ದಾವಣಗೆರೆ : ಇದೇ ಏಪ್ರಿಲ್ 9 ರಂದು ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ ನಡೆಯುತ್ತಿದ್ದು ಈಗಾಗಲೇ ರಾಜಕೀಯ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದೇ ವೇಳೆ ಕುರ್ಚಿ ಅಲುಗಾಡಿದರೆ ಮಾತ್ರ ಸಿಎಂ ಅಹಿಂದ ಅಹಿಂದ ಅಂತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಕುರ್ಚಿ ಅಲುಗಾಡಿದರೆ ಮಾತ್ರ ಸಿಎಂ ಅಹಿಂದ ಅಂತಾರೆ, ಕುರ್ಚಿ ಸರಿಯಾಗಿದ್ದರೆ ಅಹಿಂದವನು ಹಿಂದೆ ಹಾಕುವ ಕೆಲಸ ಮಾಡುತ್ತಾರೆ, ಇದೆಲ್ಲ ಸಿಎಂ ಸಿದ್ದರಾಮಯ್ಯ ಅವರ ನಾಟಕ. ಸಿಎಂ ಸಿದ್ದರಾಮಯ್ಯ ಜಾತ್ಯತೀತ ನಾಯಕ ಎಂದು ಹೇಳುತ್ತಿದ್ದಾರೆ. ಅದೇ ಜಾತ್ಯಾತೀತ ಜನತಾದಳ ಪಕ್ಷದಲ್ಲಿ ಇದ್ದಾಗ ಏನ್ ಮಾಡಿದ್ರು? ಯುದ್ಧದ ಕಾಲದಲ್ಲಿ ಎಲ್ಲಾ ಕಡಿಯು ಸಿಲಿಂಡರ್ ಸಮಸ್ಯೆ ಆಗಿದೆ. ಪ್ರಧಾನಮಂತ್ರಿಯ ಬಗ್ಗೆ ಒಳ್ಳೆಯ ಮಾತು ಇಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.








