Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗದ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ; ಇಲ್ಲಿದೆ ಪುಲ್ ಡೀಟೆಲ್ಸ್

07/04/2026 9:26 PM

ಇಂದಿನ ಲೋಕಾಯುಕ್ತ ದಾಳಿಯಲ್ಲಿ ‘8 ಭ್ರಷ್ಟ ಅಧಿಕಾರಿ’ಗಳ ಬಳಿ ಸಿಕ್ಕ ಅಕ್ರಮ ಆಸ್ತಿ-ಪಾಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್

07/04/2026 9:06 PM

ಕುಡಿದು ಗಾಡಿ ಓಡಿಸಿ ಸಿಕ್ಕಿಬಿದ್ದ ಡೇವಿಡ್ ವಾರ್ನರ್: ಆಸೀಸ್ ಬ್ಯಾಟಿಂಗ್ ಹೀರೋ ಬಂಧನ; ಮುಂದಿನ ತಿಂಗಳು ಕೋರ್ಟ್‌ಗೆ ಹಾಜರು!

07/04/2026 8:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದಿನ ಲೋಕಾಯುಕ್ತ ದಾಳಿಯಲ್ಲಿ ‘8 ಭ್ರಷ್ಟ ಅಧಿಕಾರಿ’ಗಳ ಬಳಿ ಸಿಕ್ಕ ಅಕ್ರಮ ಆಸ್ತಿ-ಪಾಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್
KARNATAKA

ಇಂದಿನ ಲೋಕಾಯುಕ್ತ ದಾಳಿಯಲ್ಲಿ ‘8 ಭ್ರಷ್ಟ ಅಧಿಕಾರಿ’ಗಳ ಬಳಿ ಸಿಕ್ಕ ಅಕ್ರಮ ಆಸ್ತಿ-ಪಾಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್

By kannadanewsnow0907/04/2026 9:06 PM

ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಮೈಸೂರು-1, ಬೆಳಗಾವಿ-1, ಮಂಗಳೂರು-1, ಚಿತ್ರದುರ್ಗ-1, ಶಿವಮೊಗ್ಗ-1, ಬಳ್ಳಾರಿ-1, ಬೀದರ್-1 ಮತ್ತು ಕೊಡಗು-1 ಪೊಲೀಸ್ ಠಾಣೆಗಳಲ್ಲಿ 8 ಸರ್ಕಾರಿ ಅಧಿಕಾರಿಯು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ.

ಈ ದಿನ ದಿನಾಂಕ: 07.04.2026 ರಂದು ಆರೋಪಿತ ಸರ್ಕಾರಿ ಅಧಿಕಾರಿಗೆ ಸಂಬಂಧಿಸಿದ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 35 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ.

1) ಜಿ. ಕೆ. ರೇವಣ್ ಕುಮಾರ್, ಸಹಾಯಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ, ಲೋಕೋಪಯೋಗಿ ಇಲಾಖೆ, ಉಪ-ವಿಭಾಗ, ಮೈಸೂರು.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 03 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.

(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 04 ನಿವೇಶನಗಳು, 1 ವಾಸದ ಮನೆ, 2ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 75,45,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 35,044/- ನಗದು, ರೂ 2,96,05,185/- ಬೆಲೆ ಬಾಳುವ ಚಿನ್ನಾಭರಣಗಳು, ರೂ 42,20,000/- ಬೆಲೆ ಬಾಳುವ ವಾಹನಗಳು, ರೂ. 13,70,433/- ರೂ ಬೆಲೆಬಾಳುವ ಇತರೆ ವಸ್ತುಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 3,52,30,662/-
(ಇ) ಒಟ್ಟು ಅಸಮತೋಲನ ಆಸ್ತಿ ಮೌಲ್ಯ- ರೂ. 4,27,75,662/-

2) ಅಜಯ್‌ಸಿಂಗ್ ಭಪುಸಿಂಗ್ ರಜಪೂತ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ನಗರ ಅಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ಬೆಳಗಾವಿ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 07 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.

(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 07 ನಿವೇಶನಗಳು, 03 ವಾಸದ ಮನೆಗಳು, 12 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,67,38,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 6,22,000/- ನಗದು, ರೂ 54,32,250/- ಬೆಲೆ ಬಾಳುವ ಚಿನ್ನಾಭರಣಗಳು, ರೂ 19,00,000/- ಬೆಲೆ ಬಾಳುವ ವಾಹನಗಳು, ರೂ. 2,35,00,000/- ಬೆಲೆಬಾಳುವ ಬ್ಯಾಂಕ್ ಠೇವಣಿ-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 3,14,54,250/-
(ಇ) ಒಟ್ಟು ಅಸಮತೋಲನ ಆಸ್ತಿ ಮೌಲ್ಯ- ರೂ. 3,78,92,250/-

3) ಬಾಬು. ಬಿ. ಎನ್, ಸಹಾಯಕ ಔಷಧ ನಿಯಂತ್ರಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 06 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.

(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 04 ನಿವೇಶನಗಳು, 05 ವಾಸದ ಮನೆಗಳು, 1 ಎಕರೆ 20 ಗುಂಟೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,19,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 25,96,000/- ನಗದು, ರೂ 21,76,400/- ಬೆಲೆ ಬಾಳುವ ಚಿನ್ನಾಭರಣಗಳು, ರೂ 7,20,000/- ಬೆಲೆ ಬಾಳುವ ವಾಹನಗಳು, ರೂ. 1,66,11,600/- ಬೆಲೆಬಾಳುವ ಬ್ಯಾಂಕ್ ಠೇವಣಿ, ಗೃಹೋಪಯೋಗಿ ವಸ್ತುಗಳು ಮತ್ತು ಇತರೆ ವಸ್ತುಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,21,04,000/-
(ಇ) ಒಟ್ಟು ಅಸಮತೋಲನ ಆಸ್ತಿ ಮೌಲ್ಯ- ರೂ. 3,37,04,000/-

4) ಸುಶೀಲಮ್ಮ ಹೆಚ್. ಜಿ, ಸಹಾಯಕ ಲೆಕ್ಕಾಧಿಕಾರಿ, ನಿರ್ಮಿತಿ ಕೇಂದ್ರ, ಚಿತ್ರದುರ್ಗ ಜಿಲ್ಲೆ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 02 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡAತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.

(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 13 ನಿವೇಶನಗಳು, 6 ವಾಸದ ಮನೆಗಳು, 1 ವಾಣಿಜ್ಯ ಸಂಕೀರ್ಣ, 34 ಎಕರೆ 02 ಗುಂಟೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 6,75,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 20,040/- ನಗದು, ರೂ 28,58,643/- ಬೆಲೆ ಬಾಳುವ ಚಿನ್ನಾಭರಣಗಳು, ರೂ 43,00,000/- ಬೆಲೆ ಬಾಳುವ ವಾಹನಗಳು, ರೂ. 85,90,614/- ರೂ ಬೆಲೆಬಾಳುವ ಇತರೆ ವಸ್ತುಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,57,69,297/-
(ಇ) ಒಟ್ಟು ಅಸಮತೋಲನ ಆಸ್ತಿ ಮೌಲ್ಯ- ರೂ. 8,20,69,297/-

5) ಶೋಭಾ ಕೆ. ಆರ್, ಜಿಲ್ಲಾ ಅಧಿಕಾರಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 06 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.

(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 02 ನಿವೇಶನಗಳು, 1 ವಾಸದ ಮನೆ, 4 ಎಕರೆ 08 ಗುಂಟೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,76,38,000/-

(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,63,500/- ನಗದು, ರೂ 57,40,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 1,23,20,000/- ಬೆಲೆ ಬಾಳುವ ವಾಹನಗಳು, ರೂ. 30,21,435/- ಬೆಲೆಬಾಳುವ ಇತರೆ ವಸ್ತುಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,12,44,935/-
(ಇ) ಒಟ್ಟು ಅಸಮತೋಲನ ಆಸ್ತಿ ಮೌಲ್ಯ- ರೂ. 3,88,82,935/-

6) ಶಿವಣ್ಣ, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಬಳ್ಳಾರಿ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 05 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.

(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 14 ನಿವೇಶನಗಳು, 3 ವಾಸದ ಮನೆಗಳು, 44 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,24,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 28,00,000/- ನಗದು, ರೂ 19,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 1,82,000/- ಬೆಲೆ ಬಾಳುವ ವಾಹನಗಳು, ರೂ. 10,00,000/- ರೂ ಬೆಲೆಬಾಳುವ ಇತರೆ ಗೃಹೋಪಯೋಗಿ ವಸ್ತುಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 58,82,000/-
(ಇ) ಒಟ್ಟು ಅಸಮತೋಲನ ಆಸ್ತಿ ಮೌಲ್ಯ- ರೂ. 1,93,22,000/-

7) ಸುರೇಶ್. ಕೆ. ಎಲ್, ಹಣಕಾಸು ನಿಯಂತ್ರಕರು (ನಿವೃತ್ತ), ಕರ್ನಾಟಕ ಪಶು ವಿಜ್ಞಾನ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ್.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 02 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.

(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 02 ನಿವೇಶನಗಳು, 02 ವಾಸದ ಮನೆಗಳು, 3 ಎಕರೆ 34 ಗುಂಟೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 3,36,50,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 12,100/- ನಗದು, ರೂ 23,76,351/- ಬೆಲೆ ಬಾಳುವ ಚಿನ್ನಾಭರಣಗಳು, ರೂ 46,00,000/- ಬೆಲೆ ಬಾಳುವ ವಾಹನಗಳು, ರೂ. 32,53,489/- ರೂ ಬೆಲೆಬಾಳುವ ಇತರೆ ವಸ್ತುಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,02,41,940/-
(ಇ) ಒಟ್ಟು ಅಸಮತೋಲನ ಆಸ್ತಿ ಮೌಲ್ಯ- ರೂ. 3,42,00,000/-

8) ಐ. ಕೆ. ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ನಂ-1, ಹಾರಂಗಿ ಉಪ ವಿಭಾಗ, ಹಾರಂಗಿ, ಪ್ರಭಾರ ಸಹಾಯಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ ಹಾರಂಗಿ ಪುನರ್‌ವಸತಿ ವಿಭಾಗ ಕಛೇರಿ, ಕುಶಾಲನಗರ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 04 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.

(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 06 ನಿವೇಶನಗಳು, 1 ವಾಸದ ಮನೆ, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,98,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ 51,30,800/- ಬೆಲೆ ಬಾಳುವ ಚಿನ್ನಾಭರಣಗಳು, ರೂ 10,50,000/- ಬೆಲೆ ಬಾಳುವ ವಾಹನಗಳು, ರೂ. 40,00,000/- ರೂ ಬೆಲೆಬಾಳುವ ಇತರೆ ವಸ್ತುಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,01,80,800/-
(ಇ) ಒಟ್ಟು ಅಸಮತೋಲನ ಆಸ್ತಿ ಮೌಲ್ಯ- ರೂ. 2,40,46,748/-

ಇರಾನ್‌ನಲ್ಲಿರುವ ಭಾರತೀಯರಿಗೆ ಹೈ ಅಲರ್ಟ್: ಪವರ್ ಪ್ಲಾಂಟ್ ಮತ್ತು ಎತ್ತರದ ಕಟ್ಟಡಗಳಿಂದ ದೂರವಿರಲು ಸೂಚನೆ!

CRIME NEWS: ಬೆಂಗಳೂರಲ್ಲಿ ರಾಪಿಡೋ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಆರೋಪಿಯ ಬಂಧನ!

Share. Facebook Twitter LinkedIn WhatsApp Email

Related Posts

ಶಿವಮೊಗ್ಗದ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ; ಇಲ್ಲಿದೆ ಪುಲ್ ಡೀಟೆಲ್ಸ್

07/04/2026 9:26 PM2 Mins Read

ಮಹಾರಾಷ್ಟ್ರದ ಕನ್ನಡ ಶಿಕ್ಷಕರಿಗೆ ನೆರವಾಗಲು ಕರ್ನಾಟಕ ಮುಖ್ಯ ಕಾರ್ಯದರ್ಶಿಗಳ ಮನವಿ: ಕನ್ನಡದಲ್ಲೂ ‘ಟಿಇಟಿ’ ನಡೆಸಲು ಒತ್ತಾಯ

07/04/2026 8:42 PM2 Mins Read

ಕೆಎಸ್‌ಆರ್‌ಟಿಸಿ ನೌಕರರಿಗೆ ಬಿಗ್ ರಿಲೀಫ್: ಮುಷ್ಕರದ ಅವಧಿಯ ಶಿಸ್ತು ಪ್ರಕರಣಗಳ ನಿಯಮ ಬದಲು, ಶಿಕ್ಷೆ ಪ್ರಮಾಣ ಇಳಿಕೆ

07/04/2026 8:30 PM1 Min Read
Recent News

ಶಿವಮೊಗ್ಗದ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ; ಇಲ್ಲಿದೆ ಪುಲ್ ಡೀಟೆಲ್ಸ್

07/04/2026 9:26 PM

ಇಂದಿನ ಲೋಕಾಯುಕ್ತ ದಾಳಿಯಲ್ಲಿ ‘8 ಭ್ರಷ್ಟ ಅಧಿಕಾರಿ’ಗಳ ಬಳಿ ಸಿಕ್ಕ ಅಕ್ರಮ ಆಸ್ತಿ-ಪಾಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್

07/04/2026 9:06 PM

ಕುಡಿದು ಗಾಡಿ ಓಡಿಸಿ ಸಿಕ್ಕಿಬಿದ್ದ ಡೇವಿಡ್ ವಾರ್ನರ್: ಆಸೀಸ್ ಬ್ಯಾಟಿಂಗ್ ಹೀರೋ ಬಂಧನ; ಮುಂದಿನ ತಿಂಗಳು ಕೋರ್ಟ್‌ಗೆ ಹಾಜರು!

07/04/2026 8:50 PM

ಮಹಾರಾಷ್ಟ್ರದ ಕನ್ನಡ ಶಿಕ್ಷಕರಿಗೆ ನೆರವಾಗಲು ಕರ್ನಾಟಕ ಮುಖ್ಯ ಕಾರ್ಯದರ್ಶಿಗಳ ಮನವಿ: ಕನ್ನಡದಲ್ಲೂ ‘ಟಿಇಟಿ’ ನಡೆಸಲು ಒತ್ತಾಯ

07/04/2026 8:42 PM
State News
KARNATAKA

ಶಿವಮೊಗ್ಗದ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ; ಇಲ್ಲಿದೆ ಪುಲ್ ಡೀಟೆಲ್ಸ್

By kannadanewsnow0907/04/2026 9:26 PM KARNATAKA 2 Mins Read

ಶಿವಮೊಗ್ಗ: ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಬೇಟೆಯನ್ನು ಮುಂದುವರೆಸಿದ್ದು, ಇಂದು ಶಿವಮೊಗ್ಗದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ…

ಇಂದಿನ ಲೋಕಾಯುಕ್ತ ದಾಳಿಯಲ್ಲಿ ‘8 ಭ್ರಷ್ಟ ಅಧಿಕಾರಿ’ಗಳ ಬಳಿ ಸಿಕ್ಕ ಅಕ್ರಮ ಆಸ್ತಿ-ಪಾಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೆಲ್ಸ್

07/04/2026 9:06 PM

ಮಹಾರಾಷ್ಟ್ರದ ಕನ್ನಡ ಶಿಕ್ಷಕರಿಗೆ ನೆರವಾಗಲು ಕರ್ನಾಟಕ ಮುಖ್ಯ ಕಾರ್ಯದರ್ಶಿಗಳ ಮನವಿ: ಕನ್ನಡದಲ್ಲೂ ‘ಟಿಇಟಿ’ ನಡೆಸಲು ಒತ್ತಾಯ

07/04/2026 8:42 PM

ಕೆಎಸ್‌ಆರ್‌ಟಿಸಿ ನೌಕರರಿಗೆ ಬಿಗ್ ರಿಲೀಫ್: ಮುಷ್ಕರದ ಅವಧಿಯ ಶಿಸ್ತು ಪ್ರಕರಣಗಳ ನಿಯಮ ಬದಲು, ಶಿಕ್ಷೆ ಪ್ರಮಾಣ ಇಳಿಕೆ

07/04/2026 8:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.