ರೋಮ್: ಲಿಬಿಯಾದಿಂದ ಯುರೋಪ್ಗೆ ಹೊರಟಿದ್ದ ವಲಸಿಗರ ದೋಣಿಯೊಂದು ಇಟಲಿಯ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಸುಮಾರು 71 ಜನರು ಸಮುದ್ರ ಪಾಲಾಗಿದ್ದಾರೆ ಎಂದು ವರದಿಯಾಗಿದೆ. ಎರಡು ವ್ಯಾಪಾರಿ ಹಡಗುಗಳು ಸಮಯಪ್ರಜ್ಞೆ ಮೆರೆದು 32 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ.
ರಕ್ಷಣಾ ಕಾರ್ಯಾಚರಣೆ: ಇಟಲಿಯ ಕರಾವಳಿಯ ಸಮೀಪದಲ್ಲಿದ್ದ ಎರಡು ವ್ಯಾಪಾರಿ ಹಡಗುಗಳು ಕಾರ್ಯಾಚರಣೆ ನಡೆಸಿ 32 ಜನರನ್ನು ರಕ್ಷಿಸಿವೆ. ಇದೇ ವೇಳೆ ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.
ಪ್ರಯಾಣಿಕರ ಸಂಖ್ಯೆ: ದೋಣಿಯಲ್ಲಿ ಒಟ್ಟು 105 ಪ್ರಯಾಣಿಕರಿದ್ದರು ಎಂದು ಬದುಕುಳಿದವರು ಮಾಹಿತಿ ನೀಡಿದ್ದಾರೆ. ಈ ಪೈಕಿ 71 ಜನರು ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಅವರು ಮೃತಪಟ್ಟಿರುವ ಆತಂಕ ಎದುರಾಗಿದೆ.
ಲಾಂಪೆಡುಸಾ ದ್ವೀಪಕ್ಕೆ ಸ್ಥಳಾಂತರ: ರಕ್ಷಿಸಲ್ಪಟ್ಟವರನ್ನು ಇಟಾಲಿಯನ್ ಕೋಸ್ಟ್ ಗಾರ್ಡ್ ನೌಕೆಗೆ ವರ್ಗಾಯಿಸಲಾಗಿದ್ದು, ಸದ್ಯ ಅವರನ್ನು ಇಟಲಿಯ ಲಾಂಪೆಡುಸಾ ದ್ವೀಪಕ್ಕೆ ಕರೆತರಲಾಗಿದೆ ಎಂದು ‘ಮೆಡಿಟರೇನಿಯಾ ಸೇವಿಂಗ್ ಹ್ಯೂಮನ್ಸ್’ ಮತ್ತು ‘ಸೀ-ವಾಚ್’ ಸಂಸ್ಥೆಗಳು ತಿಳಿಸಿವೆ.








