Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

01/04/2026 9:27 AM

SHOCKING : ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ಸೇವನೆ: ಮಹಿಳೆಯ ತುಟಿಗಳಲ್ಲಿ ಊತ, ಮಗನಿಗೆ ಅತಿಸಾರ!

01/04/2026 9:22 AM

BREAKING: ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್ಕೌಂಟರ್: ಓರ್ವ ಭಯೋತ್ಪಾದಕ ಹತ್ಯೆ !

01/04/2026 9:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ಸೇವನೆ: ಮಹಿಳೆಯ ತುಟಿಗಳಲ್ಲಿ ಊತ, ಮಗನಿಗೆ ಅತಿಸಾರ!
INDIA

SHOCKING : ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ಸೇವನೆ: ಮಹಿಳೆಯ ತುಟಿಗಳಲ್ಲಿ ಊತ, ಮಗನಿಗೆ ಅತಿಸಾರ!

By kannadanewsnow5701/04/2026 9:22 AM

ನವದೆಹಲಿ: ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಪ್ರೀಮಿಯಂ ರೈಲು ಎಂದು ಕರೆಸಿಕೊಳ್ಳುವ ‘ವಂದೇ ಭಾರತ್ ಎಕ್ಸ್ಪ್ರೆಸ್’ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಅದು ವೇಗಕ್ಕಲ್ಲ, ಬದಲಾಗಿ ಪ್ರಯಾಣಿಕರಿಗೆ ನೀಡಲಾದ ಕಳಪೆ ಗುಣಮಟ್ಟದ ಆಹಾರದ ವಿವಾದಕ್ಕೆ ಸಂಬಂಧಿಸಿದೆ.

ವಾರಣಾಸಿಯಿಂದ ದಿಯೋಘರ್ಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ರೈಲಿನಲ್ಲಿ ನೀಡಲಾದ ಆಹಾರ ಸೇವಿಸಿ ಗಂಭೀರ ಅಲರ್ಜಿಗೆ ತುತ್ತಾಗಿದ್ದಾರೆ. ಈ ಘಟನೆಯ ಫೋಟೋಗಳು ಮತ್ತು ಮೆಡಿಕಲ್ ರಿಪೋರ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೈಲ್ವೆ ಇಲಾಖೆಯ ನಿದ್ದೆ ಗೆಡಿಸಿದೆ.

ನಡೆದಿದ್ದೇನು?
ಮಹಿಳಾ ಪ್ರಯಾಣಿಕರೊಬ್ಬರು ಮಾರ್ಚ್ 27 ರಂದು ವಾರಣಾಸಿಯಿಂದ ದಿಯೋಘರ್ಗೆ ರೈಲು ಸಂಖ್ಯೆ 22500 ವಂದೇ ಭಾರತ್ ಎಕ್ಸ್ಪ್ರೆಸ್ನ E1 ಕೋಚ್ನಲ್ಲಿ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನದ ಊಟವನ್ನು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಅವರ ತುಟಿಗಳು ತೀವ್ರವಾಗಿ ಊದಿಕೊಂಡಿವೆ ಮತ್ತು ಇಡೀ ದೇಹದಲ್ಲಿ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಂಡಿವೆ.

ತಮ್ಮ ಪರಿಸ್ಥಿತಿಯ ಫೋಟೋಗಳನ್ನು ಹಾಗೂ ವೈದ್ಯರು ನೀಡಿದ ಚಿಕಿತ್ಸೆಯ ದಾಖಲೆಗಳನ್ನು ಅವರು ‘X’ (ಟ್ವಿಟರ್) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. “ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಪರಿಸ್ಥಿತಿ ಇನ್ನೂ ಹದಗೆಡುತ್ತಿತ್ತು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷದ ಮಗನಿಗೂ ಆರೋಗ್ಯ ವ್ಯತ್ಯಯ
ಕೇವಲ ಮಹಿಳೆಯಷ್ಟೇ ಅಲ್ಲದೆ, ಅವರ ಜೊತೆಯಲ್ಲಿದ್ದ ಎರಡು ವರ್ಷದ ಮಗನಿಗೂ ಈ ಆಹಾರದಿಂದ ಆರೋಗ್ಯದ ತೊಂದರೆಯಾಗಿದೆ. ಮಗುವಿಗೆ ಪ್ರಯಾಣದ ಅವಧಿಯಲ್ಲೇ ವಿಪರೀತ ಅತಿಸಾರ (Diarrhea) ಶುರುವಾಗಿದ್ದು, ಮಗು ತುಂಬಾನೇ ಹೈರಾಣಾಗಿದೆ ಎಂದು ಮಹಿಳೆ ದೂರಿದ್ದಾರೆ. ಅಲ್ಲದೆ, ರೈಲಿನಲ್ಲಿ ನೀಡಲಾದ ಕುಡಿಯುವ ನೀರಿನ ರುಚಿಯೂ ಕೂಡ ಭಿನ್ನವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

IRCTC ನೀಡಿದ ಸ್ಪಷ್ಟನೆ ಏನು?
ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಐಆರ್ಸಿಟಿಸಿ (IRCTC), ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.

“ಅಂದು ಬಡಿಸಲಾದ ಆಹಾರವನ್ನು ತಪಾಸಣೆ ಮಾಡಲಾಗಿತ್ತು ಮತ್ತು ಅದರ ಗುಣಮಟ್ಟ ತೃಪ್ತಿಕರವಾಗಿತ್ತು.”

“ಅದೇ ರೈಲಿನಲ್ಲಿ ಪ್ರಯಾಣಿಸಿದ ಬೇರೆ ಯಾವುದೇ ಪ್ರಯಾಣಿಕರಿಂದ ಇಂತಹ ದೂರುಗಳು ಬಂದಿಲ್ಲ” ಎಂದು ಇಲಾಖೆ ಹೇಳಿದೆ.

ಆದರೆ, ಐಆರ್ಸಿಟಿಸಿಯ ಈ ಉತ್ತರಕ್ಕೆ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದು, “ಬೇರೆಯವರಿಗೆ ತೊಂದರೆ ಆಗದಿರಬಹುದು, ಆದರೆ ನನ್ನ ಮತ್ತು ನನ್ನ ಮಗನ ಆರೋಗ್ಯದ ಮೇಲೆ ಈ ಆಹಾರ ಕೆಟ್ಟ ಪರಿಣಾಮ ಬೀರಿದೆ” ಎಂದು ವಾದಿಸಿದ್ದಾರೆ. ಸದ್ಯ ಐಆರ್ಸಿಟಿಸಿ ಮಹಿಳೆಯಿಂದ ಹೆಚ್ಚಿನ ಮಾಹಿತಿ ಪಡೆದಿದ್ದು, ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.

@IRCTCofficial @RailwaySeva @RailMinIndia @K44869654Kumar Worst quality food provided on vande bharat express and insensitive attitude of staff towards complaints. This is my medical prescription describing severe allergy after consuming food in Vande Bharat 22500. pic.twitter.com/ddfg2mMUC9

— The_Mediocre_Fille (@AyushiS54377868) March 31, 2026

@RailwaySeva @drmljn Kindly look into the matter urgently. I was travelling in Vande Bharat 22500 E1 coach on 27.3.26 and after consuming lunch, I developed a severe allergy which could have been life threatening. My Son (2 yrs) too developed diarrhoea. (Photo attached for ref) pic.twitter.com/KBdyppDq4m

— The_Mediocre_Fille (@AyushiS54377868) March 30, 2026

SHOCKING: Poor food consumed on Vande Bharat train: Woman's lips swollen son has diarrhea!
Share. Facebook Twitter LinkedIn WhatsApp Email

Related Posts

BREAKING: ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್ಕೌಂಟರ್: ಓರ್ವ ಭಯೋತ್ಪಾದಕ ಹತ್ಯೆ !

01/04/2026 9:17 AM1 Min Read

ಇರಾನ್‌ನ ಹೊಸ ಸುಪ್ರೀಂ ಲೀಡರ್ ಎಲ್ಲಿದ್ದಾರೆ? ರಷ್ಯಾದಿಂದ ಅಧಿಕೃತ ಮಾಹಿತಿ ಪ್ರಕಟ: ‘ಮೊಜ್ತಬಾ ಖಮೇನಿ ಈಗ ಇರುವುದು…’

01/04/2026 9:03 AM1 Min Read

ಮುಂದುವರೆದ ಟೆಕ್ ಕಂಪನಿಗಳ ಉದ್ಯೋಗ ಕಡಿತ: 12000 ಉದ್ಯೋಗಿಗಳನ್ನು ವಜಾಗೊಳಿಸಿದ Oracle | Lay offs

01/04/2026 8:52 AM1 Min Read
Recent News

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

01/04/2026 9:27 AM

SHOCKING : ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ಸೇವನೆ: ಮಹಿಳೆಯ ತುಟಿಗಳಲ್ಲಿ ಊತ, ಮಗನಿಗೆ ಅತಿಸಾರ!

01/04/2026 9:22 AM

BREAKING: ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್ಕೌಂಟರ್: ಓರ್ವ ಭಯೋತ್ಪಾದಕ ಹತ್ಯೆ !

01/04/2026 9:17 AM

ALERT : ನೀವು ಬಳಸುವ ದಿಂಬನ್ನು ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು? ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ!

01/04/2026 9:15 AM
State News
KARNATAKA

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

By kannadanewsnow5701/04/2026 9:27 AM KARNATAKA 2 Mins Read

ಬೆಂಗಳೂರು: ಹೊಸ ಆರ್ಥಿಕ ವರ್ಷದ ಆರಂಭದ ದಿನವಾದ ಏಪ್ರಿಲ್ 1ರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ. ವಿದ್ಯುತ್, ನೀರು ಮತ್ತು…

ALERT : ನೀವು ಬಳಸುವ ದಿಂಬನ್ನು ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು? ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ!

01/04/2026 9:15 AM

ಡೈಲಿಹಂಟ್ ಮಾತೃಸಂಸ್ಥೆ ‘ವರ್ಸ್ ಇನ್ನೋವೇಶನ್’ ಆಡಳಿತ ಮಂಡಳಿಗೆ ಪಿ.ಆರ್. ರಮೇಶ್ ನೇಮಕ

01/04/2026 9:09 AM

ಜಂತುಹುಳು ಸಮಸ್ಯೆ ನಿವಾರಣೆ: ಇಲ್ಲಿದೆ ಪರಿಣಾಮಕಾರಿ ಮನೆಮದ್ದು ಮತ್ತು ಚಿಕಿತ್ಸೆ!

01/04/2026 9:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.