ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯು (CRPF) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಿಪಾಯಿ (ಟೆಕ್ನಿಕಲ್, ಟ್ರೇಡ್ಸ್ಮನ್ ಮತ್ತು ಪಯೋನಿಯರ್) ವಿಭಾಗದ ಒಟ್ಟು 9,195 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಇಂದಿನಿಂದಲೇ ಆರಂಭಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂದಿನಿಂದಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಮೇ 19, 2026 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ:
ಒಟ್ಟು 9,195 ಹುದ್ದೆಗಳಲ್ಲಿ ವಿಂಗಡಣೆ ಹೀಗಿದೆ:
ಕಾನ್ಸ್ಟೇಬಲ್ (ಟೆಕ್ನಿಕಲ್ ಮತ್ತು ಟ್ರೇಡ್ಸ್ಮನ್): ಒಟ್ಟು 9,175 ಹುದ್ದೆಗಳು. (ಪುರುಷರು – 9,096, ಮಹಿಳೆಯರು – 79). ಇವುಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ.
ಕಾನ್ಸ್ಟೇಬಲ್ (ಪಯೋನಿಯರ್ ವಿಂಗ್): ಒಟ್ಟು 20 ಹುದ್ದೆಗಳು (ಕೇವಲ ಪುರುಷರಿಗೆ). ಇದರಲ್ಲಿ ಮೇಸನ್ (13) ಮತ್ತು ಎಲೆಕ್ಟ್ರಿಷಿಯನ್ (7) ಹುದ್ದೆಗಳಿದ್ದು, ಇವುಗಳನ್ನು ಅಖಿಲ ಭಾರತ ಮಟ್ಟದಲ್ಲಿ ಭರ್ತಿ ಮಾಡಲಾಗುತ್ತದೆ.
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಲೆವೆಲ್-3 ಅನ್ವಯ ತಿಂಗಳಿಗೆ ₹21,700 ರಿಂದ ₹69,100 ವರೆಗೆ ವೇತನ ದೊರೆಯಲಿದೆ.
ವಿದ್ಯಾರ್ಹತೆ ಮತ್ತು ವಯೋಮಿತಿ (ದಿನಾಂಕ 01/01/2026 ಕ್ಕೆ ಅನ್ವಯ):
ಚಾಲಕ (Driver): 10ನೇ ತರಗತಿ ತೇರ್ಗಡೆ ಮತ್ತು ಹೆವಿ ಟ್ರಾನ್ಸ್ಪೋರ್ಟ್ ವೆಹಿಕಲ್ (HTV) ಚಾಲನಾ ಪರವಾನಗಿ ಕಡ್ಡಾಯ.
ಮೆಕ್ಯಾನಿಕ್ ಮೋಟಾರ್ ವೆಹಿಕಲ್ (MMV): 10ನೇ ತರಗತಿ ಜೊತೆಗೆ ಐಟಿಐ (ITI) ಪ್ರಮಾಣಪತ್ರ ಅಥವಾ ಅಪ್ರೆಂಟಿಸ್ಶಿಪ್ ಹೊಂದಿರಬೇಕು.
ಇತರೆ ಟ್ರೇಡ್ಸ್ಮನ್: ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಮತ್ತು ಸಂಬಂಧಿತ ವೃತ್ತಿಯಲ್ಲಿ ಪರಿಣತಿ ಹೊಂದಿರಬೇಕು.
ವಯೋಮಿತಿ: ಡ್ರೈವರ್ ಹುದ್ದೆಗಳಿಗೆ 21 ರಿಂದ 27 ವರ್ಷ. ಉಳಿದ ಹುದ್ದೆಗಳಿಗೆ 18 ರಿಂದ 23 ವರ್ಷ. (SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ).
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯು ಈ ಕೆಳಗಿನ ಹಂತಗಳಲ್ಲಿ ನಡೆಯಲಿದೆ:
ದೈಹಿಕ ಸಾಮರ್ಥ್ಯ ಪರೀಕ್ಷೆ (PET) ಮತ್ತು ದೈಹಿಕ ಗುಣಮಟ್ಟ ಪರೀಕ್ಷೆ (PST).
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT).
ಟ್ರೇಡ್ ಟೆಸ್ಟ್.
ದಾಖಲೆಗಳ ಪರಿಶೀಲನೆ.
ವೈದ್ಯಕೀಯ ಪರೀಕ್ಷೆ.
ಪರೀಕ್ಷಾ ವಿಧಾನ:
ಲಿಖಿತ ಪರೀಕ್ಷೆ: 100 ಅಂಕಗಳ 100 ಪ್ರಶ್ನೆಗಳಿರುತ್ತವೆ (ಸಮಯ 2 ಗಂಟೆ). ಇದರಲ್ಲಿ ರೀಸನಿಂಗ್, ಸಾಮಾನ್ಯ ಜ್ಞಾನ, ಗಣಿತ ಮತ್ತು ಹಿಂದಿ/ಇಂಗ್ಲಿಷ್ ವಿಷಯಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಮಾರ್ಕಿಂಗ್ ಇರುತ್ತದೆ.
ದೈಹಿಕ ಅಳತೆ: ಪುರುಷರ ಎತ್ತರ 170 ಸೆಂ.ಮೀ ಮತ್ತು ಮಹಿಳೆಯರ ಎತ್ತರ 157 ಸೆಂ.ಮೀ ಇರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು CRPF ನ ಅಧಿಕೃತ ವೆಬ್ಸೈಟ್ ಆದ rect.crpf.gov.in ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.








