Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ `ಪೊಲೀಸ್ ಕಾನ್ಸ್ಟೇಬಲ್’ಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

12/04/2026 7:15 AM

ಹಾರ್ಮುಜ್ ಜಲಸಂಧಿಗೆ ಅಮೆರಿಕ ಯುದ್ಧನೌಕೆಗಳ ಪ್ರವೇಶ: ಇರಾನ್ ಇಟ್ಟಿದ್ದ ‘ಸಮುದ್ರ ಬಾಂಬ್’ ತೆರವು ಕಾರ್ಯಾಚರಣೆ ಆರಂಭ!

12/04/2026 7:13 AM

ರಾಜ್ಯದ `ಪೋಕ್ಸೋ ತನಿಖೆ’ 2 ತಿಂಗಳಲ್ಲಿ ಪೂರ್ಣಗೊಳಿಸುವುದು ಕಡ್ಡಾಯ : ಪೊಲೀಸ್ ಇಲಾಖೆ ಮಹತ್ವದ ಆದೇಶ

12/04/2026 7:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ಪೋಕ್ಸೋ ತನಿಖೆ’ 2 ತಿಂಗಳಲ್ಲಿ ಪೂರ್ಣಗೊಳಿಸುವುದು ಕಡ್ಡಾಯ : ಪೊಲೀಸ್ ಇಲಾಖೆ ಮಹತ್ವದ ಆದೇಶ
KARNATAKA

ರಾಜ್ಯದ `ಪೋಕ್ಸೋ ತನಿಖೆ’ 2 ತಿಂಗಳಲ್ಲಿ ಪೂರ್ಣಗೊಳಿಸುವುದು ಕಡ್ಡಾಯ : ಪೊಲೀಸ್ ಇಲಾಖೆ ಮಹತ್ವದ ಆದೇಶ

By kannadanewsnow5712/04/2026 7:08 AM

ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ (ಪೋಕ್ಸೋ) ತನಿಖೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಕಡಿವಾಣ ಹಾಕಲು ಪೋಲಿಸ್ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಎಲ್ಲಾ ಪೋಕ್ಸೋ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ರಾಜ್ಯದ ಎಲ್ಲಾ ವಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪೋಕ್ಸೋ ಪ್ರಕರಣಗಳ ತನಿಖೆಯನ್ನು ತನಿಖಾಧಿಕಾರಿಗಳು (IO) ಗರಿಷ್ಠ 2 ತಿಂಗಳೊಳಗೆ ಮುಗಿಸಬೇಕು.

ಹೊಸ ಕಾಯ್ದೆಯ ಅನ್ವಯ

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 173ರ ಅನ್ವಯ, ಮಾಹಿತಿ ದಾಖಲಾದ ದಿನಾಂಕದಿಂದ ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳಿಸತಕ್ಕದ್ದು.BNSS ಸೆಕ್ಷನ್ 176(3) ರ ಪ್ರಕಾರ, 7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯಾಗುವ ಅಪರಾಧಗಳಲ್ಲಿ ವಿಧಿವಿಜ್ಞಾನ (Forensic) ತಜ್ಞರ ತಂಡವು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸುವುದು ಕಡ್ಡಾಯವಾಗಿದೆ.

ತಂತ್ರಜ್ಞಾನದ ಬಳಕೆ: ತನಿಖೆಯ ಪ್ರಕ್ರಿಯೆಯನ್ನು ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು.

ಬಹಳಷ್ಟು ಪ್ರಕರಣಗಳಲ್ಲಿ ತನಿಖೆ ನಡೆಸಲು ಅಧಿಕಾರಿಗಳು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತಿರುವುದರಿಂದ ಸಾಕ್ಷ್ಯ ನಾಶ ಹಾಗೂ ಆರೋಪಿಗಳು ಶಿಕ್ಷೆಯಿಂದ ಪಾರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಗಟ್ಟಿ, ಸಂತ್ರಸ್ತರಿಗೆ ಶೀಘ್ರ ನ್ಯಾಯ ಒದಗಿಸುವ ಉದ್ದೇಶದಿಂದ ಪೊಲೀಸ್ ಮಹಾನಿರ್ದೇಶಕರು ಈ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಪ್ರತಿ ತಿಂಗಳು ಸರಾಸರಿ 350ರಿಂದ 400 ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ.ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ಸರಾಸರಿ 500 ರಿಂದ 650 ಪ್ರಕರಣಗಳು ದಾಖಲಾಗುತ್ತಿದ್ದು, ನಂತರದ ಸ್ಥಾನಗಳಲ್ಲಿ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಿವೆ.

It is mandatory to complete the state's 'POCSO investigation' within 2 months: Police Department's important order
Share. Facebook Twitter LinkedIn WhatsApp Email

Related Posts

ರಾಜ್ಯದ `ಪೊಲೀಸ್ ಕಾನ್ಸ್ಟೇಬಲ್’ಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

12/04/2026 7:15 AM2 Mins Read

ಎಕರೆ, ಗುಂಟೆ, ಹೆಕ್ಟೇರ್ ಲೆಕ್ಕಾಚಾರದಲ್ಲಿ ಗೊಂದಲವೇ? ನಿಮ್ಮ ಜಮೀನಿನ ನಿಖರ ಅಳತೆ ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

12/04/2026 6:39 AM2 Mins Read

ಯುವಜನತೆಗೆ ಕೇಂದ್ರ ಸರ್ಕಾರದ ಬಂಪರ್ ಆಫರ್: `ಇಂಟರ್ನ್‌ಶಿಪ್’ ಮಾಡಿ, ತಿಂಗಳಿಗೆ ₹40,000 ಸ್ಟೈಪೆಂಡ್ ಪಡೆಯಿರಿ!

12/04/2026 6:33 AM2 Mins Read
Recent News

ರಾಜ್ಯದ `ಪೊಲೀಸ್ ಕಾನ್ಸ್ಟೇಬಲ್’ಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

12/04/2026 7:15 AM

ಹಾರ್ಮುಜ್ ಜಲಸಂಧಿಗೆ ಅಮೆರಿಕ ಯುದ್ಧನೌಕೆಗಳ ಪ್ರವೇಶ: ಇರಾನ್ ಇಟ್ಟಿದ್ದ ‘ಸಮುದ್ರ ಬಾಂಬ್’ ತೆರವು ಕಾರ್ಯಾಚರಣೆ ಆರಂಭ!

12/04/2026 7:13 AM

ರಾಜ್ಯದ `ಪೋಕ್ಸೋ ತನಿಖೆ’ 2 ತಿಂಗಳಲ್ಲಿ ಪೂರ್ಣಗೊಳಿಸುವುದು ಕಡ್ಡಾಯ : ಪೊಲೀಸ್ ಇಲಾಖೆ ಮಹತ್ವದ ಆದೇಶ

12/04/2026 7:08 AM

​’ಜನ ನಾಯಕನ್’ ಸಿನಿಮಾ ಲೀಕ್: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ; ತಿರುಗೇಟು ನೀಡಿದ ಬಿಜೆಪಿ!

12/04/2026 7:02 AM
State News
KARNATAKA

ರಾಜ್ಯದ `ಪೊಲೀಸ್ ಕಾನ್ಸ್ಟೇಬಲ್’ಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

By kannadanewsnow5712/04/2026 7:15 AM KARNATAKA 2 Mins Read

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಶಕಗಳಿಂದ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್‌ಗಳ ದೀರ್ಘಕಾಲದ ಬೇಡಿಕೆಗೆ ಕೊನೆಗೂ ಸ್ಪಂದನೆ…

ರಾಜ್ಯದ `ಪೋಕ್ಸೋ ತನಿಖೆ’ 2 ತಿಂಗಳಲ್ಲಿ ಪೂರ್ಣಗೊಳಿಸುವುದು ಕಡ್ಡಾಯ : ಪೊಲೀಸ್ ಇಲಾಖೆ ಮಹತ್ವದ ಆದೇಶ

12/04/2026 7:08 AM

ಎಕರೆ, ಗುಂಟೆ, ಹೆಕ್ಟೇರ್ ಲೆಕ್ಕಾಚಾರದಲ್ಲಿ ಗೊಂದಲವೇ? ನಿಮ್ಮ ಜಮೀನಿನ ನಿಖರ ಅಳತೆ ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

12/04/2026 6:39 AM

ಯುವಜನತೆಗೆ ಕೇಂದ್ರ ಸರ್ಕಾರದ ಬಂಪರ್ ಆಫರ್: `ಇಂಟರ್ನ್‌ಶಿಪ್’ ಮಾಡಿ, ತಿಂಗಳಿಗೆ ₹40,000 ಸ್ಟೈಪೆಂಡ್ ಪಡೆಯಿರಿ!

12/04/2026 6:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.