Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ವಿದೇಶಿ ವಿವಿಗಳಲ್ಲಿ ಕಲಿಯಬೇಕೇ? ಉಚಿತ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನಕ್ಕೆ ಹೀಗೆ ಅರ್ಜಿ ಸಲ್ಲಿಸಿ

20/04/2026 5:30 AM

ಮಾವು Vs ಕಲ್ಲಂಗಡಿ: ನಿಮ್ಮ ದೇಹವನ್ನು ಬೇಸಿಗೆಯಲ್ಲಿ ತಂಪಾಗಿರಿಸಲು ಯಾವುದು ಬೆಸ್ಟ್?

20/04/2026 5:20 AM

ಬೇಸಿಗೆಯ ಬಿಸಿಲಿಗೆ ‘ಗೊಂದು ಕಟೀರಾ’ ರಾಮಬಾಣ: ಇದು ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ಅದ್ಭುತ ಮದ್ದು!

20/04/2026 5:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » NMMS ಪರೀಕ್ಷೆ ಫಲಿತಾಂಶ: ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದ ಸಾಗರದ ಪ್ರತಿಭೆಗಳು, ಮೇಲುಗೈ
KARNATAKA

NMMS ಪರೀಕ್ಷೆ ಫಲಿತಾಂಶ: ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದ ಸಾಗರದ ಪ್ರತಿಭೆಗಳು, ಮೇಲುಗೈ

By kannadanewsnow0918/04/2026 11:41 AM

ಶಿವಮೊಗ್ಗ: ಪ್ರತಿಭೆ ಎನ್ನುವುದು ಕೇವಲ ಶ್ರೀಮಂತರ ಸೊತ್ತಲ್ಲ, ಅದು ಶ್ರಮಿಸುವವರ ಆಸ್ತಿ ಎಂಬುದನ್ನು ಸಾಗರ ತಾಲೂಕಿನ ವಿದ್ಯಾರ್ಥಿಗಳು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಫೆಬ್ರವರಿ 1ರಂದು ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್ (NMMS) ಪರೀಕ್ಷೆಯಲ್ಲಿ ಸಾಗರ ತಾಲೂಕಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡುವ ಮೂಲಕ ಜಿಲ್ಲೆಯಲ್ಲೇ ಮೇಲುಗೈ ಸಾಧಿಸಿದ್ದಾರೆ.

​ಶಿವಮೊಗ್ಗ ಜಿಲ್ಲೆಗೆ ಪ್ರಥಮ: ಸಾಗರ ಸಾಧಕರ ಸಂತೆ

​ಈ ಬಾರಿಯ ಪರೀಕ್ಷೆಯಲ್ಲಿ ಸಾಗರ ತಾಲೂಕಿನ ಮಾಸೂರು ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಕೃತಿ 116 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಕೇವಲ ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಒಟ್ಟಾರೆ ಫಲಿತಾಂಶದಲ್ಲೂ ಸಾಗರ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ.

​ಪ್ರಮುಖ ಸಾಧಕರು:

  • ​ಪ್ರಕೃತಿ: 116 ಅಂಕ (ಜಿಲ್ಲೆಗೆ ಪ್ರಥಮ)
  • ​ಮಂಜು ಪಾಟೀಲ್: 113 ಅಂಕ
  • ​ರಮ್ಯಾ ರಮೇಶ್: 106 ಅಂಕ

​ವಿಶೇಷವೆಂದರೆ, ತಾಲೂಕಿನ 13 ವಿದ್ಯಾರ್ಥಿಗಳು 100ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದರೆ, 108 ವಿದ್ಯಾರ್ಥಿಗಳು 75ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

​ಆರ್ಥಿಕ ಸಬಲತೆಗೆ ಮೆರಿಟ್ ಆಸರೆ

​ಆರ್ಥಿಕವಾಗಿ ಹಿಂದುಳಿದಿರುವ ಆದರೆ ಓದಿನಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಎಂಟನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ನಾಲ್ಕು ವರ್ಷಗಳ ಕಾಲ (9ನೇ ತರಗತಿಯಿಂದ ಪಿಯುಸಿವರೆಗೆ) ಪ್ರತಿ ತಿಂಗಳು 1,200 ರೂ. ವಿದ್ಯಾರ್ಥಿ ವೇತನ ದೊರೆಯಲಿದೆ. ಅಂದರೆ ಪ್ರತಿ ವಿದ್ಯಾರ್ಥಿಯು ಒಟ್ಟು 48,000 ರೂ. ಗಳ ರಾಷ್ಟ್ರಮಟ್ಟದ ಮೆರಿಟ್ ಸ್ಕಾಲರ್ಶಿಪ್ ಪಡೆಯಲಿದ್ದು, ಇದು ಅವರ ಮುಂದಿನ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯಾಗಲಿದೆ.

​ಸತತ ಯಶಸ್ಸಿನ ಹಾದಿ

​ಕಳೆದ ವರ್ಷವೂ ಸಾಗರ ತಾಲೂಕು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆ ಬರೆದಿತ್ತು. ಈ ವರ್ಷವೂ ಅದೇ ಲಯವನ್ನು ಕಾಯ್ದುಕೊಂಡಿರುವ ಸಾಗರ, ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಲೂಕಿನ ಒಟ್ಟು 953 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಿದ್ದರು.

​ಶಾಸಕ ಗೋಪಾಲಕೃಷ್ಣ ಬೇಳೂರು, ಬಿಇಓ ಅಭಿನಂದನೆ

​ವಿದ್ಯಾರ್ಥಿಗಳ ಈ ಐತಿಹಾಸಿಕ ಸಾಧನೆಗೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸದಾನಂದ ಸ್ವಾಮಿ ಸಿ. ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

​”ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಸಮರ್ಪಕ ಮಾರ್ಗದರ್ಶನ ಹಾಗೂ ಸಂಪನ್ಮೂಲ ವ್ಯಕ್ತಿಗಳ ತರಬೇತಿಯ ಫಲವಾಗಿ ಇಂದು ಸಾಗರ ತಾಲೂಕು ಜಿಲ್ಲೆಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಧಕ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಗಳು,” ಎಂದು ಅವರು ಶುಭ ಹಾರೈಸಿದ್ದಾರೆ.

​ಗ್ರಾಮೀಣ ಭಾಗದ ಪ್ರತಿಭೆಗಳು ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಿಂಚುತ್ತಿರುವುದು ಇಡೀ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ನಾಳೆ ಸೊರಬದ ದೂಗೂರು ಗ್ರಾಮದಲ್ಲಿ ಶ್ರೀ ಪಾರ್ವತಿ ದೇವಿಯ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಲೋಕಾರ್ಪಣೆ

19/04/2026 9:28 PM1 Min Read

BREAKING: ಮೈಸೂರಿನ ಕಾವೇರಿ ನದಿ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

19/04/2026 9:15 PM1 Min Read

ಶಿವಮೊಗ್ಗ: ಸಾಗರದ ಸಿರಿವಂತೆಯ ‘ಚಿತ್ರಸಿರಿ ಪ್ರಶಸ್ತಿ’ ಹೃದಯವಂತಿಕೆಯ ಪ್ರತೀಕ: ಬಿ.ಆರ್. ಜಯಂತ್

19/04/2026 9:08 PM2 Mins Read
Recent News

ನೀವು ವಿದೇಶಿ ವಿವಿಗಳಲ್ಲಿ ಕಲಿಯಬೇಕೇ? ಉಚಿತ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನಕ್ಕೆ ಹೀಗೆ ಅರ್ಜಿ ಸಲ್ಲಿಸಿ

20/04/2026 5:30 AM

ಮಾವು Vs ಕಲ್ಲಂಗಡಿ: ನಿಮ್ಮ ದೇಹವನ್ನು ಬೇಸಿಗೆಯಲ್ಲಿ ತಂಪಾಗಿರಿಸಲು ಯಾವುದು ಬೆಸ್ಟ್?

20/04/2026 5:20 AM

ಬೇಸಿಗೆಯ ಬಿಸಿಲಿಗೆ ‘ಗೊಂದು ಕಟೀರಾ’ ರಾಮಬಾಣ: ಇದು ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ಅದ್ಭುತ ಮದ್ದು!

20/04/2026 5:10 AM

‘LPG ಸಿಲಿಂಡರ್’ ವಿತರಣೆ ಪಡೆಯುವ ಮುನ್ನ ಹುಷಾರ್! ಈ 4 ವಿಷಯಗಳನ್ನು ತಪ್ಪದೇ ಪರೀಕ್ಷಿಸಿ

20/04/2026 4:50 AM
State News
KARNATAKA

ಶಿವಮೊಗ್ಗ: ನಾಳೆ ಸೊರಬದ ದೂಗೂರು ಗ್ರಾಮದಲ್ಲಿ ಶ್ರೀ ಪಾರ್ವತಿ ದೇವಿಯ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಲೋಕಾರ್ಪಣೆ

By kannadanewsnow0919/04/2026 9:28 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ದೂಗೂರು ಗ್ರಾಮದಲ್ಲಿ ಶ್ರೀ ಪಾರ್ವತೀ ದೇವಿಯ ಪುನರ್ ಪ್ರಾಣಪ್ರತಿಷ್ಠಾಪನೆ, ದೇವಾಲಯ ಪ್ರವೇಶೋತ್ಸವ ಹಾಗೂ ಕಳಶಾರೋಹಣ…

BREAKING: ಮೈಸೂರಿನ ಕಾವೇರಿ ನದಿ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

19/04/2026 9:15 PM

ಶಿವಮೊಗ್ಗ: ಸಾಗರದ ಸಿರಿವಂತೆಯ ‘ಚಿತ್ರಸಿರಿ ಪ್ರಶಸ್ತಿ’ ಹೃದಯವಂತಿಕೆಯ ಪ್ರತೀಕ: ಬಿ.ಆರ್. ಜಯಂತ್

19/04/2026 9:08 PM

ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ

19/04/2026 8:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.