ನವದೆಹಲಿ: ಟಿಎಸ್‌ಇ (TCS) ನಾಸಿಕ್ ಪ್ರಕರಣದ ಬೆನ್ನಲ್ಲೇ, ದೇಶದಲ್ಲಿ ನಡೆಯುತ್ತಿರುವ ವಂಚನೆಯ ಧಾರ್ಮಿಕ ಮತಾಂತರಗಳನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಘೋಷಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ.
ಬಲವಂತದ ಅಥವಾ ಆಮಿಷವೊಡ್ಡಿ ಮಾಡುವ ಮತಾಂತರಗಳು ಕೇವಲ ವೈಯಕ್ತಿಕ ವಿಚಾರವಲ್ಲ, ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಭಯೋತ್ಪಾದನಾ ಕೃತ್ಯಕ್ಕೆ ಸಮಾನ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಇತ್ತೀಚೆಗೆ ನಾಸಿಕ್‌ನ ಟಿಸಿಎಸ್ ಉದ್ಯೋಗಿಯೊಬ್ಬರ ಮತಾಂತರಕ್ಕೆ ಸಂಬಂಧಿಸಿದ ವಿವಾದದ ನಂತರ ಈ ಬೆಳವಣಿಗೆ ನಡೆದಿದೆ. ಈ ಘಟನೆಯು ದೇಶಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು.
ಅರ್ಜಿದಾರರು ಮತಾಂತರ ತಡೆಗೆ ದೇಶಾದ್ಯಂತ ಏಕರೂಪದ ಮತ್ತು ಕಠಿಣ ಕಾನೂನನ್ನು ಜಾರಿಗೆ ತರಬೇಕು ಹಾಗೂ ಇದನ್ನು ಐಪಿಸಿ (IPC) ಅಡಿಯಲ್ಲಿ ಗಂಭೀರ ಅಪರಾಧವೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಜನರನ್ನು ವಂಚಿಸಿ ಮತಾಂತರ ಮಾಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.








