ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ವರದಿಯಾಗಿದ್ದು, ನವಜಾತ ಶಿಶುವನ್ನು ಕತ್ತು ಕೊಯ್ದು ಶೌಚಾಲಯದಲ್ಲಿ ಎಸೆದ ಘಟನೆ ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬೀರಸಂದ್ರದಲ್ಲಿರುವ ಫಾಕ್ಸ್ ಕಾನ್ ಕಂಪನಿಯಲ್ಲಿ ನಿನ್ನೆ ನವಜಾತ ಶಿಶುವಿನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಶೌಚಾಲಯದಲ್ಲಿ ನವಜಾತ ಶಿಶು ನೋಡಿ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದಾರೆ. ನವಜಾತ ಶಿಶು ಕೊಲೆ ಮಾಡಿರುವ ಆರೋಪದಡಿ ಇದೀಗ ರೇಣುಕಾ ಎಂಬ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ. ಘಟನೇಯಿಂದ ಬಾಕ್ಸ್ ಕಾನ್ ಕಂಪನಿ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದಾರೆ.
ಈ ಒಂದು ಕಂಪನಿಯಲ್ಲಿ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು ಇದೇ ಕಂಪನಿಯ ಶೌಚಾಲಯದಲ್ಲಿ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ ಬಳಿಕ ಇದೀಗ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯಾಗಿರುವ ರೇಣುಕಾ ಈ ಕೃತ್ಯ ಎಸಗಿದ್ದು ತಿಳಿದು ಬಂದಿದೆ.








