ಉಡುಪಿ: ಏಪ್ರಿಲ್.19ರಂದು ನಡೆಯಬೇಕಿದ್ದಂತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇಡೀ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೊಸದಾಗಿ ಚುನಾವಣಾ ಆಧಿಸೂಚನೆ ಹೊರಡಿಸಲು ನಿರ್ದೇಶಿಸಿದೆ ಎಂಬುದಾಗಿ ಅರ್ಜಿದಾರ ದಿನಕರ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.
ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಮತದಾರರ ಪಟ್ಟಿಯ ಲೋಪ ಸೇರಿದಂತೆ ವಿವಿಧ ಹಗರಣಗಳನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸುಮಾರು 3,000ಕ್ಕೂ ಹೆಚ್ಚು ಶಿಕ್ಷಕರು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ತಡೆಯಜ್ಞೆ ನೀಡಿರುವುದಾಗಿ ತಿಳಿಸಿದರು.
ಏಪ್ರಿಲ್.19ರಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಿಗದಿಯಾಗಿತ್ತು. ಈ ಚುನಾವಣಾ ಪ್ರಕ್ರಿಯೆಗೆ ಇದೀಗ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಸ್ಥಗಿತಗೊಳ್ಳಲಿದೆ. ಹೊಸದಾಗಿ ಮತದಾರರ ಪಟ್ಟಿಯನ್ನು ರಚಿಸಬೇಕಿದೆ. ಪಟ್ಟಿಯಿಂದ ಕೈಬಿಡಲಾಗಿದ್ದಂತ ಅರ್ಹ ಶಿಕ್ಷಕರನ್ನು ಸೇರ್ಪಡೆಯ ಬಳಿಕ ಅನುಮೋದನೆಯನ್ನು ಪಡೆಯಬೇಕಿದೆ. ಆ ಬಳಿಕ ಹೊಸದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿ ಚುನಾವಣೆ ನಡೆಯಲಿದೆ ಎಂದರು.
ಉಡುಪಿ ಜಿಲ್ಲೆಯ ಇಡೀ ಜಿಲ್ಲೆಯ ಮತದಾರರನ್ನು ದುರುದ್ದೇಶದಿಂದ ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ತಾನು ಅರ್ಜಿ ಸಲ್ಲಿಸಿದ್ದೆ. ಈಗ ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಇದೊಂದು ನ್ಯಾಯ, ಸತ್ಯಕ್ಕೆ ಸಂದ ಜಯವಾಗಿದೆ ಎಂಬುದಾಗಿ ಅರ್ಜಿದಾರ ದಿನಕರ್ ಶೆಟ್ಟಿ ಅವರು ಹೇಳಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
‘ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ ಚುನಾವಣೆಗೆ ‘ಹೈಕೋರ್ಟ್ ತಡೆಯಾಜ್ಞೆ’
ಮುಖೇಶ್ ಅಂಬಾನಿ ಹಿಂದಿಕ್ಕಿ ಮತ್ತೆ ಭಾರತದ ಅತಿಮೂದ ಶ್ರೀಮಂತನಾದ ಗೌತಮ್ ಅದಾನಿ








