ನಮ್ಮ ದಿನನಿತ್ಯದ ಹವ್ಯಾಸಗಳು ನಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ವಿಷಯಗಳನ್ನು ಬಿಚ್ಚಿಡುತ್ತವೆ. ಅದರಲ್ಲಿ ಪ್ರಮುಖವಾದುದು ನಾವು ಮಲಗುವ ರೀತಿ. ಪ್ರತಿಯೊಬ್ಬರೂ ಒಂದೊಂದು ವಿಭಿನ್ನ ಭಂಗಿಯಲ್ಲಿ ಮಲಗಲು ಇಷ್ಟಪಡುತ್ತಾರೆ. ಸಂಶೋಧನೆಗಳ ಪ್ರಕಾರ, ಒಬ್ಬ ವ್ಯಕ್ತಿ ಮಲಗುವ ಭಂಗಿಯು ಅವರ ಗುಣಲಕ್ಷಣ ಮತ್ತು ಸ್ವಭಾವವನ್ನು ಪ್ರತಿಬಿಂಬಿಸುತ್ತದೆಯಂತೆ. ಹಾಗಾದರೆ, ಯಾವ ಭಂಗಿಯಲ್ಲಿ ಮಲಗುವವರು ಎಂತಹ ಸ್ವಭಾವದವರು? ಇಲ್ಲಿದೆ ವಿವರ.
1. ಶಿಶುವಿನಂತೆ ಮುದುಡಿಕೊಂಡು ಮಲಗುವುದು (Fetal Position)
ಸಣ್ಣ ಮಗುವಿನಂತೆ ಕೈಕಾಲುಗಳನ್ನು ಹತ್ತಿರಕ್ಕೆ ಎಳೆದುಕೊಂಡು ಮುದುಡಿಕೊಂಡು ಮಲಗುವ ಅಭ್ಯಾಸ ಅನೇಕರಿಗಿಂತ ಇರುತ್ತದೆ.
ಸ್ವಭಾವ: ಇಂತಹ ವ್ಯಕ್ತಿಗಳು ಹೊರನೋಟಕ್ಕೆ ತುಂಬಾ ಕಠಿಣವಾಗಿ ಕಂಡರೂ, ಮನಸ್ಸಿನಿಂದ ಬಹಳ ಮೃದು ಸ್ವಭಾವದವರಾಗಿರುತ್ತಾರೆ.
ಲಕ್ಷಣ: ಇವರು ಸ್ವಲ್ಪ ಅಂತರ್ಮುಖಿಗಳು (Introverts). ಇತರರಿಂದ, ಅದರಲ್ಲೂ ವಿಶೇಷವಾಗಿ ಸಂಗಾತಿಯಿಂದ ಪ್ರೀತಿ ಮತ್ತು ರಕ್ಷಣೆಯನ್ನು ಬಯಸುತ್ತಾರೆ. ಇವರಲ್ಲಿ ಅಸುರಕ್ಷಿತ ಭಾವನೆ ಸ್ವಲ್ಪ ಹೆಚ್ಚಿರುತ್ತದೆ ಮತ್ತು ಸಮಸ್ಯೆಗಳಿಂದ ದೂರವಿರಲು ಬಯಸುತ್ತಾರೆ. ಹೆಚ್ಚು ಜನರಿರುವ ಕಡೆ ಇವರು ಅಷ್ಟಾಗಿ ಕಂಫರ್ಟ್ ಆಗಿ ಇರುವುದಿಲ್ಲ.
2. ಪಕ್ಕಕ್ಕೆ ತಿರುಗಿ ಮಲಗುವುದು (Side Sleepers)
ಒಂದು ಮಗ್ಗುಲಿಗೆ ತಿರುಗಿ ಮಲಗುವವರು ಸಮಾಜದಲ್ಲಿ ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಗುಣದವರಾಗಿರುತ್ತಾರೆ.
ಸ್ವಭಾವ: ಇವರು ತುಂಬಾ ಸಾಮಾಜಿಕ ಜೀವಿಗಳು. ಯಾರೊಂದಿಗೂ ಸುಲಭವಾಗಿ ಮಾತನಾಡುತ್ತಾರೆ ಮತ್ತು ಇತರರನ್ನು ಬೇಗನೆ ನಂಬುತ್ತಾರೆ.
ಲಕ್ಷಣ: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಇವರು ಬಹಳ ಸಮತೋಲನದಿಂದ ಯೋಚಿಸುತ್ತಾರೆ. ಎಲ್ಲಾ ಆಯಾಮಗಳನ್ನು ಪರಿಶೀಲಿಸಿದ ನಂತರವೇ ಒಂದು ತೀರ್ಮಾನಕ್ಕೆ ಬರುತ್ತಾರೆ.
3. ಅಂಗಾತ ಮಲಗುವುದು (Back Sleepers)
ಬೆನ್ನು ನೆಲಕ್ಕೆ ತಾಗುವಂತೆ ಅಂಗಾತ ಮಲಗುವವರು ತುಂಬಾ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.
ಸ್ವಭಾವ: ಇವರು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಅನಗತ್ಯ ಗಲಾಟೆ ಅಥವಾ ವಿವಾದಗಳಿಂದ ದೂರವಿರಲು ಇಷ್ಟಪಡುತ್ತಾರೆ.
ಲಕ್ಷಣ: ಸದಾ ಶಾಂತವಾಗಿರುವ ಇವರು, ಅಗತ್ಯವಿದ್ದಾಗ ಮಾತ್ರ ಮಾತನಾಡುತ್ತಾರೆ. ಏನನ್ನಾದರೂ ಹೇಳುವ ಮೊದಲು ಹತ್ತು ಬಾರಿ ಯೋಚಿಸುವ ಗುಣ ಇವರದ್ದು.
4. ಸ್ಟಾರ್ ಫಿಶ್ ಭಂಗಿ (Starfish Position)
ಕೈಕಾಲುಗಳನ್ನು ಅಗಲವಾಗಿ ಚಾಚಿ ನಕ್ಷತ್ರದ ಆಕಾರದಲ್ಲಿ ಮಲಗುವವರು ಸ್ನೇಹಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ.
ಸ್ವಭಾವ: ಇವರು ಅತ್ಯುತ್ತಮ ಸ್ನೇಹಿತರಾಗಿರುತ್ತಾರೆ. ಇತರರು ಹೇಳುವುದನ್ನು ಬಹಳ ತಾಳ್ಮೆಯಿಂದ ಕೇಳಿಸಿಕೊಳ್ಳುವ ಗುಣ ಇವರಲ್ಲಿದೆ.
ಲಕ್ಷಣ: ಬೇರೆಯವರ ಕಷ್ಟಗಳನ್ನು ತಮ್ಮದೇ ಕಷ್ಟವೆಂದು ಭಾವಿಸಿ ಸಹಾಯ ಮಾಡಲು ಇವರು ಯಾವಾಗಲೂ ಸಿದ್ಧರಿರುತ್ತಾರೆ. ಇವರಿಗೆ ಸಂಬಂಧಗಳೇ ಆಸ್ತಿ.
5. ಬೋರಲಾಗಿ ಮಲಗುವುದು (Stomach Sleepers)
ಹೊಟ್ಟೆ ನೆಲಕ್ಕೆ ತಾಗುವಂತೆ ಬೋರಲಾಗಿ ಮಲಗುವವರು ನೇರ ನುಡಿಯ ವ್ಯಕ್ತಿತ್ವದವರಾಗಿರುತ್ತಾರೆ.
ಸ್ವಭಾವ: ಇವರು ತುಂಬಾ ತಮಾಷೆಯ ಸ್ವಭಾವದವರು ಮತ್ತು ಸದಾ ಆಶಾವಾದಿಗಳಾಗಿರುತ್ತಾರೆ. ಪ್ರತಿಯೊಂದು ಕೆಲಸವನ್ನು ಶಿಸ್ತುಬದ್ಧವಾಗಿ ಮಾಡಲು ಪ್ರಯತ್ನಿಸುತ್ತಾರೆ.
ಲಕ್ಷಣ: ಕೆಲವೊಮ್ಮೆ ಇವರಲ್ಲಿ ಆತ್ಮವಿಶ್ವಾಸದ ಕೊರತೆ ಅಥವಾ ಅಸುರಕ್ಷಿತ ಭಾವನೆ ಕಂಡುಬರಬಹುದು. ಆದರೂ, ತಮ್ಮ ಕೋಪ ಅಥವಾ ನಕಾರಾತ್ಮಕ ಭಾವನೆಗಳನ್ನು ಮೆಟ್ಟಿನಿಂತು ಯಶಸ್ಸು ಪಡೆಯಲು ಇವರು ನಿರಂತರ ಶ್ರಮಿಸುತ್ತಾರೆ.








