ಬೆಂಗಳೂರು : ಬೆಂಗಳೂರಲ್ಲಿ ಘೋರ ದುರಂತ ಸಂಭವಿಸಿದ್ದು, ಪತ್ನಿಯ ಕಣ್ಣೆದುರೇ ನರಳಿ ಪತಿಯೊಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ತಮಿಳುನಾಡಿಗೆ ಸಾವಿಗೆ ಹೋಗಿ ಹಿಂದಿರುಗಿದ್ದ ವ್ಯಕ್ತಿ ಇದೀಗ ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.ಪತ್ನಿ ಜಯಶ್ರೀ ಕಣ್ಣು ಎದುರೇ ನರಳಿ ಪತಿ ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರು-ಮೈಸೂರು ಸ್ಯಾಟಲೈಟ್ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.
ಸ್ಯಾಟಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಲಾಟ್ ನಲ್ಲಿ ಈ ಒಂದು ದುರಂತ ಸಂಭವಿಸಿದ್ದು, ಮೃತರನ್ನ ಶ್ಯಾಮ್ ದೊರೆ (45) ಎಂದು ತಿಳಿದುಬಂದಿದೆ. ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಲಾಟ್ ಮೇಲ್ವಿಚಾರಕ ಕಾರು ರಿವರ್ಸ್ ತೆಗೆಯುವಾಗ ಘಟನೆ ಸಂಭವಿಸಿದೆ. ಅಲ್ಲೇ ನಿಲ್ಲಿಸಿದ ಬ್ಲಡ್ ಬ್ಯಾಂಕ್ ಬಸ್ ಬಳಿ ಶಾಮ್ ದೊರೆ ನಿಂತಿದ್ದರು. ಕಾರು ಚಾಲಕನ ಬೇಜವಾಬ್ದಾರಿತನಕ್ಕೆ ಶ್ಯಾಮ್ ದೊರೆ ಬಲಿಯಾಗಿದ್ದಾರೆ.
ತಮಿಳುನಾಡಿಗೆ ಸಾವಿಗೆ ಹೋಗಿ ಹಿಂದುರುಗಿದಾಗ ಈ ಒಂದು ಘಟನೆ ಸಂಭವಿಸಿದೆ. ಬ್ಲಡ್ ಬ್ಯಾಂಕ್ ಬಸ್ ಹಾಗು ಕಾರು ನಡುವೆ ಸಿಲುಕಿ ಶ್ಯಾಮ್ ದೊರೆ ಸಾವನಪ್ಪಿದ್ದಾರೆ. ಸುಂಕದಕಟ್ಟೆಯ ಸಿದ್ಧಾರ್ಥ ನಗರ ನಿವಾಸಿ ಶಾಮ ದೊರೆ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶವ ಸ್ಥಳಾಂತರಿಸಲಾಗಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








