ಬೆಂಗಳೂರು : ಬೆಂಗಳೂರಿನ ಆರ ಟಿ ನಗರದಲ್ಲಿ ನಿನ್ನೆ ಗಂಡ ಹೆಂಡತಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆ ಒಂದು ಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯನ್ನು ಕೊಲೆ ಮಾಡಿ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಪತ್ನಿಯನ್ನು ಉಸಿರುಗಟ್ಟಿಸಿ ಸುಮಿತ್ರಾಳನ್ನು ಕೊಲೆ ಮಾಡಿರುವ ಪತಿ ಡೇವಿಡ್ ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರ ತನಿಖೆಯ ವೇಳೆ ಸತ್ಯ ಬಹಿರಂಗವಾಗಿದೆ. ಸುಮಿತ್ರ ತಂಗಿ ಕರೆ ಮಾಡಿದರು ಕೂಡ ಕರೆ ಸ್ವೀಕರಿಸಲಿಲ್ಲ ನಂತರ ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇನ್ನು ಬಲವಂತವಾಗಿ ಡೇವಿಡ್ ಸುಮಿತ್ರಾಳನ್ನು ಕೊಲೆ ಮಾಡಿದ್ದಾನೆ ಎನ್ನುವಂತಹ ಮಾಹಿತಿ ಲಭ್ಯವಾಗಿದೆ. ಕೊಲೆ ಮಾಡುವುದಕ್ಕೂ ಮುಂಚೆ ಸುಮಿತ್ರ ಡೇವಿಡ್ ಕೈ ಪರಚಿರುವುದು ಪತ್ತೆಯಾಗಿದೆ . ಬಳಿಕ ಆಕೆಯನ್ನು ಕೊಂದು ಡೇವಿಡ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.








