ಚಾಮರಾಜನಗರ : ಮುಳ್ಳುಹಂದಿ ಜೊತೆ ಹೋರಾಟದಲ್ಲಿ ಚಿರತೆ ಒಂದು ಪ್ರಾಣ ಕಳೆದುಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.
ಬೇಟೆಯ ವೇಳೆ ಮುಳ್ಳು ಹಂದಿಯ ಚೂಪಾದ ಮುಳ್ಳುಗಳು ತೊಗಲಿ ಸ್ಥಳದಲ್ಲಿಯೇ ಚಿರತೆ ಪ್ರಾಣ ಬಿಟ್ಟಿದೆ ಬೇಟೆಗೆ ಬಂದ ಚಿರತೆಯ ಮೇಲೆ ಮುಳ್ಳುಹಂದಿ ಪ್ರತಿ ದಾಳಿ ನಡೆಸಿದೆ ಚಿರತೆಯ ಬಾಯಿ ಮತ್ತು ಎದೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು ಸ್ಥಳದಲ್ಲೇ ಚಿರತೆ ಪ್ರಾಣ ಬಿಟ್ಟಿದೆ ಮುಳ್ಳಿನಲ್ಲಿರುವ ವಿಷದ ಅಂಶದಿಂದ ನರಳಿ ನರಳಿ ಚಿರತೆ ಪ್ರಾಣ ಬಿಟ್ಟಿದೆ ಸ್ಥಳಕ್ಕೆ ಬಂಡಿಪುರ ಸಂರಕ್ಷಿತ ಆರಣ್ಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








