ಬೆಂಗಳೂರು : ರಾಜ್ಯದಲ್ಲಿ ಬರೋಬ್ಬರಿ 7.76 ಲಕ್ಷ ಅನರ್ಹ ಬಿಪಿಎಲ್ ಫಲಾನುಭವಿಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಜತೆಗೆ ರಾಜ್ಯದ ‘ಕುಟುಂಬ’ ತಂತ್ರಾಂಶದಡಿ 13.87 ಲಕ್ಷ ಶಂಕಾಸ್ಪದ ಫಲಾನುಭವಿಗಳು ಕಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ‘ಅನ್ನಭಾಗ್ಯ’ ಯೋಜನೆಯ 4.54 ಕೋಟಿ ಫಲಾನುಭವಿಗಳ ಪೈಕಿ 21.63 ಲಕ್ಷ ಫಲಾನುಭವಿಗಳು ಹೊರಗುಳಿಯುವ ಸಾಧ್ಯತೆಗಳಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಮಾಸಿಕ 25 ಕೋಟಿ ರೂ. ಉಳಿತಾಯ ಆಗುವ ಅಂದಾಜಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಕೇಂದ್ರ ಸರ್ಕಾರ ಗುರುತಿಸಿದ್ದ 7.76 ಲಕ್ಷ ಸಂಶಯಾಸ್ಪದ ಅನರ್ಹ ಫಲಾನುಭವಿಗಳ ಪೈಕಿ 4.72 ಲಕ್ಷ ಫಲಾನುಭವಿಗಳ ಕಾರ್ಡ್ಗಳನ್ನು ಅಮಾನತು ಅಥವಾ ರದ್ದು ಮಾಡಲಾಗಿದೆ. ಇನ್ನುಳಿದ 3.03 ಲಕ್ಷ ಫಲಾನುಭವಿಗಳ ವಿಚಾರದಲ್ಲಿ ಪರಿಶೀಲನಾ ಕ್ರಮ ಚಾಲ್ತಿಯಲ್ಲಿದೆ. ಇಷ್ಟು 4.72 ಲಕ್ಷ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ಹೊರಗುಳಿದಿರುವುದರಿಂದ 8 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಆದಂತಾಗಿದೆ.
ರಾಜ್ಯದಲ್ಲಿ ಒಟ್ಟು 4.54 ಕೋಟಿ ‘ಅನ್ನಭಾಗ್ಯ’ ಫಲಾನುಭವಿಗಳಿದ್ದು ಈ ಪೈಕಿ ಕೇಂದ್ರ ಸರ್ಕಾರ ಗುರುತಿಸಿರುವ 4.72 ಲಕ್ಷ ಹಾಗೂ 13.74 ಲಕ್ಷ ಅನರ್ಹ ಫಲಾನುಭವಿಗಳಿಂದಾಗಿ ಅರ್ಹ ಫಲಾನುಭವಿಗಳ ಸಂಖ್ಯೆಯು 4.35 ಕೋಟಿಗೆ ಇಳಿದಂತಾಗಿದೆ. ಹೀಗಾಗಿ ಸರ್ಕಾರಕ್ಕೂ ಒಟ್ಟು 28 ಕೋಟಿ ರೂ. ಉಳಿತಾಯ ಆದಂತಾಗಿದೆ.
ಪ್ರಸ್ತುತ ಬಿಪಿಎಲ್ ಕಾರ್ಡ್ ಪಡೆಯಲು ಇರುವ ವಾರ್ಷಿಕ ಆದಾಯ ಮಿತಿಯನ್ನು 1.20 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆಯೂ ಬೇಕಾಗುತ್ತದೆ. ಇಲ್ಲದಿದ್ದರೆ, ರಾಜ್ಯ ಸರ್ಕಾರ ನೀಡಿರುವ ಕೆಲವೇ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗುವ ಆತಂಕವಿದ್ದು, ಇನ್ನಷ್ಟು ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಗಳನ್ನೂ ತಳಿ ಹಾಕುವಂತಿಲ್ಲ.
ಪ್ರಮುಖ ಕಾರಣಗಳು ಏನು?
1. ಇ-ಕೆವೈಸಿ (e-KYC) ಅಪ್ಡೇಟ್ ಮಾಡದಿರುವುದು:
ಅನ್ನಭಾಗ್ಯ ಮತ್ತು ಪಡಿತರ ಚೀಟಿ ಹೊಂದಿರುವವರು ನಿಯಮಿತವಾಗಿ ತಮ್ಮ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಹಲವು ಬಾರಿ ಗಡುವು ನೀಡಿದರೂ ಸುಮಾರು 21.63 ಲಕ್ಷ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಿಲ್ಲ ಅಥವಾ ಇ-ಕೆವೈಸಿ ಪೂರ್ಣಗೊಳಿಸಿಲ್ಲ. ಇವರನ್ನು ‘ನಿಷ್ಕ್ರಿಯ’ ಫಲಾನುಭವಿಗಳು ಎಂದು ಗುರುತಿಸಿ ಪಟ್ಟಿಯಿಂದ ಹೊರಗಿಡಲಾಗಿದೆ.
2. ಅನರ್ಹ ಪಡಿತರ ಚೀಟಿದಾರರ ಪತ್ತೆ:
ಸರ್ಕಾರದ ಅಂಕಿಅಂಶಗಳ ಪ್ರಕಾರ, ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಮತ್ತು ಐಷಾರಾಮಿ ವಾಹನ ಹೊಂದಿರುವವರು ಕೂಡ ‘ಬಿಪಿಎಲ್’ (BPL) ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದೆ. ಇಂತಹ ಅನರ್ಹರನ್ನು ಗುರುತಿಸಿ ಯೋಜನೆಯಿಂದ ಕೈಬಿಡುವುದು ಕೇಂದ್ರದ ಉದ್ದೇಶವಾಗಿದೆ.
3. ಮರಣ ಹೊಂದಿದವರು ಮತ್ತು ವಲಸೆ ಹೋದವರು:
ಹಲವು ವರ್ಷಗಳಿಂದ ಪಡಿತರ ಪಡೆಯದವರು, ಮರಣ ಹೊಂದಿದವರು ಅಥವಾ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿಯೂ ಪಡಿತರ ಚೀಟಿ ಹೊಂದಿರುವವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಇದಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ಅನಗತ್ಯ ಹೊರೆ ತಪ್ಪಲಿದೆ.
4. ಕೇಂದ್ರದ ಹೊಸ ಮಾನದಂಡಗಳು:
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (NFSA) ಕೇಂದ್ರ ಸರ್ಕಾರವು ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸುತ್ತಿದೆ. ಹೊಸ ತಂತ್ರಜ್ಞಾನ ಬಳಸಿ ಪಡಿತರ ಚೀಟಿಗಳ ನೈಜತೆಯನ್ನು ಪರಿಶೀಲಿಸಿದಾಗ ಲಕ್ಷಾಂತರ ಕಾರ್ಡ್ಗಳು ಮಾನದಂಡಕ್ಕೆ ಮೀರಿರುವುದು ಕಂಡುಬಂದಿದೆ.








