ಬೆಂಗಳೂರು : ಬ್ಯಾಂಕ್ಗಳಲ್ಲಿ ಠೇವಣಿ ಸಂಗ್ರಹಿಸುವ ಪಿಗ್ಮಿ ಏಜೆಂಟ್ಗಳು ಬ್ಯಾಂಕಿನ ನೌಕರರಾಗಿದ್ದು, ಅವರಿಗೆ ನೀಡಲಾಗುವ ಸಂಭಾವನೆ ಅಥವಾ ಕಮೀಷನ್ ಮೇಲೆ ಜಿಎಸ್ಟಿ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪಿಗ್ಗಿ ಏಜೆಂಟ್ಗಳಿಗೆ ಪಾವತಿಸಿದ ಕಮಿಷನ್ ಮೊತ್ತದ ಮೇಲೆ ಜಿಎಸ್ಟಿ ಪಾವತಿಸುವಂತೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರು ನೀಡಿದ್ದ ಶೋಕಾಸ್ ನೋಟಿಸ್ಗಳನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಬ್ಯಾಂಕುಗಳು ಈ ಏಜೆಂಟ್ಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತವೆ ಮತ್ತು ಇವರಿಗೆ ನೀಡುವ ಕಮಿಷನ್ ಸಂಭಾವನೆಯು ವೇತನದ ಸ್ವರೂಪದ್ದಾಗಿರುತ್ತದೆ ಜಿಎಸ್ಟಿ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಹಾಗಾಗಿ ಅವರ ಮೇಲೆ GST ವಿಧಿಸುವಂತಿಲ್ಲ.
ಪಿಗ್ನಿ ಏಜೆಂಟ್ಗಳು ಸ್ವತಂತ್ರ ಗುತ್ತಿಗೆದಾರ ರಲ್ಲ, ಬದಲಾಗಿ ಅವರು ಬ್ಯಾಂಕಿನ ನಿಯಂತ್ರಣದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ.








