ಹುಬ್ಬಳ್ಳಿ : ಲವ್ ಜಿಹಾದ್ ಕೇಸಲ್ಲಿ ಜಿಮ್ ಟ್ರೈನರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಮೀರ್ ವಿರುದ್ಧ ಸಂತ್ರಸ್ತೆ ಇದೀಗ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಸಂತ್ರಸ್ತ ಯುವತಿ ಶುಕ್ರವಾರ ರಾತ್ರಿ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಸಮೀರ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ.
ನಾನು ಜಿಮ್‌ಗೆ ಹೋಗುವಾಗ ಸಮೀರ್ ಪರಿಚಯವಾಗಿದ್ದ. 2025ರ ಆ.16ರಂದು ನನ್ನ ಮನೆಗೆ ಕರೆಸಿಕೊಂಡಿದ್ದ. ಆ ವೇಳೆ ಜ್ಯೂಸ್‌ನಲ್ಲಿ ಮತ್ತು ಬರೋ ಪದಾರ್ಥ ಹಾಕಿ ನನಗೆ ಕುಡಿಸಿದ್ದ. ಬಳಿಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದನ್ನು ವಿಡಿಯೋ ಮಾಡಿಟ್ಟುಕೊಂಡು ಬೆದರಿಕೆ ಹಾಕಿದ್ದ. ಇದಾದ ಬಳಿಕ ಬೆದರಿಕೆ ಹಾಕಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಸದ್ಯ ಯುವತಿಯ ದೂರಿನ ಆಧಾರದ ಮೇಲೆ ಸಮೀರ್ ವಿರುದ್ಧ ಬಿಎನ್‌ಎಸ್ 64(1), 351, 123 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ದೂರಿನ ಹಿನ್ನೆಲೆ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸದ್ಯ ಸಮೀರ್ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಲವ್ ಜಿಹಾದ್ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸಮೀರ್ ಬಂಡವಾಳ ಮತ್ತಷ್ಟು ಬಯಲಾಗಿದೆ.
ಬೇರೆ ಬೇರೆ ಯುವತಿಯರ ಜೊತೆಗೆ ಸಮೀರ್ ಇರುವ ಪೋಟೋಗಳು ವೈರಲ್ ಆಗಿದೆ. ಜೀಮ್‌ಗೆ ಬರುವ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಸ್ನೇಹ ಬೆಳೆಸಿಕೊಳ್ಳುತ್ತಿದ್ದ. ಪೊಲೀಸರು ಸಮೀರ್ ಮೊಬೈಲ್ ಪರಿಶೀಲನೆ ಮಾಡಿದಾಗ ಹಲವು ವಿಚಾರಗಳು ಬಯಲಾಗಿವೆ. ಬ್ರೌಸಿಂಗ್ ಹಿಸ್ಟರಿಯಲ್ಲಿ ಅಸಭ್ಯ ಮತ್ತು ನಿಷೇಧಿತ ವೆಬ್ ಬಳಕೆ ಮಾಡುತ್ತಿರುವುದು ಗೊತ್ತಾಗಿದೆ.ಯುವತಿಗೆ, ಆರೋಪಿ ಸಮೀರ್ ಮುಲ್ಲಾ ಗರ್ಭಪಾತ ಮಾಡಿಸಿರುವ ವಿಷಯ ಬಹಿರಂಗವಾಗಿದೆ. ಹಾಗಾಗಿ ಪೊಲೀಸರು ಈ ಬಗ್ಗೆ ವೈದ್ಯಕೀಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಹೌದು ಆರೋಪಿ ಸಮೀರ್ ಮತ್ತು ಯುವತಿಯನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಹುಬ್ಬಳ್ಳಿಯ ವಿದ್ಯಾನಗರ ಠಾಣೆ ಪೊಲೀಸ್ರಿಂದ ವಿಚಾರಣೆಗೆ ಸಿದ್ಧತೆ ನಡೆದಿದೆ. ಸಂತ್ರಸ್ತ ಯುವತಿಯ ಮೇಲೆ ಸಮೀರ್ ಮುಲ್ಲಾ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ ಈ ಹಿನ್ನೆಲೆ ಸಮೀರ್ ಮುಲ್ಲಾನ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುತಿಯನ್ನು ಸಮೀರ್ ಮಾಡೆಲ್ ಮಾಡುತ್ತೇನೆ ಎಂದು ಹೇಳಿದ್ದ. ಹಾಗಾಗಿ ನಿತ್ಯ ಜಿಮ್ ಗೆ ಬಾ ಎಂದು ಯುವತಿಗೆ ಹೇಳಿದ್ದ. ಸಮೀರ್ ಮಾತು ಕೇಳಿ ಯುವತಿ ಮಾಡೆಲ್ ಆಗುವ ಕನಸುಕಂಡಿದ್ದಳು. ಇದೇ ಕಾರಣಕ್ಕೆ ಸಮೀರ್ ಮತ್ತು ಯುವತಿ ನಡುವೆ ಆತ್ಮೀಯ ಬೆಳೆದಿತ್ತು. ಅದನ್ನೇ ದುರ್ಬಳಕೆ ಮಾಡಿಕೊಂಡ ಅಂತ ಯುವತಿಯ ಪೋಷಕರು ಆರೋಪಿಸುತ್ತಿದ್ದಾರೆ.








