ಬೆಂಗಳೂರು : ಕಾಂಗ್ರೆಸ್ ಶಾಸಕರ ಪಾಲಿಗೆ ಜಿಲ್ಲಾ ಉಸ್ತುವಾರಿ ಸಚಿವರ ಇದೀಗ ವಿಲನ್ ಆಗಿದ್ದಾರೆ. ಹೌದು ಕಾಂಗ್ರೆಸ್ ಶಾಸಕರ ಕ್ಷೇತ್ರದ ಅನುದಾನದ ಮೇಲೆ ಸಚಿವರಿಗೆ ಕಣ್ಣು ಬಿದ್ದಿದ್ದು, ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನವನ್ನು ಸಚಿವರು ತಮ್ಮ ಕ್ಷೇತ್ರಕ್ಕೆ ಡೈವರ್ಟ್ ಮಾಡಿಕೊಂಡಿದ್ದಾರೆ ಶಾಸಕರ ಕ್ಷೇತ್ರಕ್ಕೆ ಮಂಜೂರಾದ ಅನುದಾನಕ್ಕೆ ಸಚಿವರಿಂದಲೇ ಇದೀಗ ಕತ್ತರಿ ಬಿದ್ದಿದೆ.
ಮಂಜೂರು ಆದ ಅನುದಾನದ ಆದೇಶಕ್ಕೆ ಸಚಿವರು ತಿದ್ದುಪಡಿ ಮಾಡಿದ್ದಾರೆ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ಸಚಿವರು ಕೊಂಡೊಯ್ಯುತ್ತಿದ್ದಾರೆ ಸಚಿವರ ನಡೆಯಿಂದ ಶಾಸಕರು ಇದೀಗ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಶಾಸಕರ ದೆಹಲಿ ಭೇಟಿ ವೇಳೆಯೂ ಹೈಕಮಾಂಡ್ ಮುಂದೆ ಈ ಒಂದು ವಿಷಯ ಪ್ರಸ್ತಾಪವಾಗಿದೆ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಮಂಜೂರಾಗಿದ್ದ ಪ್ರಗತಿ ಕಾಲೋನಿ ಅನುದಾನ 3 ಕೋಟಿ ರೂಪಾಯಿ ದಾನದಲ್ಲಿ 99 ಲಕ್ಷ ಹಣ ಬಿಡುಗಡೆಯಾಗಿದ್ದು ಹಣ ಬಿಡುಗಡೆ ಬಳಿಕ ಆದೇಶವನ್ನೇ ಉಸ್ತುವಾರಿ ಸಚಿವರು ಮಾರ್ಪಾಡು ಮಾಡಿದ್ದಾರೆ ಆದೇಶದಲ್ಲಿ ಕ್ಷೇತ್ರದ ಹೆಸರನ್ನೇ ತಿದ್ದುಪಡಿ ಮಾಡಿ ಅನುದಾನ ಡೈವರ್ಟ್ ಮಾಡಿದ್ದಾರೆ.
ಆದೇಶದಲ್ಲಿ ಕ್ಷೇತ್ರದ ಹೆಸರಿನ ತಿದ್ದುಪಡಿ ಮಾಡಿ ಅನುದಾನವನ್ನು ಡೈವರ್ಟ್ ಮಾಡಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಶಾಸಕರ ಅನುದಾನ ಡೈವರ್ಟ್ ಮಾಡಲು ಸಚಿವರಿಂದ ಸಚಿವರಿಗೆ ಸಾತ್ ನೀಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನ ಎಸ್ ಸಿ ಎಸ್ ಟಿ ಕಾಲೋನಿಗಳ ಅಭಿವೃದ್ಧಿಗೆ ಶಾಸಕರಿಗೆ ಹಣ ಮಂಜೂರು ಆಗಿತ್ತು. ಆದರೆ ಹಣ ಮಂಜೂರಾತಿ ಬಳಿಕ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ ಡೈವರ್ಟ್ ಮಾಡಲಾಗಿದೆ.








