ಮಂಡ್ಯ : ನಿನ್ನೆ ಸಂಜೆ ಮಂಡ್ಯದಲ್ಲಿ ನಡೆದಿದ್ದ ಶೋಭಾಯಾತ್ರೆಯಲ್ಲಿ ಅನುಮತಿ ಪಡೆಯದೇ ಡಿಜೆ ಬಳಸಿದಕ್ಕೆ VHP, ಬಜರಂಗದಳ, ದುರ್ಗಾವಾಹಿನಿ, ಶ್ರೀರಾಮಾಂಜನೇಯ ಸಮಿತಿ ಆಯೋಜಿಸಿದ್ದ ಶೋಭಾಯಾತ್ರೆ. ಶೋಭಾಯಾತ್ರೆ ಆಯೋಜಕರು, ಡಿಜೆ ವಾಹನದ ಮಾಲೀಕ, ಚಾಲಕ, ಜನರೇಟರ್ ವಾಹನದ ಮಾಲೀಕ, ಚಾಲಕ, ಡಿಜೆ ಟೆಕ್ನಿಷಿಯನ್ ಸೇರಿ 12 ಮಂದಿ ವಿರುದ್ಧ FIR ದಾಖಲಾಗಿದೆ.
ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊಕದ್ದಮೆ ದಾಖಲಾಗಿದೆ.PSI ಸುನಿಲ್ ದೂರು ಆಧರಿಸಿ FIR ದಾಖಲು ಆಗಿದೆ. ಹಿಂದೂ ಮುಖಂಡರಾದ ಕೆ.ಎಸ್.ರವಿ, ಚಿಕ್ಕಬಳ್ಳಿ ಬಾಲು, ಶ್ರೀನಿವಾಸ, ವಿನೋಬಾ, ಬಸವರಾಜುರವರ ವಿರುದ್ಧ FIR ದಾಖಲಾಗಿದೆ. ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಭಂಗ ಉಂಟು ಮಾಡಿ, ರಸ್ತೆಯಲ್ಲಿ ಸಾರ್ವಜನಿಕರಿಗೆ ಅಪಾಯ ಉಂಟು ಮಾಡುವ, ಉಪದ್ರವ ಉಂಟು ಮಾಡುವ ರೀತಿಯಲ್ಲಿ ಕಾನೂನು ಉಲ್ಲಂಘನೆ ಆರೋಪ ಹಿನ್ನೆಲೆ, ಕಲಂ 285, 292, 125, BNS 36, 109 ಕೆಪಿ ಆಕ್ಟ್, 188 ಐಎಂವಿ ಆಕ್ಟ್ ಅಡಿ ಪ್ರಕರಣ ದಾಖಲು.








