Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ದೊಡ್ಡಆಲಹಳ್ಳಿಯ ಸಾಮಾನ್ಯ ಹುಡುಗ ಇಂದು ಕರ್ನಾಟಕದ ಮುಖ್ಯಮಂತ್ರಿ : ಡಿ.ಕೆ. ಶಿವಕುಮಾರ್ ರಾಜಕೀಯ ಪಯಣದ ಬಗ್ಗೆ ಇಲ್ಲಿದೆ ಮಾಹಿತಿ

​ಪ್ರಧಾನಿ ಮೋದಿ ಅಧಿಕಾರದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಇರಲ್ಲ: ‘ಆರ್ಥಿಕ ಸುನಾಮಿ’ ಎಚ್ಚರಿಕೆ ನೀಡಿದ ರಾಹುಲ್ ಗಾಂಧಿ!

BIG NEWS: ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ದಿಢೀರ್ ಕುಸಿತ : ಮೇ ತಿಂಗಳಲ್ಲಿ ಸರ್ಕಾರದ ಆದಾಯಕ್ಕೆ ₹455 ಕೋಟಿ ಹೊಡೆತ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಶಿವಮೊಗ್ಗದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ‘ಹಂಸಿಣಿ’ ಸಾವು
KARNATAKA

BREAKING: ಶಿವಮೊಗ್ಗದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ‘ಹಂಸಿಣಿ’ ಸಾವು

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ತರಬೇತಿ ನಿರತ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ‘ಹಂಸಿಣಿ’ ಎಂಬ ಹೆಸರಿನ ನೀರಾನೆ (Hippopotamus) ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿದೆ. ಗರ್ಭಾಶಯದ ತೀವ್ರ ಸೋಂಕಿನಿಂದ ಬಳಲುತ್ತಿದ್ದ ಹಂಸಿಣಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

ಸಾವಿಗೆ ಕಾರಣವೇನು?

ಹುಲಿ ಸಿಂಹಧಾಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರಾಕ್ಷರ ಅವರು ನೀಡಿರುವ ಮಾಹಿತಿಯಂತೆ, ಹಂಸಿಣಿಯ ಸಾವಿಗೆ ಬಹು ಅಂಗಾಂಗ ವೈಫಲ್ಯ ಮುಖ್ಯ ಕಾರಣವಾಗಿದೆ.

  • ಭ್ರೂಣ ಸಾವು: ಹಂಸಿಣಿ ಎಂಟು ತಿಂಗಳ ಗರ್ಭಿಣಿಯಾಗಿತ್ತು. ಮಾರ್ಚ್ ಮಧ್ಯಭಾಗದಲ್ಲೇ ಪ್ರಸವದ ಅವಧಿ ಮುಗಿದಿದ್ದರೂ, ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಭ್ರೂಣವು ಹೊಟ್ಟೆಯ ಒಳಗೇ ಮೃತಪಟ್ಟಿತ್ತು.

  • ಸೋಂಕು (Infection): ಹೊಟ್ಟೆಯಲ್ಲೇ ಮರಿ ಮೃತಪಟ್ಟಿದ್ದರಿಂದ ಗರ್ಭಾಶಯದಲ್ಲಿ ಗಂಭೀರ ಸೋಂಕು ಉಂಟಾಗಿತ್ತು. ಇದು ಇಡೀ ದೇಹಕ್ಕೆ ಹರಡಿ ಆರೋಗ್ಯ ಕ್ಷೀಣಿಸಲು ಕಾರಣವಾಯಿತು.

  • ಆಹಾರ ತ್ಯಜಿಸಿದ್ದ ಹಂಸಿಣಿ: ಕಳೆದ ಕೆಲವು ದಿನಗಳಿಂದ ಆಹಾರ ಸೇವನೆ ಸ್ಥಗಿತಗೊಳಿಸಿದ್ದ ನೀರಾನೆಯನ್ನು ಏಪ್ರಿಲ್ 10ರಂದು ಮೈಸೂರಿನ ತಜ್ಞ ವೈದ್ಯರ ತಂಡ ತಪಾಸಣೆ ನಡೆಸಿತ್ತು.

ಚಿಕಿತ್ಸೆಗೆ ಎದುರಾದ ಸವಾಲುಗಳು

ಮೂಲಗಳ ಪ್ರಕಾರ, ಗರ್ಭದಲ್ಲೇ ಮೃತಪಟ್ಟಿದ್ದ ಮರಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಬೇಕಿತ್ತು. ಆದರೆ, ಅಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಸುಧಾರಿತ ಉಪಕರಣಗಳು ಮತ್ತು ತಜ್ಞರ ತಂಡ ಗುಜರಾತ್‌ನ ಮುಕೇಶ್ ಅಂಬಾನಿ ಒಡೆತನದ ‘ವಂತಾರಾ’ ವನ್ಯಧಾಮದಲ್ಲಿ ಮಾತ್ರ ಲಭ್ಯವಿತ್ತು. ಸೌಲಭ್ಯಗಳ ಕೊರತೆಯು ಹಂಸಿಣಿಯ ಜೀವ ಉಳಿಸುವ ಹಾದಿಯಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿತು.

ಹಿನ್ನೆಲೆ: ಪಶುವೈದ್ಯೆಯ ದುರಂತ ಅಂತ್ಯ

ಗರ್ಭಿಣಿಯಾಗಿದ್ದ ಹಂಸಿಣಿ ಆಹಾರ ಸೇವಿಸುತ್ತಿಲ್ಲ ಎಂಬ ಕಾರಣಕ್ಕೆ ಮಾರ್ಚ್ 19ರ ರಾತ್ರಿ ತರಬೇತಿ ನಿರತ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಅದರ ಆರೋಗ್ಯ ತಪಾಸಣೆಗೆ ಮುಂದಾಗಿದ್ದರು. ಈ ವೇಳೆ ಹಂಸಿಣಿ ಏಕಾಏಕಿ ದಾಳಿ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಡಾ. ಸಮೀಕ್ಷಾ ಅವರು ಮರುದಿನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಆ ದುರಂತ ಘಟನೆ ನಡೆದ ಒಂದು ತಿಂಗಳೊಳಗೆ ನೀರಾನೆಯೂ ಸಾವನ್ನಪ್ಪಿದೆ.

ಬಾಲಗಂಗಾಧರನಾಥ ಸ್ವಾಮೀಜಿಗೆ ‘ಭಾರತ ರತ್ನ’ ನೀಡಲು ಶಿಫಾರಸು ಮಾಡಿ: ಸಿಎಂ, ಡಿಸಿಎಂಗೆ ಶಾಸಕರ ಮನವಿ

ಲೋಕಸಭೆ ಸದಸ್ಯರ ಬಲ 850ಕ್ಕೆ ಏರಿಕೆ?: ಏ.16ರಂದು ಸಂಸತ್ತಿನಲ್ಲಿ ಮಹತ್ವದ ಮಸೂದೆ ಮಂಡನೆ

Share. Facebook Twitter LinkedIn WhatsApp Email

Related Posts

BIG NEWS : ದೊಡ್ಡಆಲಹಳ್ಳಿಯ ಸಾಮಾನ್ಯ ಹುಡುಗ ಇಂದು ಕರ್ನಾಟಕದ ಮುಖ್ಯಮಂತ್ರಿ : ಡಿ.ಕೆ. ಶಿವಕುಮಾರ್ ರಾಜಕೀಯ ಪಯಣದ ಬಗ್ಗೆ ಇಲ್ಲಿದೆ ಮಾಹಿತಿ

8 Mins Read

BIG NEWS: ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ದಿಢೀರ್ ಕುಸಿತ : ಮೇ ತಿಂಗಳಲ್ಲಿ ಸರ್ಕಾರದ ಆದಾಯಕ್ಕೆ ₹455 ಕೋಟಿ ಹೊಡೆತ

1 Min Read

GOOD NEWS : ನಿವೇಶನ ರಹಿತರಿಗೆ ಭರ್ಜರಿ ಗುಡ್ ನ್ಯೂಸ್ : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜೂ.30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

1 Min Read
Recent News

BIG NEWS : ದೊಡ್ಡಆಲಹಳ್ಳಿಯ ಸಾಮಾನ್ಯ ಹುಡುಗ ಇಂದು ಕರ್ನಾಟಕದ ಮುಖ್ಯಮಂತ್ರಿ : ಡಿ.ಕೆ. ಶಿವಕುಮಾರ್ ರಾಜಕೀಯ ಪಯಣದ ಬಗ್ಗೆ ಇಲ್ಲಿದೆ ಮಾಹಿತಿ

​ಪ್ರಧಾನಿ ಮೋದಿ ಅಧಿಕಾರದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಇರಲ್ಲ: ‘ಆರ್ಥಿಕ ಸುನಾಮಿ’ ಎಚ್ಚರಿಕೆ ನೀಡಿದ ರಾಹುಲ್ ಗಾಂಧಿ!

BIG NEWS: ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ದಿಢೀರ್ ಕುಸಿತ : ಮೇ ತಿಂಗಳಲ್ಲಿ ಸರ್ಕಾರದ ಆದಾಯಕ್ಕೆ ₹455 ಕೋಟಿ ಹೊಡೆತ

GOOD NEWS : ನಿವೇಶನ ರಹಿತರಿಗೆ ಭರ್ಜರಿ ಗುಡ್ ನ್ಯೂಸ್ : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜೂ.30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

State News
KARNATAKA

BIG NEWS : ದೊಡ್ಡಆಲಹಳ್ಳಿಯ ಸಾಮಾನ್ಯ ಹುಡುಗ ಇಂದು ಕರ್ನಾಟಕದ ಮುಖ್ಯಮಂತ್ರಿ : ಡಿ.ಕೆ. ಶಿವಕುಮಾರ್ ರಾಜಕೀಯ ಪಯಣದ ಬಗ್ಗೆ ಇಲ್ಲಿದೆ ಮಾಹಿತಿ

By kannadanewsnow57 KARNATAKA 8 Mins Read

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಲೋಕಭವನದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕರ್ನಾಟಕ ರಾಜ್ಯಪಾಲ…

BIG NEWS: ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ದಿಢೀರ್ ಕುಸಿತ : ಮೇ ತಿಂಗಳಲ್ಲಿ ಸರ್ಕಾರದ ಆದಾಯಕ್ಕೆ ₹455 ಕೋಟಿ ಹೊಡೆತ

GOOD NEWS : ನಿವೇಶನ ರಹಿತರಿಗೆ ಭರ್ಜರಿ ಗುಡ್ ನ್ಯೂಸ್ : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜೂ.30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಶಾಸಕರ ಅನುದಾನ’ದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.