ಬೆಂಗಳೂರು : ಬೆಂಗಳೂರಲ್ಲಿ ಮತ್ತೆ ಕನ್ನಡಿಗರ ಮೇಲೆ ದಬ್ಬಾಳಿಕೆ ಗೂಡಾಗಿರಿ ನಡೆದಿದೆ. ಕನ್ನಡಿಗರನ್ನು ಹಿಂಬಾಲಿಸಿಕೊಂಡು ಬಂದು, ತಮಿಳು ಗೂಂಡಾಗಳು ಅತ್ತಿಬೆಲೆ ಟೋಲ್ ಬಳಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪ ಈ ಒಂದು ಘಟನೆ ನಡೆದಿದೆ.
ಮಹಿಳೆಯರು ಮಕ್ಕಳ ಎದುರೇ ತಮಿಳುನಾಡಿನ ಗೂಂಡಾಗಳಿಂದ ಕನ್ನಡಿಗರ ಮೇಲೆ ಹಲ್ಲೆ ನಡೆದಿದೆ. ಟೆಂಪೋ ಟ್ರಾವೆಲರ್ ನಲ್ಲಿ ಇದ್ದವರ ಮೇಲೆ ದೊಣ್ಣೆ ಮತ್ತು ಮಾರಕಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ತಮಿಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಟಿಟಿ ವಾಹನದ ಚಾಲಕ ರಾಮಕೃಷ್ಣ ಮೇಲೆ ತಮಿಳು ಗೂಂಡಾಗಳು ಹಲ್ಲೆ ಮಾಡಿದ್ದಾರೆ.
ವೈಟ್ಫೀಲ್ಡ್ ನಿಂದ ತಮಿಳುನಾಡಿನ ಕೃಷ್ಣಗಿರಿಗೆ ಚಾಲಕ ಬಾಡಿಗೆಗೆ ಹೋಗಿದ್ದ. ಈ ವೇಳೆ ವಾಹನದಲ್ಲಿ ಇದ್ದಂತಹ ಕನ್ನಡಿಗರ ಜೊತೆಗೆ ಸ್ಥಳೀಯ ತಮಿಳು ಗೂಂಡಾಗಳು ಕಿರಿಕ್ ಮಾಡಿದ್ದಾರೆ. ಟಿಟಿ ವಾಹನದಲ್ಲಿದ್ದ ಕನ್ನಡಿಗರು ಕೃಷ್ಣಗಿರಿ ಸ್ಥಳೀಯರ ನಡುವೆ ಕಿರಿಕ್ ಆಗಿದೆ. ಈ ವೇಳೆ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಟಿಟಿ ವಾಹನದಲ್ಲಿ ಕನ್ನಡಿಗರು ಅತ್ತಿಬೆಲೆ ಕಡೆಗೆ ಬಂದಿದ್ದಾರೆ.
ಈ ವೇಳೆ ದೊಣ್ಣೆ ಮಾರಕಾಸ್ತ್ರಗಳಿಂದ ಹಿಡಿದು ತಮಿಳು ಗೂಂಡಾಗಳು ವಾಹನ ಹಿಂಬಾಲಿಸಿಕೊಂಡು ಬಂದಿದ್ದಾರೆ. ಅತ್ತಿಬೆಲೆ ಟೋಲ್ ನಲ್ಲಿ ಟಿಟಿ ವಾಹನ ಅಡ್ಡಗಟ್ಟಿ ತಮಿಳು ಗೂಂಡಾಗಳು ಹಲ್ಲೆ ಮಾಡಿದ್ದಾರೆ. ರಾಷ್ಟ್ರೀಯ ಹೆದಾರಿಯಲ್ಲಿಯೇ ಟಿಟಿ ವಾಹನದ ಗಾಜು ಒಡೆದು ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಚಾಲಕ ರಾಮಕೃಷ್ಣ ಮೇಲೆ ತಮಿಳು ಗೂಂಡಾಗಳಿಂದ ಮಾರಣಾಂತರಿಕ ಹಲ್ಲೆ ನಡೆದಿದೆ.








