ನವದೆಹಲಿ : ದೆಹಲಿ ಕೋರ್ಟ್ ಪ್ರಕರಣ ಒಂದರಲ್ಲಿ ಐತಿಹಾಸಿಕ ತೀರ್ಪು ನೀಡಿದ್ದು, ಸೈನಿಕನ ಪತ್ನಿ ಆಸೆಯನ್ನು ಪೂರ್ಣಗೊಳಿಸಲು ಮುಂದಾಗಿದೆ. ದೀರ್ಘಕಾಲದವರೆಗೆ ಕೋಮಾದಲ್ಲಿರುವ ಭಾರತೀಯ ಸೇನಾ ಸೈನಿಕನ ಸ್ಪರ್ಮ್ ಹೊರತೆಗೆದು ಸಂರಕ್ಷಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರ್ ನೇತೃತ್ವದ ಪೀಠವು ತನ್ನ ತೀರ್ಪಿನಲ್ಲಿ, ಸೈನಿಕನು ತನ್ನ ಪತ್ನಿಯೊಂದಿಗೆ ಐವಿಎಫ್ ಚಿಕಿತ್ಸೆಗೆ ಒಳಗಾಗಲು ಈಗಾಗಲೇ ಒಪ್ಪಿಗೆ ನೀಡಿದ್ದಾರೆ.
ಕಳೆದ ಜುಲೈ 2025 ರಲ್ಲಿಸೈನಿಕ ಗಸ್ತಿನಲ್ಲಿದ್ದಾಗ ಮೇಲಿನಿಂದ ಕೆಳಗೆ ಬಿದ್ದಿದ್ದರು. ಅವರ ತಲೆಗೆ ತೀವ್ರವಾದ ಗಾಯವಾಗಿತ್ತು. ಮಿದುಳಿನಲ್ಲಾದ ಗಾಯದಿಂದ ಸೈನಿಕ ಕೋಮಾ ಸ್ಥಿತಿಯಲ್ಲಿದ್ದಾರೆ. ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. 2023 ರಲ್ಲಿ ಸೈನಿಕ ಹಾಗೂ ಅವರ ಪತ್ನಿ ಐವಿಎಫ್ ಗೆ ಒಪ್ಪಿಗೆ ನೀಡಿ ಚಿಕಿತ್ಸೆ ಶುರು ಮಾಡಿದ್ದರು. ಆದ್ರೆ ಸೈನಿಕನ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆ ನಿಲ್ಲಿಸಲಾಗಿದೆ. ಈಗ ಪತ್ನಿ ಕೋರ್ಟ್ ಮೆಟ್ಟಿಲೇರಿ ಒಪ್ಪಿಗೆ ಚಿಕಿತ್ಸೆ ಮುಂದುವರೆಸಲು ಒಪ್ಪಿಗೆ ಕೇಳಿದ್ದಾರೆ.
ಸೈನಿಕನ ಪತ್ನಿ ಅರ್ಜಿ ಪರಿಶೀಲನೆ ನಡೆಸಿದ ದೆಹಲಿ ಹೈಕೋರ್ಟ್, ತಾಯ್ತನ, ಘನತೆ ಮತ್ತು ಸಂತಾನೋತ್ಪತ್ತಿ ಸ್ವಾಯತ್ತತೆಯ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿದಿದೆ. ಅರ್ಜಿದಾರರು ಮತ್ತು ಅವರ ಪತಿ ಸ್ವಯಂಪ್ರೇರಣೆಯಿಂದ IVF ಕಾರ್ಯವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. . ಪತಿ ಒಪ್ಪಿಗೆ ನೀಡಿಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಹಾಗಾಗಿ ಐವಿಎಫ್ ಮುಂದುವರಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಹೇಳಿದೆ.
ಸಂತಾನೋತ್ಪತ್ತಿ ಸ್ವಾಯತ್ತತೆಯ ಹಕ್ಕು ಮೂಲಭೂತ ಹಕ್ಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರಿಗೆ ಮಕ್ಕಳಾಗುತ್ತವೆಯೇ ಎಂಬುದು ಮಾನವನ ಕೈಯಲ್ಲಿಲ್ಲ. ಒಬ್ಬ ವ್ಯಕ್ತಿಗೆ ಪೋಷಕರ ಭಾಗ್ಯ ಸಿಗುತ್ತದೆಯೇ ಎಂಬುದನ್ನು ವಿಧಿ ನಿರ್ಧರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.







