ಬೆಂಗಳೂರು : ಜಿ ಡಿ ಪಿ ಮೇಲೆ ರಾಜ್ಯದ ಅಭಿವೃದ್ಧಿ ಲೆಕ್ಕ ಹೇಳುವುದಕ್ಕೆ ಆಗಲ್ಲ. ಕೇಂದ್ರದ ಜಿಡಿಪಿಗಿಂತ ರಾಜ್ಯದ ಜಿಡಿಪಿ ಉತ್ತಮ ಅಂತ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಈ ವಿಚಾರವಾಗಿ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಕೇಂದ್ರದ ಜಿಡಿಪಿ ಗಿಂತ ರಾಜ್ಯದ ಜಿಡಿಪಿ ಉತ್ತಮ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಕೆಲವು ವಾಸ್ತವ ಅಂಶಗಳು ಇವೆ. ನಿಜಾಂಶ ಇದೆ ಅದು ನೋಡಬೇಕು ನಾನು ಎರಡು ಸಲ ಸಿಎಂ ಆಗಿದ್ದವನು. ನಾನು ಸತ್ಯ ಹೇಳುವುದಕ್ಕೆ ಹೊರಟರೆ ವೀರನ್ ಆಗಿಬಿಡುತ್ತೇನೆ ರಾಜ್ಯದಲ್ಲಿ ಉತ್ತಮ ಆಡಳಿತ ಕೊಡುವ ವ್ಯವಸ್ಥೆ ಬರಬೇಕು ಅದರ ಬಗ್ಗೆ ಪಕ್ಷದ ಕಾರ್ಯಕರ್ತರು ಗಮನ ಕೊಡಬೇಕು ಯಾರು ಸಿಎಂ ಆಗಬೇಕು ಅನ್ನೋದು ನಂತರ ನೋಡೋಣ ಎಂದು ಬೆಂಗಳೂರಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.








