ಕಲಬುರ್ಗಿ : ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಕೆಎಸ್ಆರ್ಪಿ ಕಾನ್ಸ್ಟೇಬಲ್ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಗೊಬ್ಬುರ್ ಬಿ ಗ್ರಾಮದ ಬಳಿ ನಡೆದಿದೆ.
ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಗೊಬ್ಬರ ಬಿ ಗ್ರಾಮದಲ್ಲಿ ಇಂದು ಕೆ ಎಸ್ ಆರ್ ಪಿ ಕಾನ್ಸ್ಟೇಬಲ್ ಧರೆಪ್ಪ (26) ದುರ್ಮರಣ ಹೊಂದಿದ್ದಾನೆ. ಧರೆಪ್ಪ ಕಲಬುರ್ಗಿಯಿಂದ ಶಿರವಾಳ ಗ್ರಾಮಕ್ಕೆ ಹೊರಟಿದ್ದು ಈ ವೇಳೆ ಆತನ ಬೈಕುಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿ ಸಾವನಪ್ಪಿದ್ದಾನೆ. ಸ್ಥಳಕ್ಕೆ ಡಿವೈಎಸ್ಪಿ ತಮ್ಮರಾಯ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಗಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








