ತುಮಕೂರು : ತುಮಕೂರಿನಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು ಕಾರು ಹರಿದು 13 ವರ್ಷದ ಬಾಲಕ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಈ ದುರಂತ ನಡೆದಿದೆ.
ತಂದೆಯ ಬಟ್ಟೆ ಅಂಗಡಿಯ ಮುಂದೆ ಶೋಬಿತ್ (13) ಆಟ ಆಡುತ್ತಿದ್ದ ಈ ವೇಳೆ ವೇಗವಾಗಿ ಬಂದು ಬಾಲಕನಿಗೆ ಕಾರು ಒಂದು ಡಿಕ್ಕಿ ಹೊಡೆದಿದೆ. ತಕ್ಷಣ ಶೋಭಿತ್ ನನ್ನು ಆಸ್ಪತ್ರೆಗೆ ಕರೆದೋಯ್ಯಲಾಯಿತು. ಆದರೆ ಮಾರ್ಗಮಧ್ಯೆಯ್ಯೇ ಆಆತ ಟ ಸಾವನಪ್ಪಿದ್ದಾನೆ. ಘಟನ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.








