ಬೆಂಗಳೂರು : ಬೆಂಗಳೂರಲ್ಲಿ ಅಕ್ರಮ ಸಂಬಂಧದ ಬಗ್ಗೆ ಪತ್ನಿಗೆ ಹೇಳಿದ್ದಾರೆ ಎಂದು ಈ ಹಿನ್ನೆಲೆಯಲ್ಲಿ ಅಪ್ಪ ಮತ್ತು ಮಗನಿಂದ ದೇವಿಕಾ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ವೈಯ್ಯಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾತ್ರಿ 10:00 ಸುಮಾರಿಗೆ ಮನೆಯ ಬಳಿ ನಿಂತಿದ್ದಾಗ ಅಪ್ಪ-ಮಗ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ನಾಗರಾಜ್ ಮತ್ತು ಮಗ ಲೋಕೇಶ್ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಪೊಲೀಸರು ಠಾಣೆಗೆ ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ನಮ್ಮ ಮೇಲು ಹಲ್ಲೆ ನಡೆಸಿದ್ದಾರೆ ಎಂದು ತಂದೆ ಮಗನಿಂದ ಪ್ರತಿ ದೂರು ದಾಖಲಾಗಿದೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಮಹಿಳೆಯಿಂದ ದೂರು ಹಾಗೂ ಅಪ್ಪ ಮಗನಿಂದ ಪ್ರತಿ ದೂರು ದಾಖಲಾಗಿದೆ.








