Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಬಹುದೊಡ್ಡ ಕಾರ್ಯಾಚರಣೆ : ಜೂಜಾಟದ ಮೇಲೆ ದಾಳಿ, 19 ಜನರು ಅರೆಸ್ಟ್, 9 ಲಕ್ಷ ಜಪ್ತಿ!

05/04/2026 4:45 PM

ಮೈಸೂರಲ್ಲಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿ ಅರೆಸ್ಟ್

05/04/2026 4:41 PM

NMACC ಸಂಭ್ರಮದಲ್ಲಿ ನೀತಾ ಅಂಬಾನಿ: ‘ಸ್ವದೇಶ್’ ಕಾಂಜೀವರಂ ಸೀರೆಯಲ್ಲಿ ದೇವಲೋಕದ ಅಪ್ಸರೆಯಂತೆ ಮಿಂಚಿದ ಕಲಾ ಪೋಷಕಿ!

05/04/2026 4:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಸೂರಲ್ಲಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿ ಅರೆಸ್ಟ್
KARNATAKA

ಮೈಸೂರಲ್ಲಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿ ಅರೆಸ್ಟ್

By kannadanewsnow0905/04/2026 4:41 PM

ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆಗೈದು, ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ತಲೆಮರೆಸಿಕೊಂಡಿದ್ದ ಪತಿಯನ್ನು ಸರಗೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೇರಳಾಪುರ ನಿವಾಸಿ ಜಗದೀಶ್ (45) ಎಂದು ಗುರುತಿಸಲಾಗಿದೆ. ಈತನ ಪತ್ನಿ ಶ್ರುತಿ (30) ಕೊಲೆಯಾದ ದುರ್ದೈವಿ.

ಘಟನೆಯ ಹಿನ್ನೆಲೆ:

ಜಗದೀಶ್ ಮತ್ತು ಶ್ರುತಿ ದಂಪತಿಗೆ 12 ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರಿಗೆ ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ಮಗುವಿದೆ. ದಂಪತಿಗಳು ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ದಂಪತಿಗಳ ನಡುವೆ ಕ್ಷುಲ್ಲಕ ವಿಚಾರಗಳಿಗೂ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ.

ಕೊಲೆ ಮಾಡಿ ನಾಟಕವಾಡಿದ್ದ ಆರೋಪಿ:

ಕಳೆದ ಗುರುವಾರ ಮಧ್ಯಾಹ್ನ ದಂಪತಿಗಳ ನಡುವೆ ಗಂಭೀರ ಜಗಳ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಜಗದೀಶ್ ಪತ್ನಿ ಶ್ರುತಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಶ್ರುತಿ ಸಾವನ್ನಪ್ಪಿದ್ದಾರೆ. ಪತ್ನಿ ಮೃತಪಡುತ್ತಿದ್ದಂತೆ ಗಾಬರಿಗೊಂಡ ಆರೋಪಿ, ಇದೊಂದು ಆತ್ಮಹತ್ಯೆ ಎಂದು ತೋರಿಸಲು ಶವಕ್ಕೆ ಸೀರೆಯಿಂದ ನೇಣು ಬಿಗಿದು ಅಲ್ಲಿಂದ ಪರಾರಿಯಾಗಿದ್ದ.

ಪೊಲೀಸ್ ಕಾರ್ಯಾಚರಣೆ:

ಘಟನೆ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ಹುಣಸೂರು ಡಿವೈಎಸ್ಪಿ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿ ಪತಿಯನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಜಗದೀಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಶಕಕ್ಕೂ ಹೆಚ್ಚು ಕಾಲ ಜೊತೆಯಾಗಿದ್ದ ಪತಿಯೇ ಪತ್ನಿಯ ಪ್ರಾಣ ತೆಗೆದ ಘಟನೆ ಬಿದರಹಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.

ನೌಕರರಿಗೆ ಗುಡ್ ನ್ಯೂಸ್: ಇನ್ಮುಂದೆ ಪ್ರತಿ ವರ್ಷವೂ ಸಿಗಲಿದೆ ‘ರಜೆ ನಗದೀಕರಣ’ ಸೌಲಭ್ಯ; ಬದಲಾಗಲಿದೆ ಕಾರ್ಮಿಕ ಕಾಯ್ದೆ!

NMACC ಸಂಭ್ರಮದಲ್ಲಿ ನೀತಾ ಅಂಬಾನಿ: ‘ಸ್ವದೇಶ್’ ಕಾಂಜೀವರಂ ಸೀರೆಯಲ್ಲಿ ದೇವಲೋಕದ ಅಪ್ಸರೆಯಂತೆ ಮಿಂಚಿದ ಕಲಾ ಪೋಷಕಿ!

Share. Facebook Twitter LinkedIn WhatsApp Email

Related Posts

ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಬಹುದೊಡ್ಡ ಕಾರ್ಯಾಚರಣೆ : ಜೂಜಾಟದ ಮೇಲೆ ದಾಳಿ, 19 ಜನರು ಅರೆಸ್ಟ್, 9 ಲಕ್ಷ ಜಪ್ತಿ!

05/04/2026 4:45 PM1 Min Read

ರಾಜ್ಯಾದ್ಯಂತ ಗ್ಯಾಸ್ ಸಮಸ್ಯೆ : ನಾಳೆ ಸಚಿವ ಕೆ.ಎಚ್ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರ ನಿರ್ಧಾರ!

05/04/2026 4:07 PM1 Min Read

BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

05/04/2026 3:52 PM2 Mins Read
Recent News

ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಬಹುದೊಡ್ಡ ಕಾರ್ಯಾಚರಣೆ : ಜೂಜಾಟದ ಮೇಲೆ ದಾಳಿ, 19 ಜನರು ಅರೆಸ್ಟ್, 9 ಲಕ್ಷ ಜಪ್ತಿ!

05/04/2026 4:45 PM

ಮೈಸೂರಲ್ಲಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿ ಅರೆಸ್ಟ್

05/04/2026 4:41 PM

NMACC ಸಂಭ್ರಮದಲ್ಲಿ ನೀತಾ ಅಂಬಾನಿ: ‘ಸ್ವದೇಶ್’ ಕಾಂಜೀವರಂ ಸೀರೆಯಲ್ಲಿ ದೇವಲೋಕದ ಅಪ್ಸರೆಯಂತೆ ಮಿಂಚಿದ ಕಲಾ ಪೋಷಕಿ!

05/04/2026 4:28 PM

ನೌಕರರಿಗೆ ಗುಡ್ ನ್ಯೂಸ್: ಇನ್ಮುಂದೆ ಪ್ರತಿ ವರ್ಷವೂ ಸಿಗಲಿದೆ ‘ರಜೆ ನಗದೀಕರಣ’ ಸೌಲಭ್ಯ; ಬದಲಾಗಲಿದೆ ಕಾರ್ಮಿಕ ಕಾಯ್ದೆ!

05/04/2026 4:22 PM
State News
KARNATAKA

ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಬಹುದೊಡ್ಡ ಕಾರ್ಯಾಚರಣೆ : ಜೂಜಾಟದ ಮೇಲೆ ದಾಳಿ, 19 ಜನರು ಅರೆಸ್ಟ್, 9 ಲಕ್ಷ ಜಪ್ತಿ!

By kannadanewsnow0505/04/2026 4:45 PM KARNATAKA 1 Min Read

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಪೊಲೀಸರು ಬಹುದೊಡ್ಡ ಕಾರ್ಯಾಚರಣೆ ಒಂದು ನಡೆಸಿದ್ದು, ಜೂಜು ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.…

ಮೈಸೂರಲ್ಲಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿ ಅರೆಸ್ಟ್

05/04/2026 4:41 PM

ರಾಜ್ಯಾದ್ಯಂತ ಗ್ಯಾಸ್ ಸಮಸ್ಯೆ : ನಾಳೆ ಸಚಿವ ಕೆ.ಎಚ್ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರ ನಿರ್ಧಾರ!

05/04/2026 4:07 PM

BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

05/04/2026 3:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.