ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ನೇ ಸಾಲಿನ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆ-1ರ ಫಲಿತಾಂಶ ಪ್ರಕಟಣೆಗೆ ದಿನಾಂಕವನ್ನು ನಿಗದಿಪಡಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಈ ಫಲಿತಾಂಶವು ನಾಳೆ ಹೊರಬೀಳಲಿದೆ.
ಫಲಿತಾಂಶ ಪ್ರಕಟಣೆಯ ವಿವರ:
-
ದಿನಾಂಕ: 23-04-2026 (ಗುರುವಾರ)
-
ಸಮಯ: ಮಧ್ಯಾಹ್ನ 12:00 ಗಂಟೆಗೆ
ಫಲಿತಾಂಶ ವೀಕ್ಷಿಸುವುದು ಹೇಗೆ?
ವಿದ್ಯಾರ್ಥಿಗಳು ಈ ಕೆಳಗಿನ ವಿವಿಧ ಮಾರ್ಗಗಳ ಮೂಲಕ ತಮ್ಮ ಫಲಿತಾಂಶವನ್ನು ಸುಲಭವಾಗಿ ಪಡೆದುಕೊಳ್ಳಬಹುದು:
-
ಅಧಿಕೃತ ವೆಬ್‌ಸೈಟ್: ಮಂಡಲಿಯ ಅಧಿಕೃತ ಲಿಂಕ್ https://karresults.nic.in ಮೂಲಕ ರಿಸಲ್ಟ್ ನೋಡಬಹುದು.
-
ಮೊಬೈಲ್ ಆಪ್: ‘KarnatakaOne’ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಫಲಿತಾಂಶ ಲಭ್ಯವಿರುತ್ತದೆ.
-
ನೇರ ಸಂದೇಶ (SMS/WhatsApp): ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಮಂಡಳಿಯ ವತಿಯಿಂದ ನೇರವಾಗಿ ವಾಟ್ಸಾಪ್ ಅಥವಾ ಎಸ್.ಎಂ.ಎಸ್ ಮೂಲಕ ಫಲಿತಾಂಶದ ಮಾಹಿತಿಯನ್ನು ಕಳುಹಿಸಲಾಗುವುದು.
ಡಿಜಿಲಾಕರ್ (DigiLocker) ಮೂಲಕ ಅಂಕಪಟ್ಟಿ ಲಭ್ಯ:
ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ ಮೂಲಕ ನೀಡಲಾಗುತ್ತಿದೆ.
-
ಲಭ್ಯವಾಗುವ ಸಮಯ: 23-04-2026 ರಂದು ಮಧ್ಯಾಹ್ನ 12:00 ಗಂಟೆಯಿಂದ.
-
ಡೌನ್‌ಲೋಡ್ ಮಾಡುವ ವಿಧಾನ: https://www.digilocker.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
-
ಡಿಜಿಲಾಕರ್‌ನಿಂದ ಅಂಕಪಟ್ಟಿ ಪಡೆಯುವ ವಿಧಾನವನ್ನು ತಿಳಿಯಲು ಈ ವೀಡಿಯೊ ಲಿಂಕ್ ಬಳಸಿ: https://tinyurl.com/mw84wmh9
ಶಾಲೆಗಳಲ್ಲಿ ಫಲಿತಾಂಶ:
ಫಲಿತಾಂಶದ ಪಟ್ಟಿಯನ್ನು ಆಯಾ ಸಂಬಂಧಪಟ್ಟ ಶಾಲೆಗಳಿಗೆ 23-04-2026 ರಂದು ಮಧ್ಯಾಹ್ನ 12:00 ಗಂಟೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು!
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









