Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಖರೀದಿಸಿದ `ಜಮೀನು’ ನೋಂದಣಿ ಮಾಡುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

11/04/2026 2:31 PM

ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಕೇಸ್ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ.!

11/04/2026 2:21 PM

ALERT : ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಇದು ಗಂಭೀರ ಆರೋಗ್ಯ ಸಮಸ್ಯೆಯಿರಬಹುದು ಎಚ್ಚರ.!

11/04/2026 2:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಕೇಸ್ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ.!
INDIA

ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಕೇಸ್ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ.!

By kannadanewsnow5711/04/2026 2:21 PM

ಕೊಪ್ಪಳ : ‎ಬುಕನಟ್ಟಿ ಗ್ರಾಮದ ಖಾದರಸಾಬ ಓಲೇಕಾರ ಎಂಬ ವ್ಯಕ್ತಿಯು 2023ರ ನವೆಂಬರ್ 14 ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪವು ಸಾಬೀತಾಗಿದ್ದು, ಕೊಪ್ಪಳ ‎ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ಏಪ್ರಿಲ್ 2 ರಂದು ಅಪರಾಧಿಗೆ ಶಿಕ್ಷೆ ವಿಧಿಸಿರುತ್ತಾರೆ.

‎ಅಪ್ರಾಪ್ತೆ ಬಾಲಕಿಯ ತಂದೆಯು ಬಾಲಕಿಯನ್ನು ಕರೆದುಕೊಂಡು ಉಪಜೀವನಕ್ಕಾಗಿ ಉಡುಪಿಗೆ ಹೋಗಿ ವಾಸವಾಗಿರುತ್ತಾರೆ. ಅವರ ಮನೆಯ ಹತ್ತಿರದಲ್ಲಿ ವಾಸವಾಗಿದ್ದ ಖಾದರಬಾಷಾ (ಖಾದರಸಾಬ ಓಲೇಕಾರ) ಇತನು ಬಾಧಿತಳಿಗೆ ಪರಿಚಯ ಮಾಡಿಕೊಂಡು ಸಲುಗೆಯಿಂದ ಮಾತನಾಡಿ, ಬಾಧಿತಳು ತನ್ನ ತಂದೆ ತಾಯಿಯೊಂದಿಗೆ ತಮ್ಮ ಊರಿಗೆ ಬಂದಾಗ ಅಪರಾಧಿಯು 2023ರ ನವೆಂಬರ 14ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಧಿತಳಿಗೆ ಮೋಟಾರ್ ಸೈಕಲ್ ಮೇಲೆ ಕೂಡಿಸಿಕೊಂಡು ಬಸರಿಹಾಳ ಸೀಮಾದ ಒಂದು ಹೊಲದಲ್ಲಿ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಮಾಡಿರುತ್ತಾನೆ. ತದನಂತರದಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿ ದೊಡ್ಡ ಕನ್ನೆ ಗ್ರಾಮದ ತೋಟದ ಶೆಡ್ಡಿನಲ್ಲಿ ಆರೋಪಿತನು ಬಾಧಿತಳೊಂದಿಗೆ ಹಲವಾರು ಸಲ ಅತ್ಯಾಚಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುನಿರಾಬಾದ ಪೋಲಿಸ ಠಾಣೆಯ ಸುನೀಲ್ ಎಚ್. ಪಿ.ಎಸ್.ಐ ಇವರು ಬಾಧಿತಳ ತಂದೆ ನೀಡಿದ ದೂರನ್ನು ಸ್ವೀಕರಿಸಿ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ ಮುಂದಿನ ತನಿಖೆಯನ್ನು ಸುರೇಶ ಡಿ. ಸಿಪಿಐ ಕೊಪ್ಪಳ ವೃತ್ತ ಇವರು ನಿರ್ವಹಿಸಿ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ.

ಈ ಪ್ರಕರಣವು ಸ್ಪೇ.ಎಸ್‌ಸಿ (ಪೋಕ್ಸೊ) ಸಂ: 31/2024 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ಮಾನ್ಯ ನ್ಯಾಯಾಲಯ ಆರೋಪಿತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. 75,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ, ಕೊಪ್ಪಳ ‎ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ಏಪ್ರಿಲ್ 2 ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಮುನಿರಾಬಾದ ಪೋಲಿಸ ಠಾಣೆಯ ಸಿಬ್ಬಂದಿ ಅಮರೇಶ ಕಲಕೇರಿ ಹಾಗೂ ಹನುಮಂತಪ್ಪ ಭಜಂತ್ರಿ ಇವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Kidnapping and rape case of a minor girl: The culprit was sentenced to 20 years in prison.!
Share. Facebook Twitter LinkedIn WhatsApp Email

Related Posts

SHOCKING : ಸೀನಿದ ಮಹಿಳೆಯ ಮೂಗಿನಿಂದ ಬಿತ್ತು ಜೀವಂತ ಹುಳು : ಪರೀಕ್ಷಿಸಿದ ವೈದ್ಯರಿಗೆ ಕಾದಿತ್ತು ಶಾಕ್.!

11/04/2026 1:59 PM2 Mins Read

ಚಿನ್ನದ ವಿಚಾರದಲ್ಲಿ ಭಾರತೀಯರೇ ನಂಬರ್ 1 : ಮನೆಗಳಲ್ಲಿರುವ ಚಿನ್ನದ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ.!

11/04/2026 1:29 PM2 Mins Read

BIG NEWS : ಡ್ರಂಕ್ & ಡ್ರೈವ್ ಮಾಡಿ ಸಿಕ್ಕಿಬಿದ್ದರೆ ಪೊಲೀಸರು `ವಾಹನ ಸೀಜ್’ ಮಾಡುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

11/04/2026 1:00 PM2 Mins Read
Recent News

ಖರೀದಿಸಿದ `ಜಮೀನು’ ನೋಂದಣಿ ಮಾಡುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

11/04/2026 2:31 PM

ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಕೇಸ್ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ.!

11/04/2026 2:21 PM

ALERT : ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಇದು ಗಂಭೀರ ಆರೋಗ್ಯ ಸಮಸ್ಯೆಯಿರಬಹುದು ಎಚ್ಚರ.!

11/04/2026 2:08 PM

SHOCKING : ಸೀನಿದ ಮಹಿಳೆಯ ಮೂಗಿನಿಂದ ಬಿತ್ತು ಜೀವಂತ ಹುಳು : ಪರೀಕ್ಷಿಸಿದ ವೈದ್ಯರಿಗೆ ಕಾದಿತ್ತು ಶಾಕ್.!

11/04/2026 1:59 PM
State News
KARNATAKA

ಖರೀದಿಸಿದ `ಜಮೀನು’ ನೋಂದಣಿ ಮಾಡುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

By kannadanewsnow5711/04/2026 2:31 PM KARNATAKA 2 Mins Read

ಬೆಂಗಳೂರು: ನೀವು ಕರ್ನಾಟಕದಲ್ಲಿ ಜಮೀನು ಅಥವಾ ಸೈಟ್ ಖರೀದಿಸಲು ಯೋಜಿಸುತ್ತಿದ್ದೀರಾ? ಆಸ್ತಿ ಖರೀದಿ ಎಷ್ಟು ಮುಖ್ಯವೋ, ಅದರ ನೋಂದಣಿ ಪ್ರಕ್ರಿಯೆಯೂ…

ALERT : ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಇದು ಗಂಭೀರ ಆರೋಗ್ಯ ಸಮಸ್ಯೆಯಿರಬಹುದು ಎಚ್ಚರ.!

11/04/2026 2:08 PM

`LPG-CNG’ ಗ್ಯಾಸ್ ಬಂಕ್‍ ಗಳಲ್ಲಿ ಗ್ಯಾಸ್ ದರ, ದಾಸ್ತಾನು ಕುರಿತು ಮಾಹಿತಿ ಫಲಕ ಅಳವಡಿಕೆ ಕಡ್ಡಾಯ.!

11/04/2026 1:10 PM

BREAKING : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಉದ್ಯಮಿಗೆ 15 ಕೋಟಿ ವಂಚನೆ : ಬೆಳಗಾವಿಯಲ್ಲಿ ಇಬ್ಬರು ಸೈಬರ್ ವಂಚಕರು ಅರೆಸ್ಟ್!

11/04/2026 1:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.