Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾತ್ರೆ ಬೇಡ, ಕೆಮಿಕಲ್ ಬೇಡ; ಲೈಂಗಿಕ ಸಾಮರ್ಥ್ಯ ಮತ್ತು ಸ್ಟ್ಯಾಮಿನಾ ಹೆಚ್ಚಿಸಬಲ್ಲ ಸೂಪರ್ ಫುಡ್ಸ್ ಇವು! | Sexual Stamina

ದಿನವೂ ಧರಿಸುವ ನೈಟಿ, ಲುಂಗಿಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು? ಇಲ್ಲಿದೆ ಆರೋಗ್ಯದ ರಹಸ್ಯ!

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದಿನಿಂದ `ATM’ ವಿತ್ ಡ್ರಾ, `ITR’ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಇಲ್ಲಿದೆ ಸಂಪೂರ್ಣ ಮಾಹಿತಿ
INDIA

BIG NEWS : ಇಂದಿನಿಂದ `ATM’ ವಿತ್ ಡ್ರಾ, `ITR’ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow57

ಹೊಸ ಹಣಕಾಸು ವರ್ಷ (2026-27) ಆರಂಭವಾಗುತ್ತಿದ್ದಂತೆ, ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಹಲವು ಪ್ರಮುಖ ಬದಲಾವಣೆಗಳು ಇಂದಿನಿಂದ (ಏಪ್ರಿಲ್ 1) ಜಾರಿಗೆ ಬರುತ್ತಿವೆ. ಪಾನ್ ಕಾರ್ಡ್, ಐಟಿಆರ್ ಫೈಲಿಂಗ್, ಫಾಸ್ಟಾಗ್ ಮತ್ತು ಕ್ರೆಡಿಟ್ ಕಾರ್ಡ್ಗಳಿಗೆ ಸಂಬಂಧಿಸಿದ ಈ ಹೊಸ ನಿಯಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅವಶ್ಯಕ.

1. ಪಾನ್ ಕಾರ್ಡ್ ಪಡೆಯಲು ಹೆಚ್ಚಿನ ದಾಖಲೆ ಅಗತ್ಯ
ಇಂದಿನಿಂದ ಪಾನ್ ಕಾರ್ಡ್ (PAN Card) ಪಡೆಯುವ ಪ್ರಕ್ರಿಯೆ ಮತ್ತಷ್ಟು ಕಟ್ಟುನಿಟ್ಟಾಗಲಿದೆ. ಈ ಮೊದಲು ಕೇವಲ ಆಧಾರ್ ಕಾರ್ಡ್ ಮೂಲಕ ಸುಲಭವಾಗಿ ಪಾನ್ ಕಾರ್ಡ್ ಪಡೆಯಬಹುದಿತ್ತು. ಆದರೆ ಈಗ ಆಧಾರ್ ಜೊತೆಗೆ ಈ ಕೆಳಗಿನ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸುವುದು ಕಡ್ಡಾಯ:

ಜನನ ಪ್ರಮಾಣ ಪತ್ರ (Birth Certificate)

ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್

ಪಾಸ್ಪೋರ್ಟ್ ಅಥವಾ 10ನೇ ತರಗತಿಯ ಅಂಕಪಟ್ಟಿ

ಗಮನಿಸಿ: ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದರೂ, ಇನ್ನು ಮುಂದೆ ಹೊಸ ಪಾನ್ ಕಾರ್ಡ್ ಕೈ ಸೇರಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು.

2. ಐಟಿಆರ್ (ITR) ಫೈಲಿಂಗ್ ಗಡುವು ಬದಲಾವಣೆ
ಆದಾಯ ತೆರಿಗೆ ಸಲ್ಲಿಕೆಯ ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದೆ:

ITR-1 ಮತ್ತು ITR-2: ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

ITR-3 ಮತ್ತು ITR-4: (ಆಡಿಟ್ ಅಗತ್ಯವಿಲ್ಲದ ಪ್ರಕರಣಗಳಿಗೆ) ಸಲ್ಲಿಕೆ ಮಾಡಲು ಆಗಸ್ಟ್ 31ರವರೆಗೆ ಕಾಲಾವಕಾಶ ನೀಡಲಾಗಿದೆ.

3. ಫಾಸ್ಟಾಗ್ (FASTag) ವಾರ್ಷಿಕ ಪಾಸ್ ದರ ಏರಿಕೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಾಹನ ಸವಾರರಿಗೆ ಶಾಕ್ ನೀಡಿದೆ. ಫಾಸ್ಟಾಗ್ ವಾರ್ಷಿಕ ಪಾಸ್ ದರವನ್ನು 3,000 ರೂ.ನಿಂದ 3,075 ರೂ.ಗೆ ಏರಿಸಲಾಗಿದೆ. ಅಂದರೆ ಶೇ. 2.5 ರಷ್ಟು ಹೆಚ್ಚಿನ ಹಣವನ್ನು ಇಂದಿನಿಂದ ಪಾವತಿಸಬೇಕಾಗುತ್ತದೆ.

4. ಮನೆ ಬಾಡಿಗೆ (HRA) ಕ್ಲೈಮ್ ನಿಯಮ ಕಠಿಣ
ತೆರಿಗೆ ವಿನಾಯಿತಿಗಾಗಿ ಸುಳ್ಳು ದಾಖಲೆ ನೀಡುವುದನ್ನು ತಡೆಯಲು HRA ನಿಯಮಗಳನ್ನು ಕಠಿಣಗೊಳಿಸಲಾಗಿದೆ:

ವರ್ಷಕ್ಕೆ 1 ಲಕ್ಷ ರೂಪಾಯಿಗಿಂತ ಹೆಚ್ಚು ಬಾಡಿಗೆ ಪಾವತಿಸುವವರು ಕಡ್ಡಾಯವಾಗಿ ಮನೆ ಮಾಲೀಕರ ಪಾನ್ (PAN) ಸಂಖ್ಯೆ ನೀಡಬೇಕು.

ಮನೆ ಮಾಲೀಕರು ಕುಟುಂಬದ ಸದಸ್ಯರೇ ಎಂಬ ಮಾಹಿತಿಯನ್ನು ಸ್ಪಷ್ಟಪಡಿಸಬೇಕು.

ಇದಕ್ಕಾಗಿ ನೌಕರರು ಇಂದಿನಿಂದ ಪ್ರತ್ಯೇಕ ಫಾರ್ಮ್ ಭರ್ತಿ ಮಾಡುವುದು ಅಗತ್ಯ.

5. ಕ್ರೆಡಿಟ್ ಕಾರ್ಡ್ ಮತ್ತು ಎಟಿಎಂ ವಿತ್ಡ್ರಾ ನಿಯಮಗಳು
ಕ್ರೆಡಿಟ್ ಕಾರ್ಡ್: ಇನ್ಮುಂದೆ ಕ್ರೆಡಿಟ್ ಕಾರ್ಡ್ ಮೂಲಕ ಆದಾಯ ತೆರಿಗೆ ಪಾವತಿಸಬಹುದು (ಹೆಚ್ಚುವರಿ ಶುಲ್ಕ ಅನ್ವಯಿಸುತ್ತದೆ). ವರ್ಷಕ್ಕೆ 10 ಲಕ್ಷ ರೂ.ಗಿಂತ ಹೆಚ್ಚಿನ ಡಿಜಿಟಲ್ ಖರ್ಚು ಅಥವಾ 1 ಲಕ್ಷ ರೂ.ಗಿಂತ ಹೆಚ್ಚಿನ ನಗದು ಪಾವತಿಯ ಮೇಲೆ ಐಟಿ ಇಲಾಖೆ ಕಣ್ಣಿಡಲಿದೆ.

ಎಟಿಎಂ ಬದಲಾವಣೆ: * HDFC ಬ್ಯಾಂಕ್: ಮೆಟ್ರೋ ನಗರಗಳಲ್ಲಿ ಉಚಿತ ವಹಿವಾಟು ಮಿತಿ 3ಕ್ಕೆ ಇಳಿಕೆ.

PNB: ಕೆಲವು ಕಾರ್ಡ್ಗಳ ದಿನದ ವಿತ್ಡ್ರಾ ಮಿತಿಯನ್ನು 1 ಲಕ್ಷ ರೂ.ನಿಂದ 50,000 ರೂ.ಗೆ ಇಳಿಸಿದೆ.

ಬಂಧನ್ ಬ್ಯಾಂಕ್: ತಿಂಗಳಿಗೆ ಕೇವಲ 5 ಉಚಿತ ವಹಿವಾಟುಗಳನ್ನು ಮಾತ್ರ ನೀಡಲಿದೆ.

BIG NEWS: Significant changes in `ATM' withdrawal `ITR' rules from today: Here is the complete information
Share. Facebook Twitter LinkedIn WhatsApp Email

Related Posts

‘ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಇಲ್ಲ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು!’: ಸುಪ್ರೀಂ ಕೋರ್ಟ್

1 Min Read

X ಖಾತೆ ಬ್ಲಾಕ್: ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ‘ಕಾಕ್ರೋಚ್ ಜನತಾ ಪಾರ್ಟಿ’ ಸಂಸ್ಥಾಪಕ!

2 Mins Read

​’ಟ್ರಂಪ್ ಭಾರತ ಮತ್ತು ಮೋದಿಯ ದೊಡ್ಡ ಫ್ಯಾನ್!’: ಅಮೆರಿಕದಲ್ಲಿನ ಭಾರತ ವಿರೋಧಿ ಹೇಳಿಕೆಗೆ ಮಾರ್ಕೊ ರೂಬಿಯೋ ಸ್ಪಷ್ಟನೆ

3 Mins Read
Recent News

ಮಾತ್ರೆ ಬೇಡ, ಕೆಮಿಕಲ್ ಬೇಡ; ಲೈಂಗಿಕ ಸಾಮರ್ಥ್ಯ ಮತ್ತು ಸ್ಟ್ಯಾಮಿನಾ ಹೆಚ್ಚಿಸಬಲ್ಲ ಸೂಪರ್ ಫುಡ್ಸ್ ಇವು! | Sexual Stamina

ದಿನವೂ ಧರಿಸುವ ನೈಟಿ, ಲುಂಗಿಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು? ಇಲ್ಲಿದೆ ಆರೋಗ್ಯದ ರಹಸ್ಯ!

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

‘ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಇಲ್ಲ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು!’: ಸುಪ್ರೀಂ ಕೋರ್ಟ್

State News
KARNATAKA

ರಾಯಚೂರಲ್ಲಿ ‘LPG ಗ್ಯಾಸ್’ ಅಭಾವ: ಏಜೆನ್ಸಿ ಮುಂದೆಯೇ ‘ಸಿಲಿಂಡರ್’ಗಾಗಿ ಹಗಲು-ರಾತ್ರಿ ಕಾದು ಮಲಗಿದ ಜನರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಲಿಂಡರ್‌ಗಾಗಿ ಸಾರ್ವಜನಿಕರು…

ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ

BREAKING: ಬೆಂಗಳೂರಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ₹24 ಕೋಟಿ ವಂಚಿಸಿದ್ದ ಆರು ಖತರ್ನಾಕ್ ಸೈಬರ್ ಕಳ್ಳರು ಅರೆಸ್ಟ್!

ಜೂನ್.1ರಂದು ಶಿವಮೊಗ್ಗದಲ್ಲಿ ಸಿಎಂ ಸಿದ್ಧರಾಮಯ್ಯ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳ ಶಂಕುಸ್ಥಾಪನೆ; ಸಚಿವ ಮಧು ಬಂಗಾರಪ್ಪ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.