ನವದೆಹಲಿ : ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತಗಳ ನಡುವೆಯೂ ಭಾರತದ ಜನತೆಗೆ ಸಮಾಧಾನಕರ ಸುದ್ದಿಯೊಂದು ಲಭಿಸಿದೆ. ದೇಶದ ಪ್ರಮುಖ ತೈಲ ಕಂಪನಿಗಳು ಇಂದು ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಹೌದು ಇರಾನ್ ಇಸ್ರೇಲ್ ಯುದ್ಧದ ನಡುವೆ ಇದೀಗ ದೇಶದ ಜನತೆಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸಾಮಾನ್ಯ ಪೆಟ್ರೋಲ್ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 94.77 ಹಾಗು ಡಿಸೇಲ್ 87.67 ಜಾಗತಿಕ ತೈಲ ಮಾರುಕಟ್ಟೆ ಬೆಲೆ 100% ಹೆಚ್ಚಾದರೂ ದೇಶದಲ್ಲಿ ದರ ಸ್ಥಿರವಾಗಿದೆ.ಅಂತಾರಾಷ್ಟ್ರೀಯ ದರ ಏರಿಕೆಯಿಂದ ಜನರನ್ನು ರಕ್ಷಿಸಲು ಪ್ರಧಾನಿ ಬದ್ಧತೆ.
ಕೇವಲ ಪ್ರಿಮಿಯಂ ಪೆಟ್ರೋಲ್ ಬೆಲೆಯಲ್ಲಿ ಮಾತ್ರ ಲೀಟರ್ 2 ಹೆಚ್ಚಳ ಆಗಿದೆ. ಇಂಧನ ಮಾರಾಟದಲ್ಲಿ ಪ್ರಿಮಿಯಂ ಪೆಟ್ರೋಲ್ ಪಾಲು 2% ರಿಂದ 5% ಮಾತ್ರ ಹೆಚ್ಚಿದೆ. ಪ್ರಿಮಿಯಂ ಇಂಧನ ಬಳಸುವ ಗ್ರಾಹಕರಿಗೆ ಮಾತ್ರ ದರ ಪರಿಷ್ಕರಣೆ ಅನ್ವಯ ಆಗಲಿದೆ. ಇತರೆ ದೇಶಗಳಲಿ ತೈಲ ದರ ಹೆಚ್ಚಾದರೂ ಭಾರತದಲ್ಲಿ ಬೆಲೆ ನಿಯಂತ್ರಣ ಇದ್ದು, ಪ್ರತಿ ಪೆಟ್ರೋಲ್ ಬಂಕ್ ಗಳಲ್ಲಿ ಸಾಮಾನ್ಯ ಇಂಧನ ಹಳೆಯ ದರದಲ್ಲಿ ಲಭ್ಯವಿರಲಿದೆ.








