ಹಾಸನ : ಕಾವಾಡಿಗನ ಮೇಲೆ ಸಾಕಾನೆ ಒಂದು ದಾಳಿ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೊಡು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಆಹಾರ ನೀಡುವ ವೇಳೆ ದಂತದಿಂದ ಕಾವಾಡಿಗ ರಾಜುಗೆ ಸಾಕಾನೆ ಇರಿದಿದೆ.
ಕಾಡಾನೆ ಸೆರೆ ಕಾರ್ಯಚರಣೆಗೆ ಸಾಕಾನೆ ಸುಗ್ರೀವ ಬಂದಿದ್ದ. ಈ ವೇಳೆ ಕಾವಾಡಿಗ ರಾಜು ಸುಗ್ರೀವನಿಗೆ ಆಹಾರ ನೀಡಲು ಮುಂದಾಗಿದ್ದಾನೆ. ಸುಗ್ರೀವ ರಾಜುಗೆ ತಿವಿದು ಗಾಯಗೊಳಿಸಿದ್ದಾನೆ. ತಕ್ಷಣ ರಾಜವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








