಪ್ರಕಟವಾದ ನಂತರ ನಿಮ್ಮ ಸ್ಕೋರ್ಕಾರ್ಡ್ ಪಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:
ಮೊದಲು ಕರ್ನಾಟಕ ಫಲಿತಾಂಶದ ಅಧಿಕೃತ ವೆಬ್ಸೈಟ್ karresults.nic.in ಗೆ ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ ‘SSLC Examination-1 Result 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಪರೀಕ್ಷಾ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು (Date of Birth) ನಮೂದಿಸಿ.
‘Submit’ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ.
ಭವಿಷ್ಯದ ದಾಖಲೆಗಾಗಿ ಫಲಿತಾಂಶದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು:
ಈ ವರ್ಷ ರಾಜ್ಯಾದ್ಯಂತ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗೆ ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಬಾರಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯು ವಿಶೇಷ ಕ್ರಮಗಳನ್ನು ಕೈಗೊಂಡಿತ್ತು.








