ಬೆಂಗಳೂರು : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲ 17 ಆರೋಪಗಳಿಗೆ ಶಿಕ್ಷ ಪ್ರಮಾಣ ಪ್ರಕಟಿಸಲಿದೆ.
ಅಪರಾಧಿಗಳ ಹಾಜರಾತಿ ದಾಖಲಿಸಿಕೊಂಡು ಕೋರ್ಟ್ ಶಿಕ್ಷ ಪ್ರಮಾಣ ಪ್ರಕಟದ ತೀರ್ಪನ್ನು ಕೆಲಕಾಲ ಮುಂದೂಡಿತು. ಇನ್ನು ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಧಾರವಾಡ ಭಾಗದ ಶಾಸಕರು ಆಗಮಿಸಿದ್ದಾರೆ ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದು ಶಾಸಕರಾದ ಕೋನರೆಡ್ಡಿ ಪ್ರಸಾದ ಅಬ್ಬಯ್ಯ ಆಗಮಿಸಿದ್ದಾರೆ.








