Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮಾಂಸಹಾರಿಗಳೇ ಎಚ್ಚರ : ಗಂಟಲಿನಲ್ಲಿ ‘ಮಟನ್ ಪೀಸ್’ ಸಿಲುಕಿ ವ್ಯಕ್ತಿ ಸಾವು.!

09/04/2026 11:41 AM

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

09/04/2026 11:25 AM

ರಾಜ್ಯದ ಹಿರಿಯ ನಾಗರಿಕರೇ : `ಸೀನಿಯರ್ ಸಿಟಿಜನ್ ಕಾರ್ಡ್’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

09/04/2026 11:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!
KARNATAKA

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

By kannadanewsnow5709/04/2026 11:25 AM

ಬೆಂಗಳೂರು: ರಾಜ್ಯದ ಪ್ರಸಿದ್ಧ ಗಿರಿಶಿಖರಗಳಲ್ಲಿ ಇತ್ತೀಚೆಗೆ ಚಾರಣಿಗರು ದಾರಿತಪ್ಪಿ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಚಾರಣಿಗರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ (SOP) ಜಾರಿಗೆ ತರಲು ನಿರ್ಧರಿಸಿದೆ.

ಘಟನೆಯ ಹಿನ್ನೆಲೆ:

ಕೊಡಗು ಜಿಲ್ಲೆಯ ತಡಿಯಾಂಡಮೋಲ್ ಬೆಟ್ಟಕ್ಕೆ ಚಾರಣಕ್ಕೆ ಬಂದಿದ್ದ ಕೇರಳದ ಶರಣ್ಯ ಎಂಬುವವರು ದಾರಿತಪ್ಪಿ ಮೂರು ದಿನಗಳ ಕಾಲ ಕಾಡಿನಲ್ಲೇ ಸಿಲುಕಿದ್ದರು. ಇದರ ಬೆನ್ನಲ್ಲೇ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅಪ್ರಾಪ್ತ ಬಾಲಕಿ ಶ್ರೀನಂದಾ ನಾಪತ್ತೆಯಾದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಪ್ರಮುಖ ನಿರ್ದೇಶನಗಳು:

ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಚಾರಣಿಗರ ಹಿತದೃಷ್ಟಿಯಿಂದ ಈ ಕೆಳಗಿನ ಕ್ರಮಗಳನ್ನು ಜಾರಿಗೆ ತರಲು ಸೂಚಿಸಿದ್ದಾರೆ:

ಇ-ಟ್ರ್ಯಾಕಿಂಗ್ ಆ್ಯಪ್: ಅರಣ್ಯ ಇಲಾಖೆಯ ‘ಇ-ಗಸ್ತು’ ಮಾದರಿಯಲ್ಲೇ ಚಾರಣಿಗರಿಗಾಗಿ ಪ್ರತ್ಯೇಕ ಇ-ಟ್ರ್ಯಾಕಿಂಗ್ ಆ್ಯಪ್ ಅಭಿವೃದ್ಧಿಪಡಿಸುವುದು. ಚಾರಣದ ಅವಧಿಯಲ್ಲಿ ಈ ಆ್ಯಪ್ ಅನ್ನು ಚಾರಣಿಗರ ಮೊಬೈಲ್‌ನಲ್ಲಿ ಅಳವಡಿಸುವುದರಿಂದ ಅವರು ದಾರಿತಪ್ಪಿದಾಗ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ.

ವೈರ್‌ಲೆಸ್ ಸಿಸ್ಟಮ್: ಚಾರಣಿಗರ ಜೊತೆಗಿರುವ ನೇಚರ್ ಗೈಡ್‌ಗಳಿಗೆ ಕಡ್ಡಾಯವಾಗಿ ವೈರ್‌ಲೆಸ್ ಸಿಸ್ಟಮ್ ಒದಗಿಸಬೇಕು.

ಜವಾಬ್ದಾರಿ ನಿಗದಿ: ಚಾರಣಿಗರ ತಂಡವನ್ನು ಮುನ್ನಡೆಸುವವರಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ನಿಗದಿಪಡಿಸುವುದು.

ಗುಂಪು ವಿಮೆ: ಚಾರಣಕ್ಕೆ ಬರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಗುಂಪು ವಿಮೆಯ ಸೌಲಭ್ಯ ಒದಗಿಸುವುದು.

ದೇಶಕ್ಕೇ ಮಾದರಿಯಾಗುವಂತಹ ಸುರಕ್ಷತಾ ಮಾನದಂಡಗಳನ್ನು ಆದಷ್ಟು ಶೀಘ್ರವಾಗಿ ರೂಪಿಸಿ, ಜಾರಿಗೆ ತರುವಂತೆ ಸಚಿವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

'e-tracking app' BIG NEWS: New guidelines for the safety of 'travelers' in the state: From now on insurance mandatory!
Share. Facebook Twitter LinkedIn WhatsApp Email

Related Posts

ರಾಜ್ಯದ ಹಿರಿಯ ನಾಗರಿಕರೇ : `ಸೀನಿಯರ್ ಸಿಟಿಜನ್ ಕಾರ್ಡ್’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

09/04/2026 11:18 AM2 Mins Read

BREAKING : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ : ಏ.15ಕ್ಕೆ ತೀರ್ಪು ಮುಂದೂಡಿದ ಕೋರ್ಟ್

09/04/2026 11:15 AM2 Mins Read

BIG NEWS : ದಾವಣಗೆರೆ ಉಪಚುನಾವಣೆ : ನೀತಿ ಸಂಹಿತೆ ಉಲ್ಲಂಘಿಸಿ, ಬಿಜೆಪಿ ಮುಖಂಡರಿಂದ ಪಲಾವ್ ಹಂಚಿಕೆ!

09/04/2026 11:14 AM1 Min Read
Recent News

SHOCKING : ಮಾಂಸಹಾರಿಗಳೇ ಎಚ್ಚರ : ಗಂಟಲಿನಲ್ಲಿ ‘ಮಟನ್ ಪೀಸ್’ ಸಿಲುಕಿ ವ್ಯಕ್ತಿ ಸಾವು.!

09/04/2026 11:41 AM

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

09/04/2026 11:25 AM

ರಾಜ್ಯದ ಹಿರಿಯ ನಾಗರಿಕರೇ : `ಸೀನಿಯರ್ ಸಿಟಿಜನ್ ಕಾರ್ಡ್’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

09/04/2026 11:18 AM

BREAKING : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ : ಏ.15ಕ್ಕೆ ತೀರ್ಪು ಮುಂದೂಡಿದ ಕೋರ್ಟ್

09/04/2026 11:15 AM
State News
KARNATAKA

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

By kannadanewsnow5709/04/2026 11:25 AM KARNATAKA 1 Min Read

ಬೆಂಗಳೂರು: ರಾಜ್ಯದ ಪ್ರಸಿದ್ಧ ಗಿರಿಶಿಖರಗಳಲ್ಲಿ ಇತ್ತೀಚೆಗೆ ಚಾರಣಿಗರು ದಾರಿತಪ್ಪಿ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಚಾರಣಿಗರ ಸುರಕ್ಷತೆಗಾಗಿ…

ರಾಜ್ಯದ ಹಿರಿಯ ನಾಗರಿಕರೇ : `ಸೀನಿಯರ್ ಸಿಟಿಜನ್ ಕಾರ್ಡ್’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

09/04/2026 11:18 AM

BREAKING : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ : ಏ.15ಕ್ಕೆ ತೀರ್ಪು ಮುಂದೂಡಿದ ಕೋರ್ಟ್

09/04/2026 11:15 AM

BIG NEWS : ದಾವಣಗೆರೆ ಉಪಚುನಾವಣೆ : ನೀತಿ ಸಂಹಿತೆ ಉಲ್ಲಂಘಿಸಿ, ಬಿಜೆಪಿ ಮುಖಂಡರಿಂದ ಪಲಾವ್ ಹಂಚಿಕೆ!

09/04/2026 11:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.