ಬೆಂಗಳೂರು : ಉಷ್ಣಾಂಶ ಹೆಚ್ಚಳದಿಂದಾಗಿ ರಾಜ್ಯದ ಹಲವೆಡೆ ಸುಡುಬಿಸಿಲು ಕಾಣಿಸಿಕೊಳ್ಳುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ವಾಡಿಕೆಗಿಂತ ಅಧಿಕವಾಗಿ ಉಷ್ಣಾಂಶ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ 11ರಿಂದ 13ರವರೆಗೆ ಶಾಖದ ಅಲೆ (ಹೀಟ್‌ವೇವ್) ಅಪ್ಪಳಿಸಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು ಹಗಲಿನ ವೇಳೆ ಓಡಾಡಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕರೆಯಲಾಗುತ್ತದೆ. ಗರಿಷ್ಟ ತಾಪಮಾನದಲ್ಲಿಡಿ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಆದರೆ, ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ದಾಖಲಾಗುವ 36 ಡಿ.ಸೆ. ಉಷ್ಣಾಂಶ ಕಲಬುರಗಿಯಲ್ಲಿ ಕಂಡುಬರುವ 42 ಡಿ.ಸೆ. ತಾಪಮಾನಕ್ಕೆ ಸಮವಾಗಿರುತ್ತದೆ. ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಝಳ ಹೆಚ್ಚಿರಲಿದೆ. ಆದ್ದರಿಂದ, ಬಿಸಿ ಮತ್ತು ತೇವಾಂಶದಿಂದ ಕೂಡಿದ ಉರಿಬಿಸಿಲಿನ ಜತೆಗೆ ಸೆಖೆ ಇರಲಿದೆ. ರಾಜ್ಯದ ಶೇ. 90 ಪ್ರದೇಶಗಳು ಬಿಸಿಲಿನ ತಾಪಕ್ಕೆ ನಲುಗುತ್ತಿವೆ. 6 ವರ್ಷಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ ಎಂದು ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.
ಮುಂದಿನ 2 ದಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!
ಮುಂದಿನ 2 ದಿನ ಮಂಡ್ಯ, ಮೈಸೂರು, ಚಾಮರಾಜ ನಗರದಲ್ಲಿ, 11ರಂದು ಬೆಂ. ನಗರ, ಬೆಂ. ಗ್ರಾಮಾಂತರ ದಲ್ಲಿ ಹಾಗೂ 12ರಿಂದ17ವರೆಗೆ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿ ಬಿರುಗಾಳಿ ಸಹಿತ ಸಾಧಾರಣ ವರ್ಷಧಾರೆಯಾಗಲಿದೆ. 14ರಿಂದ ಮುಂದಿನ 3 ದಿನ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.








