ಬೆಂಗಳೂರು : ರಾಜ್ಯದಲ್ಲಿ ಚಾಣಕ್ಯ ಬಂದ ವೇಳೆ ಅಪಘಾತ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚಾರಣಕ್ಕೆ ತೆರಳುವವರಿಗೆ ಇದೀಗ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಮಾರ್ಗಸೂರ್ಚಿಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇದೀಗ ಬಿಡುಗಡೆ ಮಾಡಿದ್ದಾರೆ..
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಚಾರಣಕ್ಕೆ ಹೋಗುವವರಿಗೆ ಎಸ್ಓಪಿ ಕಡ್ಡಾಯಗೊಳಿಸಲಾಗಿದೆ. ಸೆವೆನ್ ಮಿನಿಸ್ಟರ್ ಕ್ವಾಟರ್ಸ್ನಲ್ಲಿ ಸಚಿವ ಈಶ್ವರ ಖಂಡ್ರೆ ಎಸ್ಓಪಿ ಅನ್ನು ಬಿಡುಗಡೆ ಮಾಡಿದರು. ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಂಗಳೂರಲ್ಲಿ ಚರಣಕ್ಕೆ ಬಂದು ಓರ್ವ ಬಾಲಕಿ ಸಾವನ್ನುಪ್ಪಿದ್ದಳು. ಘಟನೆಗಳು ಪುನರಾವರ್ತನೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಎಸ್ಓಪಿ ಜಾರಿಗೊಳಿಸಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು:
ರಿಯಲ್ ಟೈಮ್ ಟ್ರ್ಯಾಕಿಂಗ್ ಆ್ಯಪ್: ಚಾರಣಿಗರ ಚಲನವಲನವನ್ನು ಪತ್ತೆಹಚ್ಚಲು ವಿಶೇಷ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗುತ್ತಿದೆ. ಚಾರಣಕ್ಕೆ ತೆರಳುವವರು ಈ ಆ್ಯಪ್ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇದು ಕಾಡಿನೊಳಗೆ ದಾರಿ ತಪ್ಪಿದಲ್ಲಿ ಅವರನ್ನು ಹುಡುಕಲು ನೆರವಾಗಲಿದೆ.
ಕಡ್ಡಾಯ ವಿಮೆ (Mandatory Insurance): ಚಾರಣದ ಸಮಯದಲ್ಲಿ ಸಂಭವಿಸಬಹುದಾದ ಅಪಘಾತ ಅಥವಾ ತುರ್ತು ಪರಿಸ್ಥಿತಿಗಳಿಗಾಗಿ ಚಾರಣಿಗರಿಗೆ ಗುಂಪು ವಿಮೆಯನ್ನು ಕಡ್ಡಾಯಗೊಳಿಸಲಾಗಿದೆ.
ವೈರ್‌ಲೆಸ್ ಉಪಕರಣಗಳ ಬಳಕೆ: ಚಾರಣದ ಮಾರ್ಗದರ್ಶಕರು (Nature Guides) ಇನ್ಮುಂದೆ ವೈರ್‌ಲೆಸ್ ಸಂವಹನ ಸಾಧನಗಳನ್ನು ಹೊಂದಿರಬೇಕು ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.
ಮಾರ್ಗದರ್ಶಕರ ಹೊಣೆಗಾರಿಕೆ: ಯಾವುದೇ ತಂಡದ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿಯನ್ನು ಆ ತಂಡದ ಲೀಡರ್ ಅಥವಾ ಮಾರ್ಗದರ್ಶಕರ ಮೇಲೆ ಹೊರಿಸಲಾಗುವುದು.
ಹೊಸ ನಿಯಮಕ್ಕೆ ಕಾರಣ: ಕೊಡಗಿನ ತಡಿಯಂಡಮೋಲ್ ಮತ್ತು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಇತ್ತೀಚೆಗೆ ಚಾರಣಿಗರು ದಾರಿ ತಪ್ಪಿ ನಾಪತ್ತೆಯಾಗಿದ್ದ ಘಟನೆಗಳಿಂದ ಎಚ್ಚೆತ್ತುಕೊಂಡ ಸರ್ಕಾರ ಈ ಕ್ರಮ ಕೈಗೊಂಡಿದೆ.








